See also 2forward  3forward  4forward
1forward ಹಾರ್ವರ್ಡ್‍
ಗುಣವಾಚಕ
  1. (ನೌಕಾಯಾನ) ಹಡಗಿನ ಮುಂಭಾಗದ; ನೌಕಾಗ್ರದ; ನೌಕೆಯ ಮುಂಭಾಗಕ್ಕೆ ಸೇರಿದ: the forward gun in a ship ಹಡಗಿನಲ್ಲಿ ಮುಂಭಾಗದಲ್ಲಿರುವ ಬಂದೂಕು.
  2. ಎದುರಿಗಿನ; ಮುಂದಿರುವ ; ಎದುರಿನ: the forward horizon ಎದುರಿಗೆ ಕಾಣುವ ದಿಗಂತ, ಕ್ಷಿತಿಜ.
  3. (ಕ್ರಿಕೆಟ್‍) ಬ್ಯಾಟುಗಾರನು ಮುನ್ನುಗ್ಗಿ, ಮುಂದೆ ಬಂದು ಚೆಂಡು ಹೊಡೆಯುವ.
  4. (ರಗ್ಬಿ ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ ‘ಪಾಸು’ ಮಾಡುವ ವಿಷಯದಲ್ಲಿ) ಎದುರಾಳಿಯ ಗೋಲು ರೇಖೆಯ ಕಡೆಗಿನ.
  5. ಮುಂದುವರಿವ; ಮುನ್ನಡೆಯ; ಮುಂದಿನ; ಮುಂಭಾಗದ ಕಡೆಯ: the forward path ಮುನ್ನಡೆಯ ಮಾರ್ಗ; ಮುಂದುವರಿಯುವ ದಾರಿ.
  6. (ವ್ಯಾಪಾರ) ಮುಂಗಡದ; ಭಾವಿ; ಪೂರ್ವಭಾವಿ; ಮುಂದಿನ ಉತ್ಪನ್ನ, ಬಿಕರಿ, ಮೊದಲಾದವುಗಳಿಗೆ ಸಂಬಂಧಿಸಿದ: forward contract ಮುಂಗಡದ ಒಪ್ಪಂದ; ಮುನ್‍ಗುತ್ತಿಗೆ.
  7. (ಅಭಿಪ್ರಾಯ ಮೊದಲಾದವುಗಳ ವಿಷಯದಲ್ಲಿ) ಪ್ರಗತಿಶೀಲ ಯಾ ತೀವ್ರಗಾಯಿಯಾದ; ಅಭಿವೃದ್ಧಿಪರ; ಪೂರ್ಣತೆಗೆ ಯಾ ಪಕ್ವತೆಗೆ ಸಾಗುತ್ತಿರುವ.
  8. ಮುಂದುವರಿದ; ಮುಂದುವರಿಯುತ್ತಿರುವ.
  9. (ಸಸ್ಯ, ಫಸಲು, ಕಾಲ) ಅಕಾಲದ; ಮುಂಚಿತವಾದ; ಕಾಲಕ್ಕೆ ಮೊದಲೇ ಬೆಳೆದ: the most forward bud is eaten by the canker ಅತಿಮುಂಚಿತವಾಗಿ ಚಿಗುರಿದ ಮೊಗ್ಗನ್ನು ಹುಳು ತಿಂದಿದೆ.
  10. ಮುಂದಾಗಿರುವ; (ಮಾಡಲು) ತಯಾರಿರುವ; ಸಿದ್ಧವಾದ; ಒಡನೆಯೇ ಮಾಡುವ; ಚುರುಕಾದ; ಉತ್ಸಾಹ ಕೂಡಿದ; ಉತ್ಸುಕ; ಆತುರವುಳ್ಳ: always forward to criticize his neighbours ಅವನ ನೆರೆಯವರನ್ನು ಟೀಕಿಸಲು ಯಾವಾಗಲೂ ಮುಂದಾಗಿರುವ, ಉತ್ಸುಕನಾದ.
  11. ವಯಸ್ಸಿಗೆ ಈರಿದ ಬೆಳವಣಿಗೆಯುಳ್ಳ; ವಯಸ್ಸಿಗೆ ಈರಿ ಮುಂದುವರೆದ: the child was very forward at walking ಮಗುವಿಗೆ ತನ್ನ ವಯಸ್ಸಿಗೆ ಈರಿದ ನಡಿಗೆ ಬಂದಿತ್ತು; ಮಗು ಬಹಳ ಬೇಗನೆ ನಡೆಯುವುದನ್ನು ಕಲಿಯಿತು.
  12. (ಕೆಟ್ಟ ಅರ್ಥದಲ್ಲಿ) ಮುಂದೆ ಬಿದ್ದು ಹೋಗುವ; ದಾಷ್ಟಿಕದ; ಧಾಷ್ಟದ; ಉದ್ಧತ: a flashy forward woman ಥಳಕಿನ ದಾಷ್ಟಿಕದ ಹೆಂಗಸು.
  13. ಸೈನಿಕ ಪಡೆಗಳ ಹೋರಾಟದ ಯಾ ಘರ್ಷಣೆಯ ಪ್ರದೇಶಕ್ಕೆ ಬಹಳ ಹತ್ತಿರದ: a forward area ಕದನಕ್ಷೇತ್ರದ ಹತ್ತಿರದ ಪ್ರದೇಶ.
See also 1forward  3forward  4forward
2forward ಹಾರ್ವರ್ಡ್‍
ನಾಮವಾಚಕ

(ಕಾಲ್ಚೆಂಡಾಟ, ಹಾಕಿ, ಮೊದಲಾದವುಗಳಲ್ಲಿ) ‘ಹಾರ್ವರ್ಡು’; ಮುಂಚೂಣಿಯ ಆಟಗಾರ(ರಲ್ಲಿ ಒಬ್ಬ)ಯಾ ಆತನ ಸ್ಥಾನ.

See also 1forward  2forward  4forward
3forward ಹಾರ್ವರ್ಡ್‍
ಕ್ರಿಯಾವಿಶೇಷಣ
  1. ಮುಂದಕ್ಕೆ; ಭವಿಷ್ಯದ ಕಡೆ; ನಾಳೆಯ ಕಡೆ; ಮುಂದು ಮುಂದಕ್ಕೆ: from this time forward ಈ ಕಾಲದಿಂದ ಮುಂದಕ್ಕೆ; ಇನ್ನೂ ಮುಂದಕ್ಕೆ.
  2. ಮುಂದಿನ ಕಡೆಗೆ; ಎದುರಾಗಿ.
  3. ಸತತವಾಗಿ ಮುಂದುವರಿಯುತ್ತಾ; ಎಡೆಬಿಡದೆ ಮುಂದೆ ಹೋಗುತ್ತಾ: rushing forward ಮುಂದು ಮುಂದಕ್ಕೆ ನುಗ್ಗುತ್ತಾ.
  4. (ಸೈನ್ಯದಲ್ಲಿ ಕವಾಯತಿನ ಆಜ್ಞೆ) ಮುಂದಕ್ಕೆ (ಹೋಗು)!
  5. ಮುಂದಾಗಿ; ಮುಂಚಿತವಾಗಿ; ಮೊದಲೇ: send him forward ಅವನನ್ನು ಮುಂದಾಗಿ, ಮುಂಚಿತವಾಗಿ ಕಳಿಸು.
  6. ಮುಂದಕ್ಕೆ; ಪ್ರಮುಖ ಸ್ಠಾನಕ್ಕೆ; ಗಮನ ಬೀಳುವಂತೆ; ದೃಷ್ಟಿಗೆ: bring forward ಗಮನ ಸೆಳೆ.
  7. (ನೌಕಾಯಾನ) ಹಡಗಿನ ಮುಂಭಾಗಕ್ಕೆ: ಹಡಗಿನ ಮುಂಭಾಗದಲ್ಲಿ; ನೌಕೆಯ ಮುಂಭಾಗದ ಕಡೆಗೆ.
  8. (ವಾಯುಯಾನ) ಮೂತಿಯ ಕಡೆಗೆ.
  9. ಮುಂದಕ್ಕೆ; ಮುಂದುವರಿಯುತ್ತಾ; ಪ್ರಗತಿ ಹೊಂದುತ್ತಾ; ಅಭಿವೃದ್ಧಿ ಪಡೆಯುತ್ತಾ.
ಪದಗುಚ್ಛ
  1. backward(s) and forward(s) ಹಿಂದಕ್ಕೂ ಮುಂದಕ್ಕೂ.
  2. come forward (ಕೆಲಸ, ಹುದ್ದೆ, ಮೊದಲಾದವುಗಳಿಗಾಗಿ) ಮುಂದೆ ಬರು.
  3. date forward (ವ್ಯಾಪಾರದ ಕೋರಿಕೆಯ ಪತ್ರಗಳಲ್ಲಿ) ಮುಂದಿನ ತೇದಿ ಹಾಕು; ಅನಂತರದ ತೇದಿ ಹಾಕು; ತರುವಾಯದ ತಾರೀಖು ನಮೂದಿಸು.
  4. go forward ಮುಂದುವರಿ.
  5. look forward ಮುಂದಕ್ಕೆ ನೋಡು; ಭವಿಷ್ಯದ ಕಡೆ ನೋಡು.
  6. play forward (ಕ್ರಿಕೆಟ್‍) (ಬ್ಯಾಟುಗಾರ) ಮುಂದೆ ನುಗ್ಗಿ ಚೆಂಡು ಹೊಡೆ; ಮುನ್ನುಗ್ಗಿ ಆಡು.
ನುಡಿಗಟ್ಟು
  1. can’t get any forwarder (ಯಾ ಸಾಮಾನ್ಯವಾಗಿ ಆಡುಮಾತು can’t get any forrader) ಮುಂದುವರಿಯಲಾಗುವುದಿಲ್ಲ; ಮುಂದೆ ಹೋಗುವಂತಿಲ್ಲ.
  2. put forward
    1. ಹೇಳು; ಕೊಡು; ನೀಡು; ಮುಂದಿಡು; ಒಡ್ಡು: the worst reason which inexperienced writers put forward for setting pen to paper ಅನುಭವವಿಲ್ಲದ ಲೇಖಕರು ಕಾಗದಕ್ಕೆ ಪೆನ್ನನ್ನು ಹಚ್ಚಲು ಕೊಡುವ ಅತ್ಯಂತ ಕೆಟ್ಟ ಕಾರಣ.
    2. ಹೆಚ್ಚಾಗಿ ಎಲ್ಲರ ಕಣಿಣಗೂ ಬೀಳು; ಗಮನವನ್ನು ಅತಿಯಾಗಿ ಸೆಳೆ: who are you who put yourself so forward? ಇಷ್ಟೊಂದು ಹೆಚ್ಚಾಗಿ ಎಲ್ಲರ ಕಣ್ಣಿಗೂ ಬೀಳುತ್ತಿರುವ ನೀನು ಯಾರು?
  3. set forward = ನುಡಿಗಟ್ಟು \((2)\).
See also 1forward  2forward  3forward
4forward ಹಾರ್ವರ್ಡ್‍
ಸಕರ್ಮಕ ಕ್ರಿಯಾಪದ
  1. ಮುಂದುವರಿಯಲು ಸಹಾಯಮಾಡು; ಮುಂದುವರಿಸಲು ನೆರವು ನೀಡು.
  2. ಮುಂದಕ್ಕೆ ತರು; ಪ್ರೋತ್ಸಾಹಿಸು; ಉತ್ತೇಜನ ಕೊಡು.
  3. ಬೆಳವಣಿಗೆಯನ್ನು – ಚುರುಕುಗೊಳಿಸು, ತ್ವರೆಪಡಿಸು.
  4. (ಪತ್ರ ಮೊದಲಾದವನ್ನು) ಮುಂದಕ್ಕೆ – ಕಳುಹು, ರವಾನಿಸು, ಸಾಗಿಸು.
  5. (ಸರಕು ಮೊದಲಾದವನ್ನು) ರವಾನಿಸು; ಸಾಗಿಸು.