See also 2hit
1hit ಹಿಟ್‍
ಕ್ರಿಯಾಪದ

(ವರ್ತಮಾನ ಕೃದಂತ hitting ಭೂತರೂಪ ಮತ್ತು ಭೂತಕೃದಂತ hit).

ಸಕರ್ಮಕ ಕ್ರಿಯಾಪದ
    1. (ಕೈಯಿಂದ ಯಾ ಕ್ಷಿಪಣಿಯಿಂದ) ಹೊಡೆ.
    2. (ಚಲಿಸುವ ವಸ್ತುವಿನ ವಿಷಯದಲ್ಲಿಯಾವುದಕ್ಕೇ) ತಾಕು; ತಗುಲು; ಬಡಿ.
    3. (ಒಬ್ಬ ವ್ಯಕ್ತಿ, ಒಂದು ವಸ್ತು ಮೊದಲಾದವುಗಳ ಕಡೆಗೆ) ಗುರಿಯಿಟ್ಟು (ಕ್ಷಿಪಣಿಯಿಂದ) ಹೊಡೆ, ಬಡಿ: hit the window with the ball ಚೆಂಡಿನಿಂದ ಕಿಟಕಿಗೆ ಹೊಡೆದನು.
  1. (ರೂಪಕವಾಗಿ) ನೋವುಂಟುಮಾಡು; ನೋಯಿಸು; ಆಘಾತ, ಧಕ್ಕೆ – ಉಂಟುಮಾಡು: hard hit by money losses ಧನ ನಷ್ಟದಿಂದ ಬಲವಾದ ಧಕ್ಕೆ ತಗುಲಿ.
  2. (ದೇಹದ ಭಾಗವನ್ನು) ಹೊಡೆ; ಚಚ್ಚು; ತಗುಲಿಸಿಕೊ: hit his head on the door-frame ಬಾಗಿಲಿನ ಚೌಕಟ್ಟಿಗೆ ತಲೆ ತಗುಲಿಸಿಕೊಂಡ.
  3. (ಉದ್ದೇಶಿಸಿದ ವಸ್ತುವನ್ನು, ವಿಷಯವನ್ನು, ಗುರಿಯನ್ನು) ಥಟ್ಟನೆ – ಪಡೆ, ಸಾಧಿಸು, ಹಿಡಿ: hit the right answer ಸರಿಯಾದ ಉತ್ತರವನ್ನು ಪಡೆದ, ಕಂಡುಹಿಡಿದhe’s hit the truth at last ಕೊನೆಗೂ ಅವನು ಸತ್ಯವನ್ನು ಕಂಡುಹಿಡಿದtried to hit right tone in his apology ಕ್ಷಮಾಯಾಚನೆಯಲ್ಲಿ ಸರಿಯಾದ ಧ್ವನಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿದ.
  4. (ಆಡುಮಾತು)
    1. ಸಂಧಿಸು; ಎದುರಿಸು; ಎದುರಾಗು: hit a snag ಆತಂಕವೊಂದನ್ನು ಎದುರಿಸು.
    2. ತಲುಪು; ಮುಟ್ಟು: hit an all-time low ಅತ್ಯಂತ ಕೆಳಮಟ್ಟ ತಲುಪು; ಕೆಳಮಟ್ಟಕ್ಕೆ – ಬೀಳು, ಬರು.
    3. (ಮದ್ಯ ಮೊದಲಾದವುಗಳಲ್ಲಿ) ಲೋಲುಪನಾಗು; ಅತ್ಯಾಸಕ್ತಿಯಿಂದ ತೊಡಗು: hit the bottle ಮದ್ಯ ಲೋಲುಪನಾಗು; ಸೀಸೆನಿರತನಾಗು.
  5. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಅಶಿಷ್ಟ) ದರೋಡೆ ಮಾಡು ಯಾ ಕೊಲ್ಲು; ಸುಲಿಗೆ ಮಾಡು ಯಾ ಸಾಯಿಸು.
  6. ಬಲವಾಗಿ ತಗುಲು; ಬಲವಾಗಿ ತಟ್ಟು: the seriousness of the situation only hit him later ಪರಿಸ್ಥಿತಿಯ ತೀವ್ರತೆ ಅವನಿಗೆ ಆಮೇಲೆ ಬಲವಾಗಿ ತಟ್ಟಿತು.
  7. (ಕಿಡೆ)
    1. (ಕ್ರಿಕೆಟ್‍) (ರನ್ನುಗಳನ್ನು) ಹೊಡೆ; ಗಳಿಸು: hit sixty runs ಅರವತ್ತು ರನ್ನುಗಳನ್ನು ಹೊಡೆದ.
    2. (ಮುಖ್ಯವಾಗಿ ನಿರ್ದಿಷ್ಟ ಸಂಖ್ಯೆ ರನ್ನುಗಳಿಗೆ) (ಬೋಲರ್‍ನಿಂದ) ಬೋಲ್‍ ಮಾಡಿದ ಚೆಂಡನ್ನು ಹೊಡೆ: hit him for four ನಾಲ್ಕು ರನ್ನು ಗಳಿಸುವಂತೆ ಆ ಬೋಲರನ ಚೆಂಡನ್ನು ಹೊಡೆ.
    3. (ಮುಖ್ಯವಾಗಿ ನಿರ್ದಿಷ್ಟ ಸಂಖ್ಯೆಯ ರನ್ನುಗಳಿಗೆ) ಚೆಂಡನ್ನು ಹೊಡೆ: hit four ನಾಲ್ಕು ರನ್ನು ಗಳಿಸುವಂತೆ ಹೊಡೆ.
  8. ನಿಕಟಸಾದೃಶ್ಯ – ಸಾಧಿಸು, ತರು; ಮೂಲಕ್ಕೆ ತೀರ ಸಮೀಪವಾಗುವಂತೆ, ಸದೃಶವಾಗುವಂತೆ ಅನುಕರಿಸು: the most difficult thing in painting is to hit the exact colour of the human face ವರ್ಣಚಿತ್ರದಲ್ಲಿ ಅತಿ ಕಷ್ಟದ ಕೆಲಸವೆಂದರೆ ಮಾನವನ ಮುಖದ ನಿಜವಾದ ಬಣ್ಣವನ್ನು ಅನುಕರಿಸುವುದು.
  9. ಸರಿಹೊಂದು; ಹೊಂದಿಕೆಯಾಗು: the new shirt will hit his fancy ಈ ಹೊಸ ಷರ್ಟು ಅವನ ಅಭಿರುಚಿಗೆ ಹೊಂದಿಕೊಳ್ಳುತ್ತದೆ.
ಅಕರ್ಮಕ ಕ್ರಿಯಾಪದ
  1. (ಯಾವುದಕ್ಕೇ) ತಗುಲು; ತಾಕು; ಡಿಕ್ಕೆ ಹೊಡೆ.
  2. (ಒಂದಕ್ಕೆ, ಒಂದರತ್ತ) ಹೊಡೆ; ಏಟು ಹಾಕು (ರೂಪಕವಾಗಿ ಸಹ).
ಪದಗುಚ್ಛ
  1. hit and run ಕ್ರಿಯಾಪದ(ದಾಳಿಕೋರ, ವಾಹನ ಚಾಲಕ, ಮೊದಲಾದವರ ವಿಷಯದಲ್ಲಿ) ಹೊಡೆದೋಡು; ಆಕಸ್ಮಿಕವಾಗಿ ಯಾ ಉದ್ದೇಶಪೂರ್ವಕವಾಗಿ ಹಾಳುಗೆಡವಿ ನಷ್ಟವುಂಟುಮಾಡಿ, ಡಿಕ್ಕಿಹೊಡೆಸಿ ಕೂಡಲೆ ಓಡಿಹೋಗು, ಪರಾರಿಯಾಗು.
  2. hit-and-run ( ಗುಣವಾಚಕವಾಗಿ) ಡಿಕ್ಕಿಹೊಡೆಸಿ (ನಿಲ್ಲದೆ) ಪರಾರಿಯಾಗುವ; ದಾಳಿ ನಡೆಸಿ ಕೂಡಲೇ ಹಿಂದಿರುಗುವ: a hit-and-run driver ಡಿಕ್ಕಿ ಹೊಡೆದು ಪರಾರಿಯಾಗುವ ಚಾಲಕa hit-and-run raider ದಾಳಿ ನಡೆಸಿ ಹಿಂದಿರುಗುವ ದಾಳಿಕಾರ ವಿಮಾನ.
  3. hit-or-miss (ಆಡುಮಾತು) ಅಲಕ್ಷ್ಯದ; ಬೇಜವಾಬ್ದಾರಿಯ; ಹೇಗೆ ಹೇಗೋ; ಆದರಾಯಿತು ಹೋದರೆ ಹೋಯಿತು ಎನ್ನುವ; ಸಿಕ್ಕಿದರೆ ಸಿಕ್ಕಲಿ, ಇಲ್ಲದಿದ್ದರೆ ಬಿಡಲಿ ಎಂಬ.
  4. hit wicket (ಕ್ರಿಕೆಟ್‍) ತಾನೇ ವಿಕೆಟ್ಟಿಗೆ ಹೊಡೆದ; ಸ್ವಯಂ, ಸ್ವತಃ ವಿಕೆಟ್ಟುರುಳಿಸಿದ: ಬ್ಯಾಟು, ಮೈ, ಮೊದಲಾದವನ್ನು ತಾನೇ ವಿಕೆಟ್ಟಿಗೆ ತಗುಲಿಸಿ ಅದನ್ನು ಕೆಡವಿ ಔಟಾಗು(ವುದು).
ನುಡಿಗಟ್ಟು
  1. hit back ಹಿಂದಿರುಗಿ ಹೊಡೆ; ಮುಯ್ಯಿ ತೀರಿಸು; ಪ್ರತೀಕಾರಮಾಡು.
  2. hit below the $^1$belt.
  3. hit for six
    1. (ಕ್ರಿಕೆಟ್‍) ಸಿಕ್ಸರ್‍ – ಹೊಡೆ, ಎತ್ತು; ಆರು ರನ್‍ ಗಳಿಸುವ ಹೊಡೆತ ಬಾರಿಸು.
    2. (ವಾದ ಮೊದಲಾದಗಳಲ್ಲಿ) ಸೋಲಿಸು.
  4. hit home ಒಳ್ಳೆಯ, ಹಿತಕರವಾದ ಪರಿಣಾಮವನ್ನು ಉಂಟುಮಾಡು.
  5. hit it ಸರಿಯಾಗಿ ಊಹಿಸು; ಸತ್ಯವನ್ನು ಕರಾರುವಾಕ್ಕಾಗಿ ಹೇಳು; ಗುರಿ ಹೊಡೆದಂತೆ ಹೇಳು.
  6. hit it off (ಒಬ್ಬರೊಡನೆ ಯಾ ಪರಸ್ಪರ) ಹೊಂದಿಕೊಂಡರು; ಅನ್ೋನ್ಯವಾಗಿರು; ಸರಿಹೊಂದಿಕೊ: they hit it of well ಅವರು ಚೆನ್ನಾಗಿ ಹೊಂದಿಕೊಂಡರು.
  7. hit one’s fancy ಮನಸ್ಸಿಗೆ ಹಿಡಿಸು.
  8. hit out
    1. ಬಲವಾಗಿ – ಹೊಡೆ, ಚಚ್ಚು.
    2. ತೀವ್ರವಾಗಿ ಖಂಡಿಸು: hit out against his critics ತನ್ನ ಟೀಕಾಕಾರರನ್ನು ತೀವ್ರವಾಗಿ ಖಂಡಿಸಿದ.
  9. hit the hay (or sack) (ಆಡುಮಾತು) ಮಲಗು; ನಿದ್ದೆಮಾಡು.
  10. hit the 1headlines.
  11. hit the (right) nail on the head = ನುಡಿಗಟ್ಟು \((5)\).
  12. hit the road (ಅಮೆರಿಕನ್‍ ಪ್ರಯೋಗ trail) (ಅಶಿಷ್ಟ) ಹೊರಟುಹೋಗು; ನಿಕಲಾಯಿಸು; ಜಾಗ ಖಾಲಿಮಾಡು.
  13. hit up(on) (ಅರಸುತ್ತಿರುವುದನ್ನು) ಮುಖ್ಯವಾಗಿ ಅದೃಷ್ಟವಶಾತ್‍ ಯಾ ಅನಿರೀಕ್ಷಿತವಾಗಿ ಪಡೆ, ಸಾಧಿಸು, ಹಿಡಿ: hit up(on) a solution to the problem ಸಮಸ್ಯೆಗೆ ಪರಿಹಾರವೊಂದನ್ನು ಅನಿರೀಕ್ಷಿತವಾಗಿ ಕಾಣು, ಪಡೆ.
See also 1hit
2hit ಹಿಟ್‍
ನಾಮವಾಚಕ
    1. ಏಟು; ಪೆಟ್ಟು; ಹೊಡೆತ.
    2. ಸಂಘಟ್ಟನೆ; ಡಿಕ್ಕಿ; ಹೊಡೆತ.
  1. ಗುರಿಯೇಟು; ಗುರಿಹೊಡೆತ; ಗುರಿತಾಕಿದ ಬಂದೂಕು ಮೊದಲಾದವುಗಳ ಹೊಡೆತ.
  2. (ಆಡುಮಾತು) (ಸಾರ್ವಜನಿಕ ಮನರಂಜನೆ ಕಾರ್ಯಕ್ರಮದಲ್ಲಿ) ಜನಪ್ರಿಯ ಯಶಸ್ಸು.
  3. (ರೂಪಕವಾಗಿ) ಚುಚ್ಚು ಮಾತು; ವ್ಯಂಗ್ಯೋಕ್ತಿ; ವಾಕ್ಪ್ರಹಾರ: that was a hit at me ಅದು ನನ್ನನ್ನು ಕುರಿತ ಚುಚ್ಚುಮಾತು.
  4. ಅದೃಷ್ಟದ ಹೊಡೆತ.
  5. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. ಕೊಲೆ ಅಥವಾ ಘೋರ ಅಪರಾಧ.
    2. ಮಾದಕವಸ್ತುವಿನ ಚುಚ್ಚುಮದ್ದು.
  6. ಸಫಲ ಪ್ರಯತ್ನ.
ನುಡಿಗಟ್ಟು

make a hit

  1. ಯಶಸ್ವಿಯಾಗು; ಸಫಲವಾಗು.
  2. ಜನಪ್ರಿಯವಾಗು; ಜನಾದರಣೀಯವಾಗು.