Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
heave
1
heave
ಹೀವ್
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
heaved
ಯಾ ಮುಖ್ಯವಾಗಿ ನೌಕಾಯಾನ
hove
).
ಸಕರ್ಮಕ ಕ್ರಿಯಾಪದ
(ಭಾರವಾದ ವಸ್ತುವನ್ನು) ಎತ್ತು.
ಪ್ರಯಾಸದಿಂದ (ಮುಲುಕು, ನಿಟ್ಟುಸಿರು, ಮೊದಲಾದವನ್ನು) – ಬಿಡು, ಎಳೆ, ಕರೆ:
heaved a sigh
ನಿಟ್ಟುಸಿರು ಬಿಡು.
(ಆಡುಮಾತು) ಎಸೆ; ಎತ್ತಿ ಒಗೆ.
(ನೌಕಾಯಾನ) ಹಗ್ಗದಿಂದ (ಮೇಲಕ್ಕೆ) – ಎಳೆ, ಎತ್ತು.
(ಭೂವಿಜ್ಞಾನ) (ಖನಿಜನಾಳದ ಯಾ ಸ್ತರದ ವಿಷಯದಲ್ಲಿಇನ್ನೊಂದು ನಾಳ ಯಾ ಸ್ತರವನ್ನು ಸಮಾಂತರವಾಗಿ) ಸ್ಥಾನಾಂತರಿಸು; ಸ್ಥಾನಪಲ್ಲಟ ಮಾಡು; ಜರುಗಿಸು.
ಅಕರ್ಮಕ ಕ್ರಿಯಾಪದ
(ಅಲೆಗಳಂತೆ ಪರ್ಯಾಯ ಕ್ರಮದಲ್ಲಿ) ಏಳುಬೀಳು; ಏರಿಳಿಯುತ್ತಿರು.
ಉಕ್ಕೇರು; ಉಬ್ಬು.
(ಹಗ್ಗ ಮೊದಲಾದವನ್ನು) ಜಗ್ಗಿ ಎಳೆ; ತುಯ್ಯು.
ಏದು; ಏದುಸಿರು ಬಿಡು; ಮೇಲುಸಿರು ಎಳೆ; ಪ್ರಯಾಸದಿಂದ ಉಸಿರೆಳೆ.
ಓಕರಿಸು; ವಾಂತಿ ಮಾಡುವಂತೆ, ವಾಂತಿಯಾಗುವಂತೆ – ವರ್ತಿಸು.
ಪದಗುಚ್ಛ
heave down
(ಹಡಗನ್ನು ಚೊಕ್ಕಟ ಮಾಡುವುದು ಮೊದಲಾದವಕ್ಕಾಗಿ) ಒಂದು ಪಕ್ಕಕ್ಕೆ ಓಲಿಸು.
heave to
(ನಡೆಯುತ್ತಿರುವ):
ಹಡಗನ್ನು ಲಂಗರು ಹಾಕದೆ ನಿಲ್ಲಿಸು.
(ಹಡಗಿನ ವಿಷಯದಲ್ಲಿ) ಲಂಗರು ಹಾಕದೆ ನಿಲ್ಲು, ನಿಲುಗಡೆಗೆ ಬರು.
ನುಡಿಗಟ್ಟು
heave in sight
(ನೌಕಾಯಾನ ಯಾ ಆಡುಮಾತು) ದೃಷ್ಟಿಗೆ ಬೀಳು; ಗೋಚರವಾಗು; ಕಣ್ಣಿಗೆ ಕಾಣಿಸು; ದೃಗ್ಗೋಚರವಾಗು.