See also 2foil  3foil  4foil  5foil  6foil
1foil ಹಾಇಲ್‍
ನಾಮವಾಚಕ
  1. (ವಾಸ್ತುಶಿಲ್ಪ) ಶೃಂಗಚಾಪ; ಕಿಟಕಿಯ ಕಮಾನಿನ ಶೃಂಗಗಳ ಮಧ್ಯೆ ಅಲಂಕಾರಕ್ಕಾಗಿ ಇರುವ ಚಾಪ ಯಾ ವೃತ್ತ.
  2. (ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ತವರ, ಮೊದಲಾದವುಗಳ) ರೇಕು; ಲೋಹದ ಹಾಳೆ; ವರ್ತಿರೇಕು; ಬಡಿದು ಯಾ ಲಟ್ಟಿಸಿ ಮಾಡಿದ ಲೋಹದ ತೆಳುಹಾಳೆ.
  3. ಹಿಂತಗಡು ಯಾ ಹಿಂಬಳಿತ; ಕನ್ನಡಿಗಾಜಿನ ಬೆನ್ನುತಗಡು, ಬೆನ್ನುಹಾಳೆ, ಯಾ ಬೆನ್ನುಲೇಪ; ಪ್ರತಿಫಲನಕಾರಿಯಾಗಿ ಕನ್ನಡಿಯ ಗಾಜಿನ ಹಿಂಭಾಗದಲ್ಲಿ ಇಡುವ ತಗಡು ಯಾ ಹಚ್ಚುವ ತವರ ಮತ್ತು ಪಾದರಸಗಳ ಮಿಶ್ರಣದ ಲೇಪ.
  4. ಆಹಾರವನ್ನು ಸುತ್ತಿಡಲು ಯಾ ಮುಚ್ಚಲು ಬಳಸುವ ಲೋಹದ ತೆಳು ತಗಡು ಯಾ ಹಾಳೆ.
  5. (ರತ್ನ ಮೊದಲಾದವುಗಳ ಹೊಳಪನ್ನು ವೈದೃಶ್ಯದಿಂದ ಹೆಚ್ಚಿಸಲು ಯಾ ಅದಕ್ಕೆ ಕಾಂತಿ ಯಾ ಬಣ್ಣ ಕೊಡುವುದಕ್ಕಾಗಿ ಅವುಗಳ ಕೆಳಗಿಡುವ) ವರ್ತಿರೇಕು; ಬಣ್ಣದ ರೇಕು.
  6. (ಕಾಂತಿವರ್ಧಕ) ವೈದೃಶ್ಯ; ವೈದೃಶ್ಯದಿಂದ ಪ್ರಭೆ ಹೆಚ್ಚಿಸುವ ವಸ್ತು, ವ್ಯಕ್ತಿ: acting as a foil for a stage comedian ನಾಟಕರಂಗದ ಹಾಸ್ಯನಟನಿಗೆ ವೈಶ್ಯವಾಗಿ.
See also 1foil  3foil  4foil  5foil  6foil
2foil ಹಾಇಲ್‍
ಸಕರ್ಮಕ ಕ್ರಿಯಾಪದ
  1. (ವಾಸ್ತುಶಿಲ್ಪ) ಶೃಂಗಚಾಪಗಳಿಂದ ಅಲಂಕರಿಸು: foiled arch ಶೃಂಗಚಾಪಗಳಿಂದ ಅಲಂಕೃತವಾದ ಕಮಾನು.
  2. ಕನ್ನಡಿಯ ಗಾಜಿನ ಬೆನ್ನುತಗಡು ಒದಗಿಸು ಯಾ ಬೆನ್ನುಲೇಪ ಬಳಿ.
  3. (ಆಹಾರಪದಾರ್ಥ ಮೊದಲಾದವಕ್ಕೆ) ತೆಳುತಗಡು ಹೊದಿಸು, ಸುತ್ತು.
  4. (ರತ್ನ ಮೊದಲಾದವುಗಳಿಗೆ) ವರ್ತಿರೇಕಿಡು; ಬಣ್ಣದ ರೇಕಿಡು.
  5. (ವೈದೃಶ್ಯದಿಂದ) ಪ್ರಭೆ ಹೆಚ್ಚಿಸು; ಕಾಂತಿವರ್ಧಿಸು.
See also 1foil  2foil  4foil  5foil  6foil
3foil ಹಾಇಲ್‍
ಸಕರ್ಮಕ ಕ್ರಿಯಾಪದ
  1. (ಬೇಟೆಯಲ್ಲಿ ನಾಯಿಗಳಿಗೆ ವಾಸನೆ ಸಿಕ್ಕದಂತೆ ಮಾಡಿ ಅವನ್ನು ದಿಕ್ಕು ತಪ್ಪಿಸಲು) ಬೇಟೆಹಾದಿಗೆ ಅಡ್ಡಲಾಗಿ ಓಡಾಡು; ಬೇಟೆಮಾರ್ಗದಲ್ಲಿ ತುಳಿದಾಡು.
  2. ಹೊಡೆದೋಡಿಸು; ಹೊಡೆದಟ್ಟು; ಹಿಮ್ಮೆಟ್ಟಿಸು; ಹಿಂದೂಡು.
  3. ಸಾಗದಂತೆ ಮಾಡು; ಕೆಡಿಸು; ನಿಷ್ಫಲಗೊಳಿಸು; ವಿಫಲಗೊಳಿಸು; ಭಗ್ನಗೊಳಿಸು; ವ್ಯರ್ಥಮಾಡು; (ಉದ್ದೇಶ) ಭಂಗಮಾಡು: loyal troops foiled his attempt to overthrow the government ರಾಜನಿಷ್ಠೆಯುಳ್ಳ ಪಡೆಗಳು ಸರ್ಕಾರವನ್ನು ಉರುಳಿಸುವ ಅವನ ಪ್ರಯತ್ನವನ್ನು ವಿಫಲಗೊಳಿಸಿದವು.
  4. ತಪ್ಪಿಸಿಕೊಳ್ಳು; ನಿವಾರಿಸಿಕೊ.
  5. ದಿಗ್ಭ್ರಮೆಗೊಳಿಸು; ದಿಕ್ಕು ತೋರದಂತೆ ಮಾಡು; ಕಕ್ಕಾಬಿಕ್ಕಿಗೊಳಿಸು; ಅತಂತ್ರಪಡಿಸು.
ಅಕರ್ಮಕ ಕ್ರಿಯಾಪದ

(ಜಿಂಕೆ ಮೊದಲಾದವುಗಳ ವಿಷಯದಲ್ಲಿ) ಬೇಟೆಯ ಹಾದಿಯಲ್ಲಿ ಓಡಾಡಿ – ವಾಸನೆ ಕೆಡಿಸು, ಸುಳಿವು ತಪ್ಪಿಸು.

See also 1foil  2foil  3foil  5foil  6foil
4foil ಹಾಇಲ್‍
ನಾಮವಾಚಕ
  1. ಬೇಟೆಯ ಪ್ರಾಣಿಯ ಜಾಡು: run the foil, run upon the foil (ಬೇಟೆನಾಯಿಗಳಿಗೆ ದಿಕ್ಕುತಪ್ಪಿಸುವಂತೆ) ಅದೇ ಜಾಡಿನ ಮೇಲೆ ಎರಡನೆ ಸಲ ಓಡು.
  2. (ಪ್ರಾಚೀನ ಪ್ರಯೋಗ) ಹಿಮ್ಮೆಟ್ಟುವಿಕೆ; ಸೋಲು.
  3. (ಪ್ರಾಚೀನ ಪ್ರಯೋಗ) ಅಡಚಣೆ; ಅಡ್ಡಿ.
See also 1foil  2foil  3foil  4foil  6foil
5foil ಹಾಇಲ್‍
ನಾಮವಾಚಕ

(ಕತ್ತಿವರಿಸೆಯಲ್ಲಿ ಉಪಯೋಗಿಸುವ, ತುದಿಗೆ ಗುಂಡಿ ಹಾಕಿದ) ಮೊಂಡುಕತ್ತಿ; ಪಟ್ಟಾಕತ್ತಿ.

See also 1foil  2foil  3foil  4foil  5foil
6foil ಹಾಇಲ್‍
ನಾಮವಾಚಕ