See also 2here  3here
1here ಹಿಅರ್‍
ಕ್ರಿಯಾವಿಶೇಷಣ
  1. ಇಲ್ಲಿ; ಈ – ಜಾಗದಲ್ಲಿ, ಸ್ಥಳದಲ್ಲಿ, ಸ್ಥಾನದಲ್ಲಿ: put it here ಅದನ್ನು ಅಲ್ಲಿಡುwhat is this dog doing here? ಈ ನಾಯಿ ಈ ಜಾಗದಲ್ಲಿ ಏನು ಮಾಡುತ್ತಿದೆ? has lived here for many years ಇಲ್ಲಿ ಅನೇಕ ವರ್ಷಗಳ ಕಾಲ ವಾಸಮಾಡಿದ್ದಾನೆ.comes here every day ಪ್ರತಿನಿತ್ಯ ಇಲ್ಲಿಗೆ ಬರುತ್ತಾನೆ.
  2. (ವ್ಯಕ್ತಿ ಯಾ ವಸ್ತುವಿನ ಸ್ಥಳ ತೋರಿಸಲು ವ್ಯಕ್ತಿಯತ್ತ ಗಮನ ಸೆಳೆಯುವಾಗ) ಇಲ್ಲಿರುವ; ಇಲ್ಲಿರುವಂಥ; ಅಲ್ಲಿರುವ: my son here will show you ಇಲ್ಲಿರುವ ನನ್ನ ಮಗ ನಿನಗೆ ತೋರಿಸುತ್ತಾನೆhere is your coat ಇಲ್ಲಿದೆ ನಿನ್ನ ಕೋಟು.
  3. (ಸಂಭಾಷಣೆ, ವಾದ, ಘಟನೆ, ಪರಿಸ್ಥಿತಿ, ಮೊದಲಾದವುಗಳಲ್ಲಿ) ಇಲ್ಲಿ; ಈ – ಘಟ್ಟದಲ್ಲಿ, ಹಂತದಲ್ಲಿ: I have a question here ಈ ಘಟ್ಟದಲ್ಲಿ ನನ್ನದೊಂದು ಪ್ರಶ್ನೆಯಿದೆhere the speaker paused for a reply ಈ ಹಂತದಲ್ಲಿ ಭಾಷಣಕಾರನು ಉತ್ತರಕ್ಕಾಗಿ ಮಾತು ನಿಲ್ಲಿಸಿದ.
  4. ಈ – ಬಾಳಿನಲ್ಲಿ, ಜನ್ಮದಲ್ಲಿ.
  5. ಈ – ಪ್ರಸ್ತಾವದಲ್ಲಿ, ವಿಷಯದಲ್ಲಿ.
  6. ಈ – ಸ್ಥಳಕ್ಕೆ, ಪ್ರದೇಶಕ್ಕೆ, ಜಾಗಕ್ಕೆ; ಇಲ್ಲಿಗೆ: I don’t belong here ನಾನು ಇಲ್ಲಿಗೆ ಸೇರಿದವನಲ್ಲ; ನಾನು ಇಲ್ಲಿಯವನಲ್ಲcome here ಬಾ ಇಲ್ಲಿ; ಈ ಸ್ಥಳಕ್ಕೆ ಬಾ.
  7. (ಮುಖ್ಯವಾಗಿ ಗಮನ ಸೆಳೆಯುವಾಗ ಯಾ ಪ್ರತಿಭಟನೆ ಸೂಚಿಸುವಾಗ) ಇತ್ತ; ಈ ಕಡೆ; ಇಲ್ಲಿ: look here! ನೋಡಿಲ್ಲಿ! ಇಲ್ಲಿ ನೋಡು!
ಪದಗುಚ್ಛ
  1. here and now ಇದೀಗಲೇ; ಈಗಲೇ; ಈಗಿಂದೀಗಲೇ; ಇಲ್ಲೇ; ತಡಮಾಡದೆ; ಸಾವಕಾಶ ಮಾಡದೆ; ತಕ್ಷಣವೇ; ಕೂಡಲೇ: we must tend to this matter here and now ನಾವು ಈ ವಿಷಯಕ್ಕೆ ಇದೀಗಲೇ ಗಮನ ಕೊಡಬೇಕು.
  2. here and there
    1. ಅಲ್ಲಲ್ಲಿ; ಬೇರೆಬೇರೆ ಸ್ಥಳಗಳಲ್ಲಿ; ಹಲವೆಡೆ; ನಾನಾ ಸ್ಥಳಗಳಲ್ಲಿ: he worked here and there ಅವನು ಬೇರೆಬೇರೆ ಸ್ಥಳಗಳಲ್ಲಿ ಕೆಲಸಮಾಡಿದನು.
    2. ಅಲ್ಲಿ ಇಲ್ಲಿ; ಇಲ್ಲೂ ಅಲ್ಲೂ: we went here and there in the darkness ನಾವು ಕತ್ತಲಲ್ಲಿ ಅಲ್ಲೂಇಲ್ಲೂ ಸುತ್ತಾಡಿದೆವು.
  3. here below ಇಲ್ಲಿ; ಇಹಲೋಕದಲ್ಲಿ; ಇಹಜೀವನದಲ್ಲಿ.
  4. here goes (ಆಡುಮಾತು) (ಒಂದು ಧೈರ್ಯದ ಕೆಲಸಮಾಡಲು ತೊಡಗಿದಾಗ ಮಾಡುವ ಉದ್ಗಾರ) ಇಗೋ ನೋಡು, ಆಯಿತು!: since it must be done, here goes ಇದನ್ನು ಮಾಡಲೇಬೇಕಾಗಿರುವುದರಿಂದ, ಇಗೋ (ನೋಡು) ಶುರುಮಾಡಿಯೇಬಿಟ್ಟೆ!
  5. here’s a health to = ಪದಗುಚ್ಛ \((6)\).
  6. here’s to (ಸ್ವಸ್ತಿಪಾನ ಮಾಡುವಾಗ) ಇಗೋ! ಸ್ವಸ್ತಿಪಾನ!
  7. here, there and everywhere ಎಲ್ಲೆಲ್ಲೂ; ಪ್ರತಿಯೊಂದು ಜಾಗದಲ್ಲಿಯೂ: we were soon scattered here, there and everywhere ನಾವು ಬೇಗ ಎಲ್ಲ ಕಡೆಗೂ ಚದುರಿದೆವು.
  8. here today, gone tomorrow ಇವತ್ತಿದ್ದರೆ ನಾಳೆ ಇಲ್ಲ; ಕೇವಲ ಕ್ಷಣಿಕ; ಕ್ಷಣಭಂಗುರ; ಶಾಶ್ವತವಲ್ಲ; ಸ್ಥಿರವಲ್ಲ.
  9. here we go again (ಆಡುಮಾತು) (ಮುಖ್ಯವಾಗಿ ಅಹಿತಕರವಾದ ಘಟನೆಗಳ ವಿಷಯದಲ್ಲಿ) ತಿರುಗಿ ಅದೇ ಸ್ಥಿತಿ; ತಿರುಗಿ ಯಥಾಪ್ರಕಾರ; ಮತ್ತೆ ಅದೇ ಹೊಲಸು ಫಜೀತಿ; ತಿರುಗಿ ಶುರು ಆಯ್ತಪ್ಪ! ತಗೋ, ಮತ್ತೆ ಅದೇ! ಮತ್ತೆ ಅದೇ ಪಾಡು.
  10. here we are(ಆಡುಮಾತು) (ತಲುಪಬೇಕಾದ ಸ್ಥಳ ತಲುಪಿದಾಗ ಹೇಳುವಾಗ) ಬಂದೇಬಿಟ್ಟೆವು; ಬಂದಿಳಿದೆವು.
  11. here you are (ಯಾವುದೇ ವಸ್ತುವನ್ನು ಒಬ್ಬರಿಗೆ ಕೊಡುವಾಗ ಹೇಳುವ ಮಾತು) ಇದೋ ತಗೊ.
  12. neither here nor there.
    1. ಅಪ್ರಸಕ್ತ; ವಿಷಯಕ್ಕೆ ಸಂಬಂಧಪಡದ.
    2. ಅಮುಖ್ಯ; ಗಣನೆಗೆ ಬರದ; ಲೆಕ್ಕಕ್ಕಿಲ್ಲದ: the fact that her family has no money is neither here nor there ಅವಳ ಕುಟುಂಬಕ್ಕೆ ಹಣವಿಲ್ಲವೆಂಬ ಸಂಗತಿ ಅಮುಖ್ಯ.
See also 1here  3here
2here ಹಿಅರ್‍
ನಾಮವಾಚಕ
  1. ಈ – ಸ್ಥಳ, ಎಡೆ, ಜಾಗ, ಪ್ರದೇಶ: come over here ಇಲ್ಲಿಬಾ; ನನ್ನ ಬಳಿಗೆ ಬಾ.
  2. ಈ – ಪ್ರಪಂಚ, ಲೋಕ: here and the hereafter ಇಹಲೋಕ ಮತ್ತು ಪರಲೋಕ.
  3. ಈ – ಬದುಕು, ಬಾಳು; ಇಹಜೀವನ.
  4. ವರ್ತಮಾನ ಕಾಲ.
ಪದಗುಚ್ಛ
  1. from here ಇಲ್ಲಿಂದ.
  2. near here ಇಲ್ಲಿಗೆ ಹತ್ತಿರ, ಬಳಿ: do you live near here ನೀನು ಇಲ್ಲೇ ಹತ್ತಿರ ವಾಸಿಸುತ್ತೀಯಾ? ನಿಮ್ಮ ಮನೆ ಇಲ್ಲೇ ಹತ್ತಿರದಲ್ಲಿಯೇ ಇದೆಯೇ?
  3. to here ಇಲ್ಲಿಗೆ.
See also 1here  2here
3here ಹಿಅರ್‍
ಭಾವಸೂಚಕ ಅವ್ಯಯ
  1. (ಗಮನ ಸೆಳೆಯುವ, ಆಜ್ಞೆ ಮಾಡುವ, ಬುದ್ಧಿವಾದ ಹೇಳುವಾಗ ಯಾ ಎಚ್ಚರಿಕೆ ನೀಡುವಾಗ ಬಳಸುವ ಪದವಾಗಿ) ಈಗ; ಇದೊ; ನೋಡು; ಸರಿ; ಆಗಲಿ: here, let me try it ಈಗ, ನಾನು ಪ್ರಯತ್ನಿಸುತ್ತೇನೆhere don’t cry ನೋಡು, ಅಳಬೇಡ.
  2. (ಹಾಜರಿ ಕೂಗುವಾಗ ಉತ್ತರವಾಗಿ ಹೇಳುವ) ಇಲ್ಲಿ! ಇದ್ದೇನೆ! ಬಂದಿದ್ದೇನೆ! ಹಾಜರ್‍!