See also 2here  3here
1here ಹಿಅರ್‍
ಕ್ರಿಯಾವಿಶೇಷಣ
  1. ಇಲ್ಲಿ; ಈ – ಜಾಗದಲ್ಲಿ, ಸ್ಥಳದಲ್ಲಿ, ಸ್ಥಾನದಲ್ಲಿ: put it here ಅದನ್ನು ಅಲ್ಲಿಡುwhat is this dog doing here? ಈ ನಾಯಿ ಈ ಜಾಗದಲ್ಲಿ ಏನು ಮಾಡುತ್ತಿದೆ? has lived here for many years ಇಲ್ಲಿ ಅನೇಕ ವರ್ಷಗಳ ಕಾಲ ವಾಸಮಾಡಿದ್ದಾನೆ.comes here every day ಪ್ರತಿನಿತ್ಯ ಇಲ್ಲಿಗೆ ಬರುತ್ತಾನೆ.
  2. (ವ್ಯಕ್ತಿ ಯಾ ವಸ್ತುವಿನ ಸ್ಥಳ ತೋರಿಸಲು ವ್ಯಕ್ತಿಯತ್ತ ಗಮನ ಸೆಳೆಯುವಾಗ) ಇಲ್ಲಿರುವ; ಇಲ್ಲಿರುವಂಥ; ಅಲ್ಲಿರುವ: my son here will show you ಇಲ್ಲಿರುವ ನನ್ನ ಮಗ ನಿನಗೆ ತೋರಿಸುತ್ತಾನೆhere is your coat ಇಲ್ಲಿದೆ ನಿನ್ನ ಕೋಟು.
  3. (ಸಂಭಾಷಣೆ, ವಾದ, ಘಟನೆ, ಪರಿಸ್ಥಿತಿ, ಮೊದಲಾದವುಗಳಲ್ಲಿ) ಇಲ್ಲಿ; ಈ – ಘಟ್ಟದಲ್ಲಿ, ಹಂತದಲ್ಲಿ: I have a question here ಈ ಘಟ್ಟದಲ್ಲಿ ನನ್ನದೊಂದು ಪ್ರಶ್ನೆಯಿದೆhere the speaker paused for a reply ಈ ಹಂತದಲ್ಲಿ ಭಾಷಣಕಾರನು ಉತ್ತರಕ್ಕಾಗಿ ಮಾತು ನಿಲ್ಲಿಸಿದ.
  4. ಈ – ಬಾಳಿನಲ್ಲಿ, ಜನ್ಮದಲ್ಲಿ.
  5. ಈ – ಪ್ರಸ್ತಾವದಲ್ಲಿ, ವಿಷಯದಲ್ಲಿ.
  6. ಈ – ಸ್ಥಳಕ್ಕೆ, ಪ್ರದೇಶಕ್ಕೆ, ಜಾಗಕ್ಕೆ; ಇಲ್ಲಿಗೆ: I don’t belong here ನಾನು ಇಲ್ಲಿಗೆ ಸೇರಿದವನಲ್ಲ; ನಾನು ಇಲ್ಲಿಯವನಲ್ಲcome here ಬಾ ಇಲ್ಲಿ; ಈ ಸ್ಥಳಕ್ಕೆ ಬಾ.
  7. (ಮುಖ್ಯವಾಗಿ ಗಮನ ಸೆಳೆಯುವಾಗ ಯಾ ಪ್ರತಿಭಟನೆ ಸೂಚಿಸುವಾಗ) ಇತ್ತ; ಈ ಕಡೆ; ಇಲ್ಲಿ: look here! ನೋಡಿಲ್ಲಿ! ಇಲ್ಲಿ ನೋಡು!
ಪದಗುಚ್ಛ
  1. here and now ಇದೀಗಲೇ; ಈಗಲೇ; ಈಗಿಂದೀಗಲೇ; ಇಲ್ಲೇ; ತಡಮಾಡದೆ; ಸಾವಕಾಶ ಮಾಡದೆ; ತಕ್ಷಣವೇ; ಕೂಡಲೇ: we must tend to this matter here and now ನಾವು ಈ ವಿಷಯಕ್ಕೆ ಇದೀಗಲೇ ಗಮನ ಕೊಡಬೇಕು.
  2. here and there
    1. ಅಲ್ಲಲ್ಲಿ; ಬೇರೆಬೇರೆ ಸ್ಥಳಗಳಲ್ಲಿ; ಹಲವೆಡೆ; ನಾನಾ ಸ್ಥಳಗಳಲ್ಲಿ: he worked here and there ಅವನು ಬೇರೆಬೇರೆ ಸ್ಥಳಗಳಲ್ಲಿ ಕೆಲಸಮಾಡಿದನು.
    2. ಅಲ್ಲಿ ಇಲ್ಲಿ; ಇಲ್ಲೂ ಅಲ್ಲೂ: we went here and there in the darkness ನಾವು ಕತ್ತಲಲ್ಲಿ ಅಲ್ಲೂಇಲ್ಲೂ ಸುತ್ತಾಡಿದೆವು.
  3. here below ಇಲ್ಲಿ; ಇಹಲೋಕದಲ್ಲಿ; ಇಹಜೀವನದಲ್ಲಿ.
  4. here goes (ಆಡುಮಾತು) (ಒಂದು ಧೈರ್ಯದ ಕೆಲಸಮಾಡಲು ತೊಡಗಿದಾಗ ಮಾಡುವ ಉದ್ಗಾರ) ಇಗೋ ನೋಡು, ಆಯಿತು!: since it must be done, here goes ಇದನ್ನು ಮಾಡಲೇಬೇಕಾಗಿರುವುದರಿಂದ, ಇಗೋ (ನೋಡು) ಶುರುಮಾಡಿಯೇಬಿಟ್ಟೆ!
  5. here’s a health to = ಪದಗುಚ್ಛ \((6)\).
  6. here’s to (ಸ್ವಸ್ತಿಪಾನ ಮಾಡುವಾಗ) ಇಗೋ! ಸ್ವಸ್ತಿಪಾನ!
  7. here, there and everywhere ಎಲ್ಲೆಲ್ಲೂ; ಪ್ರತಿಯೊಂದು ಜಾಗದಲ್ಲಿಯೂ: we were soon scattered here, there and everywhere ನಾವು ಬೇಗ ಎಲ್ಲ ಕಡೆಗೂ ಚದುರಿದೆವು.
  8. here today, gone tomorrow ಇವತ್ತಿದ್ದರೆ ನಾಳೆ ಇಲ್ಲ; ಕೇವಲ ಕ್ಷಣಿಕ; ಕ್ಷಣಭಂಗುರ; ಶಾಶ್ವತವಲ್ಲ; ಸ್ಥಿರವಲ್ಲ.
  9. here we go again (ಆಡುಮಾತು) (ಮುಖ್ಯವಾಗಿ ಅಹಿತಕರವಾದ ಘಟನೆಗಳ ವಿಷಯದಲ್ಲಿ) ತಿರುಗಿ ಅದೇ ಸ್ಥಿತಿ; ತಿರುಗಿ ಯಥಾಪ್ರಕಾರ; ಮತ್ತೆ ಅದೇ ಹೊಲಸು ಫಜೀತಿ; ತಿರುಗಿ ಶುರು ಆಯ್ತಪ್ಪ! ತಗೋ, ಮತ್ತೆ ಅದೇ! ಮತ್ತೆ ಅದೇ ಪಾಡು.
  10. here we are(ಆಡುಮಾತು) (ತಲುಪಬೇಕಾದ ಸ್ಥಳ ತಲುಪಿದಾಗ ಹೇಳುವಾಗ) ಬಂದೇಬಿಟ್ಟೆವು; ಬಂದಿಳಿದೆವು.
  11. here you are (ಯಾವುದೇ ವಸ್ತುವನ್ನು ಒಬ್ಬರಿಗೆ ಕೊಡುವಾಗ ಹೇಳುವ ಮಾತು) ಇದೋ ತಗೊ.
  12. neither here nor there.
    1. ಅಪ್ರಸಕ್ತ; ವಿಷಯಕ್ಕೆ ಸಂಬಂಧಪಡದ.
    2. ಅಮುಖ್ಯ; ಗಣನೆಗೆ ಬರದ; ಲೆಕ್ಕಕ್ಕಿಲ್ಲದ: the fact that her family has no money is neither here nor there ಅವಳ ಕುಟುಂಬಕ್ಕೆ ಹಣವಿಲ್ಲವೆಂಬ ಸಂಗತಿ ಅಮುಖ್ಯ.