See also 2heave
1heave ಹೀವ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ heaved ಯಾ ಮುಖ್ಯವಾಗಿ ನೌಕಾಯಾನ hove).
ಸಕರ್ಮಕ ಕ್ರಿಯಾಪದ
  1. (ಭಾರವಾದ ವಸ್ತುವನ್ನು) ಎತ್ತು.
  2. ಪ್ರಯಾಸದಿಂದ (ಮುಲುಕು, ನಿಟ್ಟುಸಿರು, ಮೊದಲಾದವನ್ನು) – ಬಿಡು, ಎಳೆ, ಕರೆ: heaved a sigh ನಿಟ್ಟುಸಿರು ಬಿಡು.
  3. (ಆಡುಮಾತು) ಎಸೆ; ಎತ್ತಿ ಒಗೆ.
  4. (ನೌಕಾಯಾನ) ಹಗ್ಗದಿಂದ (ಮೇಲಕ್ಕೆ) – ಎಳೆ, ಎತ್ತು.
  5. (ಭೂವಿಜ್ಞಾನ) (ಖನಿಜನಾಳದ ಯಾ ಸ್ತರದ ವಿಷಯದಲ್ಲಿಇನ್ನೊಂದು ನಾಳ ಯಾ ಸ್ತರವನ್ನು ಸಮಾಂತರವಾಗಿ) ಸ್ಥಾನಾಂತರಿಸು; ಸ್ಥಾನಪಲ್ಲಟ ಮಾಡು; ಜರುಗಿಸು.
ಅಕರ್ಮಕ ಕ್ರಿಯಾಪದ
  1. (ಅಲೆಗಳಂತೆ ಪರ್ಯಾಯ ಕ್ರಮದಲ್ಲಿ) ಏಳುಬೀಳು; ಏರಿಳಿಯುತ್ತಿರು.
  2. ಉಕ್ಕೇರು; ಉಬ್ಬು.
  3. (ಹಗ್ಗ ಮೊದಲಾದವನ್ನು) ಜಗ್ಗಿ ಎಳೆ; ತುಯ್ಯು.
  4. ಏದು; ಏದುಸಿರು ಬಿಡು; ಮೇಲುಸಿರು ಎಳೆ; ಪ್ರಯಾಸದಿಂದ ಉಸಿರೆಳೆ.
  5. ಓಕರಿಸು; ವಾಂತಿ ಮಾಡುವಂತೆ, ವಾಂತಿಯಾಗುವಂತೆ – ವರ್ತಿಸು.
ಪದಗುಚ್ಛ
  1. heave down (ಹಡಗನ್ನು ಚೊಕ್ಕಟ ಮಾಡುವುದು ಮೊದಲಾದವಕ್ಕಾಗಿ) ಒಂದು ಪಕ್ಕಕ್ಕೆ ಓಲಿಸು.
  2. heave to (ನಡೆಯುತ್ತಿರುವ):
    1. ಹಡಗನ್ನು ಲಂಗರು ಹಾಕದೆ ನಿಲ್ಲಿಸು.
    2. (ಹಡಗಿನ ವಿಷಯದಲ್ಲಿ) ಲಂಗರು ಹಾಕದೆ ನಿಲ್ಲು, ನಿಲುಗಡೆಗೆ ಬರು.
ನುಡಿಗಟ್ಟು

heave in sight (ನೌಕಾಯಾನ ಯಾ ಆಡುಮಾತು) ದೃಷ್ಟಿಗೆ ಬೀಳು; ಗೋಚರವಾಗು; ಕಣ್ಣಿಗೆ ಕಾಣಿಸು; ದೃಗ್ಗೋಚರವಾಗು.

See also 1heave
2heave ಹೀವ್‍
ನಾಮವಾಚಕ
  1. (ಭಾರ ಮೊದಲಾದವನ್ನು) ಎತ್ತುವುದು; ಎತ್ತುವಿಕೆ.
  2. ಎಸೆತ; ಎಸೆಯುವಿಕೆ.
  3. (ಭೂವಿಜ್ಞಾನ) (ಖನಿಜನಾಳ ಯಾ ಸ್ತರದ) ಸಮಾಂತರ ಸ್ಥಾನಾಂತರಣ; ಕ್ಷಿತಿಜೀಯ ಸ್ಥಾನ ಪಲ್ಲಟ.
  4. (ಬಹುವಚನದಲ್ಲಿ) ಕುದುರೆ ಉಬ್ಬಸ; ಕುದುರೆಗಳಿಗೆ ನಿಶ್ಯಕ್ತಿಯುಂಟುಮಾಡುವ, ಉಬ್ಬಸದಂಥ ಒಂದು ರೋಗ.
  5. ಎಳೆತ; ಸೆಳೆತ; ತುಯ್ತ.
  6. (ಕುಸ್ತಿ ಪಂದ್ಯದಲ್ಲಿ ಸಕ್ರಮವೆಂದು ಅಂಗೀಕರಿಸಿರುವ) ಕೆಡಹು; ಒಗೆತ; ಎದೆತ.
ಪದಗುಚ್ಛ

heave of the sea ಕಡಲ ನೂಕು; (ಹಡಗಿನ ಗತಿಯ ಮೇಲೆ) ಸಮುದ್ರದ ಉಬ್ಬರದಿಂದ ಬೀಳುವ ಒತ್ತರ, ಬಲ.