See also 1hop  2hop  4hop
3hop ಹಾಪ್‍
ಕ್ರಿಯಾಪದ
(ವರ್ತಮಾನ ಕೃದಂತ hopping, ಭೂತಕೃದಂತಮತ್ತು ಭೂತರೂಪ hopped)
ಸಕರ್ಮಕ ಕ್ರಿಯಾಪದ
  1. (ಹಳ್ಳ, ಕಾಲುವೆ, ಮೊದಲಾದವನ್ನು) ಹಾರು; ಲಂಘಿಸು; ನೆಗೆದು ದಾಟು.
  2. (ಆಡುಮಾತು) (ವಾಹನದೊಳಕ್ಕೆ) ನೆಗೆ; ಹಾರು; ನೆಗೆದು ಏರು.
  3. (ಆಡುಮಾತು) (ವಾಹನದೊಳಕ್ಕೆ) ನೆಗೆದು ಹತ್ತಿ ಸವಾರಿ ಪಡೆದುಕೊ, ಪ್ರಯಾಣಗಿಟ್ಟಿಸಿಕೊ.
  4. ಒಂದು ಸ್ಥಳದಿಂದ ಮತ್ತೊಂದಕ್ಕೆ ಬೇಗ ಹೋಗು, ನೆಗೆ, ಧಾವಿಸು, ಹಾರು, ಬೇಗ ಪ್ರಯಾಣ ಮಾಡು: hopped to Delhi for a day ಒಂದು ದಿನದ ಮಟ್ಟಿಗೆ ಡೆಲ್ಲಿಗೆ ಧಾವಿಸಿದ.
ಅಕರ್ಮಕ ಕ್ರಿಯಾಪದ
  1. (ಮನುಷ್ಯ) ಒಂಟಿಕಾಲಿನಲ್ಲಿ ನೆಗೆ, ಎಗರು.
  2. (ಪ್ರಾಣಿಗಳ ವಿಷಯದಲ್ಲಿಏಕಕಾಲದಲ್ಲಿ ಎಲ್ಲ ಕಾಲುಗಳಿಂದಲೂ) ನೆಗೆ; ಜಿಗಿ; ಕುಪ್ಪಳಿಸು.
ಪದಗುಚ್ಛ
  1. hop in (ಆಡುಮಾತು) (ಮೋಟಾರ್‍ ಕಾರನ್ನು) ಪ್ರವೇಶಿಸು; ಹೊಗು; ಹತ್ತು.
  2. hop it (ಅಶಿಷ್ಟ) (ಬೇಗನೆ) ಹೊರಟುಹೋಗು; ತೊಲಗಿ ಹೋಗು.
  3. hop out (ಮೋಟಾರ್‍ಕಾರ್‍ನಿಂದ) ಇಳಿ; ಹೊರಬರು; ಹೊರಕ್ಕೆ ಧುಮುಕು.
  4. wave-hopping ನೀರಿನಿಂದ ಸ್ವಲ್ಪವೇ ಎತ್ತರದಲ್ಲಿ (ವಿಮಾನದಲ್ಲಿ) ಹಾರಾಡುವುದು.
ನುಡಿಗಟ್ಟು
  1. hopping mad ತೀರ ಕೋಪಗೊಂಡಿರುವ; ಬಹಳ ಸಿಟ್ಟಾದ.
  2. hop the twig(or stick) (ಅಶಿಷ್ಟ)
    1. ಥಟ್ಟನೆ ಹೊರಟು ಹೋಗು.
    2. ಥಟ್ಟನೆ ಸತ್ತುಹೋಗು, ಸಾಯು.