Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
belt
1
belt
ಬೆಲ್ಟ್
ನಾಮವಾಚಕ
(ಚರ್ಮ ಮೊದಲಾದವುಗಳಿಂದ ಮಾಡಿದ) ಬೆಲ್ಟು; ನಡುಪಟ್ಟಿ; ನಡುಕಟ್ಟು; ಡಾಬು; ಒಡ್ಯಾಣ.
ಎದೆಪಟ್ಟಿ; ಡವಾಲಿ.
(ಅರ್ಲ್ ಯಾ ನೈಟ್ ಪದವೀಧರರು, ಬಾಕ್ಸಿಂಗ್ ಯಾ ಜೂಡೋಗಳಲ್ಲಿ ಅಗ್ರಗಣ್ಯರಾದವರು, ಉಚ್ಚಪದವಿಯ ಸಂಕೇತವಾಗಿ ಧರಿಸುವ) ನಡುಕಟ್ಟು; ಸೊಂಟಪಟ್ಟಿ; ಕಟಿಬಂಧ.
(ಯಾವುದೇ ವಸ್ತುವಿನ, ಪ್ರದೇಶದ ಮೇಲೆ ಯಾ ಸುತ್ತಲೂ ಇರುವ ಬಣ್ಣ, ಮರ ಮೊದಲಾದವುಗಳ) ಸುತ್ತುಪಟ್ಟಿ.
ನೆಲಪಟ್ಟೆ; ಭೂಪಟ್ಟೆ; ಉದ್ದವಾಗಿ, ಅಗಲ ಕಡಮೆಯಾಗಿ ಇರುವ ಪ್ರದೇಶ.
ವಲಯ; ಮಂಡಲ; ಪ್ರದೇಶ:
cotton belt
ಹತ್ತಿವಲಯ.
malaria belt
ಮಲೇರಿಯ ಪ್ರದೇಶ.
ಗಾಲಿಪಟ್ಟಿ; ಚಕ್ರಪಟ್ಟಿ; ಯಂತ್ರಗಳಲ್ಲಿ ಚಕ್ರಗಳನ್ನು ಸೇರಿಸುವ ಕೊನೆಯಿಲ್ಲದ ಸುತ್ತುಪಟ್ಟಿ.
(ನೀರಿನ ಮಟ್ಟದ ತಳಕ್ಕಿರುವ ಯುದ್ಧನೌಕೆಯ ಹೊರಮೈಗೆ ಮೆಟ್ಟಿರುವ) ಕಾಪುಹಲಗೆ ಸಾಲು; ರಕ್ಷಾಫಲಕ ಪಂಕ್ತಿ.
ಬಾಹ್ಯವಲಯಮಾರ್ಗ; ಹೊರಸುತ್ತು ರಸ್ತೆ; ನಗರವನ್ನು ಸುತ್ತುವರಿದಿರುವ ರಸ್ತೆ, ರೈಲು ಮಾರ್ಗ ಮೊದಲಾದವು.
ತೋಟಾಪಟ್ಟಿ; ಬಂದೂಕಿನ ತೋಟಾಗಳನ್ನು ಒಯ್ಯಲು ಬಳಸುವ, ಮಡಿಸಬಹುದಾದ ಪಟ್ಟಿ.
(ಅಶಿಷ್ಟ) ಭಾರಿ ಹೊಡೆತ, ಪೆಟ್ಟು, ಏಟು.
ಪದಗುಚ್ಛ
Great and Little Belt
ಬಾಲ್ಟಿಕ್ ಸಮುದ್ರದ ಪ್ರವೇಶನಾಲೆಗಳು.
ನುಡಿಗಟ್ಟು
belt and braces policy
ಇರ್ಕಾಪು ನೀತಿ; ದ್ವಿರಕ್ಷಣ ವ್ಯವಸ್ಥೆ; ದ್ವಿವಿಧ ಭದ್ರತಾ ನೀತಿ; ಎರಡೂ ಬಗೆಯಿಂದ ರಕ್ಷಣೆ ಮಾಡಿಕೊಳ್ಳುವ ಏರ್ಪಾಟು.
hit below the belt
ನಡುವಿನ ಕೆಳಗೆ ಹೊಡೆ; ಧರ್ಮವಿರುದ್ಧವಾಗಿ ಯುದ್ಧ ಮಾಡು.
ನ್ಯಾಯ ಬಿಟ್ಟು ನಡೆದುಕೊ; ನ್ಯಾಯವಿರುದ್ಧವಾಗಿ ವರ್ತಿಸು.
tighten one’s belt
.
under one’s belt.
ಹೊಟ್ಟೆಯಲ್ಲಿ; ಹೊಟ್ಟೆಯ ಒಳಗೆ:
with a couple of drinks under his belt
ಹೊಟ್ಟೆಯಲ್ಲಿ ಒಂದೆರಡು ಗುಟುಕು ಮದ್ಯವನ್ನು ಹಾಕಿಕೊಂಡು.
ಒಬ್ಬನ ವಶದಲ್ಲಿ:
with some secret papers under his belt
ಕೆಲವು ರಹಸ್ಯಪತ್ರಗಳನ್ನು ತನ್ನ ವಶದಲ್ಲಿ (ಗೋಪ್ಯವಾಗಿ) ಇಟ್ಟುಕೊಂಡು.
ಒಬ್ಬನ ಹಿಂದಿನ, ಪೂರ್ವದ – ಬಾಳಿನ; ಅನುಭವದ ಅಂಶವಾಗಿ:
she had three great roles under her belt
ಮೂರು ಮಹಾ ಪಾತ್ರಗಳನ್ನು ಅಭಿನಯಿಸುವ ಯೋಗ ಆಕೆಯ ಬಾಳಿನ ಒಂದು ಭಾಗವಾಗಿತ್ತು.