1gall
ಗಾಲ್
ನಾಮವಾಚಕ
- (ಪ್ರಾಣಿಗಳ, ಮುಖ್ಯವಾಗಿ ಎತ್ತಿನ) ಪಿತ್ತ; ಪಿತ್ತರಸ.
- (ರೂಪ). ಕಡುಕಹಿ(ಯಾದ) ವಸ್ತು.
- (ರೂಪ) ಕಡುಕಹಿ; ಕಡುಕಟುತ್ವ.
- ಪಿತ್ತಕೋಶ ಮತ್ತು ಅದರ ಒಳಗಿರುವಂಥದು.
- ಕಟುಭಾವನೆ; ಪಾರುಷ್ಯ; ಕಾಠಿನ್ಯ; ನಿಷ್ಠುರತೆ; ದ್ವೇಷ; ವೈರ.
- (ಅಶಿಷ್ಟ) ಧಾರ್ಷ್ಟ್ಯ; ಸೊಕ್ಕು; ದುರಹಂಕಾರ.
ನುಡಿಗಟ್ಟು
- dip one’s pen in gall ವಿಷದಲ್ಲಿ ಅದ್ದಿ ಬರೆ; ಕಟುವಾಗಿ ಬರೆ; ಆಕ್ರೋಶದಿಂದ ಬರೆ.
- gall and wormwood
- ಕಡುಕಹಿ (ವಸ್ತು).
- ಒಬ್ಬನ ಸ್ವಭಾವಕ್ಕೆ, ದೇಹಕ್ಕೆ ಸೇರದ, ಒಲ್ಲದ – ವಸ್ತು, ವಿಚಾರ; ಮನಸ್ಸಿನ ಕಹಿ; ಅಸಮಾಧಾನ.