See also 2gall  3gall  4gall  5gall
1gall ಗಾಲ್‍
ನಾಮವಾಚಕ
  1. (ಪ್ರಾಣಿಗಳ, ಮುಖ್ಯವಾಗಿ ಎತ್ತಿನ) ಪಿತ್ತ; ಪಿತ್ತರಸ.
  2. (ರೂಪ). ಕಡುಕಹಿ(ಯಾದ) ವಸ್ತು.
  3. (ರೂಪ) ಕಡುಕಹಿ; ಕಡುಕಟುತ್ವ.
  4. ಪಿತ್ತಕೋಶ ಮತ್ತು ಅದರ ಒಳಗಿರುವಂಥದು.
  5. ಕಟುಭಾವನೆ; ಪಾರುಷ್ಯ; ಕಾಠಿನ್ಯ; ನಿಷ್ಠುರತೆ; ದ್ವೇಷ; ವೈರ.
  6. (ಅಶಿಷ್ಟ) ಧಾರ್ಷ್ಟ್ಯ; ಸೊಕ್ಕು; ದುರಹಂಕಾರ.
ನುಡಿಗಟ್ಟು
  1. dip one’s pen in gall ವಿಷದಲ್ಲಿ ಅದ್ದಿ ಬರೆ; ಕಟುವಾಗಿ ಬರೆ; ಆಕ್ರೋಶದಿಂದ ಬರೆ.
  2. gall and wormwood
    1. ಕಡುಕಹಿ (ವಸ್ತು).
    2. ಒಬ್ಬನ ಸ್ವಭಾವಕ್ಕೆ, ದೇಹಕ್ಕೆ ಸೇರದ, ಒಲ್ಲದ – ವಸ್ತು, ವಿಚಾರ; ಮನಸ್ಸಿನ ಕಹಿ; ಅಸಮಾಧಾನ.
See also 1gall  3gall  4gall  5gall
2gall ಗಾಲ್‍
ನಾಮವಾಚಕ
  1. (ಮುಖ್ಯವಾಗಿ ಕುದುರೆಯ) ಕುರು; ಬೊಬ್ಬೆ; ಹೊಪ್ಪಳೆ; ಕೀವು ತುಂಬಿದ, ನೋವು ಕೊಡುವ – ಗುಳ್ಳೆ, ಬಾವು.
  2. ಉಜ್ಜು – ಹುಣ್ಣು, ಗಾಯ.
  3. ಬೇಗುದಿ; ಮನೋವೇದನೆ; ಮನಸ್ಸಿನ ನೋವು.
  4. (ಏನೂ ಇಲ್ಲದಂತೆ) ಉಜ್ಜಿ ಹಾಕಿದ ಸ್ಥಳ.
  5. ದೋಷ; ಊನ; ಕುಂದು; ನ್ಯೂನತೆ.
  6. (ಕುರುಚಲು ಕಾಡಿನಲ್ಲಿಯ ಯಾ ಹೊಲದಲ್ಲಿಯ) ಬಟ್ಟಬಯಲು; ಬೋಳು ಪ್ರದೇಶ; ಖಾಲಿ ಜಾಗ.
See also 1gall  2gall  4gall  5gall
3gall ಗಾಲ್‍
ಸಕರ್ಮಕ ಕ್ರಿಯಾಪದ
  1. ಹುಣ್ಣಾಗುವಂತೆ ಉಜ್ಜು; ಗಾಯವಾಗುವಷ್ಟು ತಿಕ್ಕು.
  2. ರೇಗಿಸು;ಪೀಡಿಸು; ಕಾಟಕೊಡು; ಕಾಡು; ಗೋಳು ಹುಯ್ದುಕೊ.
  3. ಮಾನ ಕಳೆ; ಅವಮಾನಮಾಡು; ಹೀನಾಯಗೊಳಿಸು.
ಅಕರ್ಮಕ ಕ್ರಿಯಾಪದ

ಉಜ್ಜಿ ಉಜ್ಜಿ ಹುಣ್ಣಾಗು.

See also 1gall  2gall  3gall  5gall
4gall ಗಾಲ್‍
ನಾಮವಾಚಕ

ಗಾಲ್‍; (ಮುಖ್ಯವಾಗಿ ಓಕ್‍) ಮರದಲ್ಲಿ ಒಂದು ಜಾತಿಯ ಕ್ರಿಮಿಯಿಂದಾದ, ಮಸಿ ತಯಾರಿಕೆ, ಚರ್ಮ ಹದಮಾಡುವುದು, ಬಣ್ಣಕಟ್ಟುವುದು, ಔಷಧ ತಯಾರಿಕೆಗಳಲ್ಲಿ ಬಳಸುವ ಗಂಟು.

See also 1gall  2gall  3gall  4gall
5gall ಗಾಲ್‍
ಗುಣವಾಚಕ

(ಕ್ರಿಮಿಗಳ ವಿಷಯದಲ್ಲಿ) ಓಕ್‍ ಮರದಲ್ಲಿ ಗಾಲ್‍ಗಳನ್ನು ಯಾ ಗಂಟುಗಳನ್ನು ಉಂಟುಮಾಡುವ.