See also 2hoop  3hoop  4hoop
1hoop ಹೂಪ್‍
ನಾಮವಾಚಕ
  1. (ಮುಖ್ಯವಾಗಿ ಪೀಪಾಯಿಯ ಮರದ ನಿಡುಪಟ್ಟಿಗಳನ್ನು ಒಟ್ಟಿಗೆ ಬಿಗಿಯುವ, ಲೋಹ, ಮರ, ಮೊದಲಾದವುಗಳ) ದುಂಡುಕಟ್ಟು; ದುಂಡುಪಟ್ಟಿ; ಪಟ್ಟಿಯ ಬಳೆ.
  2. (ಮಕ್ಕಳು ಆಟಕ್ಕಾಗಿ ಉರುಳಿಸಿಕೊಂಡು ಹೋಗುವ) ಮರದ ಯಾ ಕಬ್ಬಿಣದ ಬಳೆ, ಗಾಲಿ, ಚಕ್ರ.
  3. ಲಂಗದ ಉಬ್ಬುಪಟ್ಟಿ; ಹೆಂಗಸರ ಲಂಗವನ್ನು ಸುತ್ತಲೂ ಉಬ್ಬಿಸುವ, ಇಲಾಸ್ಟಿಕ್‍ ಸಾಮಗ್ರಿಯಿಂದ ಮಾಡಿದ ಪಟ್ಟಿ.
  4. ‘ಕ್ರೋಕೇ’ (ಆಟದಲ್ಲಿ ಬಳಸುವ, ಕಬ್ಬಿಣದ) ಕಮಾನು.
  5. ಸರ್ಕಸ್‍ ಬಳೆ; ಸರ್ಕಸ್ಸಿನ ಆಟಗಾರರು ಯಾ ಪ್ರಾಣಿಗಳು ತೂರಿಹೋಗುವ ದೊಡ್ಡ ಬಳೆ. Figure: hoop-5
  6. (ಯಾವುದೇ ತೆರನ) ಬೆರಳುಂಗುರ.
  7. = hoop petticoat.
ನುಡಿಗಟ್ಟು
  1. go through the hoop(s) ವಿಷಮ ಪರಿಸ್ಥಿತಿಯನ್ನು ಎದುರಿಸು; ಕಠಿನ ಪರೀಕ್ಷೆಗೊಳಪಡು.
  2. to be put through the hoop(s) = ನುಡಿಗಟ್ಟು \((1)\).
See also 1hoop  3hoop  4hoop
2hoop ಹೂಪ್‍
ಸಕರ್ಮಕ ಕ್ರಿಯಾಪದ
  1. ಸುತ್ತುಪಟ್ಟಿಗಳಿಂದ ಬಿಗಿ, ಬಂಧಿಸು.
  2. ದುಂಡುಪಟ್ಟಿಯಿಂದ ಯಾ ಅದರಿಂದಲೋ ಎಂಬಂತೆ – ಸುತ್ತು, ಸುತ್ತುಗಟ್ಟು, ಸುತ್ತುವರಿ.
See also 1hoop  2hoop  4hoop
3hoop ಹೂಪ್‍
ಅಕರ್ಮಕ ಕ್ರಿಯಾಪದ

$^1$whoop ಪದದ ರೂಪಾಂತರ.

See also 1hoop  2hoop  3hoop
4hoop ಹೂಪ್‍
ನಾಮವಾಚಕ

$^2$whoop ಪದದ ರೂಪಾಂತರ.