See also 2forward  3forward  4forward
1forward ಹಾರ್ವರ್ಡ್‍
ಗುಣವಾಚಕ
  1. (ನೌಕಾಯಾನ) ಹಡಗಿನ ಮುಂಭಾಗದ; ನೌಕಾಗ್ರದ; ನೌಕೆಯ ಮುಂಭಾಗಕ್ಕೆ ಸೇರಿದ: the forward gun in a ship ಹಡಗಿನಲ್ಲಿ ಮುಂಭಾಗದಲ್ಲಿರುವ ಬಂದೂಕು.
  2. ಎದುರಿಗಿನ; ಮುಂದಿರುವ ; ಎದುರಿನ: the forward horizon ಎದುರಿಗೆ ಕಾಣುವ ದಿಗಂತ, ಕ್ಷಿತಿಜ.
  3. (ಕ್ರಿಕೆಟ್‍) ಬ್ಯಾಟುಗಾರನು ಮುನ್ನುಗ್ಗಿ, ಮುಂದೆ ಬಂದು ಚೆಂಡು ಹೊಡೆಯುವ.
  4. (ರಗ್ಬಿ ಹುಟ್‍ಬಾಲ್‍ ಮೊದಲಾದ ಆಟಗಳಲ್ಲಿ ‘ಪಾಸು’ ಮಾಡುವ ವಿಷಯದಲ್ಲಿ) ಎದುರಾಳಿಯ ಗೋಲು ರೇಖೆಯ ಕಡೆಗಿನ.
  5. ಮುಂದುವರಿವ; ಮುನ್ನಡೆಯ; ಮುಂದಿನ; ಮುಂಭಾಗದ ಕಡೆಯ: the forward path ಮುನ್ನಡೆಯ ಮಾರ್ಗ; ಮುಂದುವರಿಯುವ ದಾರಿ.
  6. (ವ್ಯಾಪಾರ) ಮುಂಗಡದ; ಭಾವಿ; ಪೂರ್ವಭಾವಿ; ಮುಂದಿನ ಉತ್ಪನ್ನ, ಬಿಕರಿ, ಮೊದಲಾದವುಗಳಿಗೆ ಸಂಬಂಧಿಸಿದ: forward contract ಮುಂಗಡದ ಒಪ್ಪಂದ; ಮುನ್‍ಗುತ್ತಿಗೆ.
  7. (ಅಭಿಪ್ರಾಯ ಮೊದಲಾದವುಗಳ ವಿಷಯದಲ್ಲಿ) ಪ್ರಗತಿಶೀಲ ಯಾ ತೀವ್ರಗಾಯಿಯಾದ; ಅಭಿವೃದ್ಧಿಪರ; ಪೂರ್ಣತೆಗೆ ಯಾ ಪಕ್ವತೆಗೆ ಸಾಗುತ್ತಿರುವ.
  8. ಮುಂದುವರಿದ; ಮುಂದುವರಿಯುತ್ತಿರುವ.
  9. (ಸಸ್ಯ, ಫಸಲು, ಕಾಲ) ಅಕಾಲದ; ಮುಂಚಿತವಾದ; ಕಾಲಕ್ಕೆ ಮೊದಲೇ ಬೆಳೆದ: the most forward bud is eaten by the canker ಅತಿಮುಂಚಿತವಾಗಿ ಚಿಗುರಿದ ಮೊಗ್ಗನ್ನು ಹುಳು ತಿಂದಿದೆ.
  10. ಮುಂದಾಗಿರುವ; (ಮಾಡಲು) ತಯಾರಿರುವ; ಸಿದ್ಧವಾದ; ಒಡನೆಯೇ ಮಾಡುವ; ಚುರುಕಾದ; ಉತ್ಸಾಹ ಕೂಡಿದ; ಉತ್ಸುಕ; ಆತುರವುಳ್ಳ: always forward to criticize his neighbours ಅವನ ನೆರೆಯವರನ್ನು ಟೀಕಿಸಲು ಯಾವಾಗಲೂ ಮುಂದಾಗಿರುವ, ಉತ್ಸುಕನಾದ.
  11. ವಯಸ್ಸಿಗೆ ಈರಿದ ಬೆಳವಣಿಗೆಯುಳ್ಳ; ವಯಸ್ಸಿಗೆ ಈರಿ ಮುಂದುವರೆದ: the child was very forward at walking ಮಗುವಿಗೆ ತನ್ನ ವಯಸ್ಸಿಗೆ ಈರಿದ ನಡಿಗೆ ಬಂದಿತ್ತು; ಮಗು ಬಹಳ ಬೇಗನೆ ನಡೆಯುವುದನ್ನು ಕಲಿಯಿತು.
  12. (ಕೆಟ್ಟ ಅರ್ಥದಲ್ಲಿ) ಮುಂದೆ ಬಿದ್ದು ಹೋಗುವ; ದಾಷ್ಟಿಕದ; ಧಾಷ್ಟದ; ಉದ್ಧತ: a flashy forward woman ಥಳಕಿನ ದಾಷ್ಟಿಕದ ಹೆಂಗಸು.
  13. ಸೈನಿಕ ಪಡೆಗಳ ಹೋರಾಟದ ಯಾ ಘರ್ಷಣೆಯ ಪ್ರದೇಶಕ್ಕೆ ಬಹಳ ಹತ್ತಿರದ: a forward area ಕದನಕ್ಷೇತ್ರದ ಹತ್ತಿರದ ಪ್ರದೇಶ.