See also 1forward  2forward  4forward
3forward ಹಾರ್ವರ್ಡ್‍
ಕ್ರಿಯಾವಿಶೇಷಣ
  1. ಮುಂದಕ್ಕೆ; ಭವಿಷ್ಯದ ಕಡೆ; ನಾಳೆಯ ಕಡೆ; ಮುಂದು ಮುಂದಕ್ಕೆ: from this time forward ಈ ಕಾಲದಿಂದ ಮುಂದಕ್ಕೆ; ಇನ್ನೂ ಮುಂದಕ್ಕೆ.
  2. ಮುಂದಿನ ಕಡೆಗೆ; ಎದುರಾಗಿ.
  3. ಸತತವಾಗಿ ಮುಂದುವರಿಯುತ್ತಾ; ಎಡೆಬಿಡದೆ ಮುಂದೆ ಹೋಗುತ್ತಾ: rushing forward ಮುಂದು ಮುಂದಕ್ಕೆ ನುಗ್ಗುತ್ತಾ.
  4. (ಸೈನ್ಯದಲ್ಲಿ ಕವಾಯತಿನ ಆಜ್ಞೆ) ಮುಂದಕ್ಕೆ (ಹೋಗು)!
  5. ಮುಂದಾಗಿ; ಮುಂಚಿತವಾಗಿ; ಮೊದಲೇ: send him forward ಅವನನ್ನು ಮುಂದಾಗಿ, ಮುಂಚಿತವಾಗಿ ಕಳಿಸು.
  6. ಮುಂದಕ್ಕೆ; ಪ್ರಮುಖ ಸ್ಠಾನಕ್ಕೆ; ಗಮನ ಬೀಳುವಂತೆ; ದೃಷ್ಟಿಗೆ: bring forward ಗಮನ ಸೆಳೆ.
  7. (ನೌಕಾಯಾನ) ಹಡಗಿನ ಮುಂಭಾಗಕ್ಕೆ: ಹಡಗಿನ ಮುಂಭಾಗದಲ್ಲಿ; ನೌಕೆಯ ಮುಂಭಾಗದ ಕಡೆಗೆ.
  8. (ವಾಯುಯಾನ) ಮೂತಿಯ ಕಡೆಗೆ.
  9. ಮುಂದಕ್ಕೆ; ಮುಂದುವರಿಯುತ್ತಾ; ಪ್ರಗತಿ ಹೊಂದುತ್ತಾ; ಅಭಿವೃದ್ಧಿ ಪಡೆಯುತ್ತಾ.
ಪದಗುಚ್ಛ
  1. backward(s) and forward(s) ಹಿಂದಕ್ಕೂ ಮುಂದಕ್ಕೂ.
  2. come forward (ಕೆಲಸ, ಹುದ್ದೆ, ಮೊದಲಾದವುಗಳಿಗಾಗಿ) ಮುಂದೆ ಬರು.
  3. date forward (ವ್ಯಾಪಾರದ ಕೋರಿಕೆಯ ಪತ್ರಗಳಲ್ಲಿ) ಮುಂದಿನ ತೇದಿ ಹಾಕು; ಅನಂತರದ ತೇದಿ ಹಾಕು; ತರುವಾಯದ ತಾರೀಖು ನಮೂದಿಸು.
  4. go forward ಮುಂದುವರಿ.
  5. look forward ಮುಂದಕ್ಕೆ ನೋಡು; ಭವಿಷ್ಯದ ಕಡೆ ನೋಡು.
  6. play forward (ಕ್ರಿಕೆಟ್‍) (ಬ್ಯಾಟುಗಾರ) ಮುಂದೆ ನುಗ್ಗಿ ಚೆಂಡು ಹೊಡೆ; ಮುನ್ನುಗ್ಗಿ ಆಡು.
ನುಡಿಗಟ್ಟು
  1. can’t get any forwarder (ಯಾ ಸಾಮಾನ್ಯವಾಗಿ ಆಡುಮಾತು can’t get any forrader) ಮುಂದುವರಿಯಲಾಗುವುದಿಲ್ಲ; ಮುಂದೆ ಹೋಗುವಂತಿಲ್ಲ.
  2. put forward
    1. ಹೇಳು; ಕೊಡು; ನೀಡು; ಮುಂದಿಡು; ಒಡ್ಡು: the worst reason which inexperienced writers put forward for setting pen to paper ಅನುಭವವಿಲ್ಲದ ಲೇಖಕರು ಕಾಗದಕ್ಕೆ ಪೆನ್ನನ್ನು ಹಚ್ಚಲು ಕೊಡುವ ಅತ್ಯಂತ ಕೆಟ್ಟ ಕಾರಣ.
    2. ಹೆಚ್ಚಾಗಿ ಎಲ್ಲರ ಕಣಿಣಗೂ ಬೀಳು; ಗಮನವನ್ನು ಅತಿಯಾಗಿ ಸೆಳೆ: who are you who put yourself so forward? ಇಷ್ಟೊಂದು ಹೆಚ್ಚಾಗಿ ಎಲ್ಲರ ಕಣ್ಣಿಗೂ ಬೀಳುತ್ತಿರುವ ನೀನು ಯಾರು?
  3. set forward = ನುಡಿಗಟ್ಟು \((2)\).