See also 2foil  3foil  4foil  5foil  6foil
1foil ಹಾಇಲ್‍
ನಾಮವಾಚಕ
  1. (ವಾಸ್ತುಶಿಲ್ಪ) ಶೃಂಗಚಾಪ; ಕಿಟಕಿಯ ಕಮಾನಿನ ಶೃಂಗಗಳ ಮಧ್ಯೆ ಅಲಂಕಾರಕ್ಕಾಗಿ ಇರುವ ಚಾಪ ಯಾ ವೃತ್ತ.
  2. (ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ತವರ, ಮೊದಲಾದವುಗಳ) ರೇಕು; ಲೋಹದ ಹಾಳೆ; ವರ್ತಿರೇಕು; ಬಡಿದು ಯಾ ಲಟ್ಟಿಸಿ ಮಾಡಿದ ಲೋಹದ ತೆಳುಹಾಳೆ.
  3. ಹಿಂತಗಡು ಯಾ ಹಿಂಬಳಿತ; ಕನ್ನಡಿಗಾಜಿನ ಬೆನ್ನುತಗಡು, ಬೆನ್ನುಹಾಳೆ, ಯಾ ಬೆನ್ನುಲೇಪ; ಪ್ರತಿಫಲನಕಾರಿಯಾಗಿ ಕನ್ನಡಿಯ ಗಾಜಿನ ಹಿಂಭಾಗದಲ್ಲಿ ಇಡುವ ತಗಡು ಯಾ ಹಚ್ಚುವ ತವರ ಮತ್ತು ಪಾದರಸಗಳ ಮಿಶ್ರಣದ ಲೇಪ.
  4. ಆಹಾರವನ್ನು ಸುತ್ತಿಡಲು ಯಾ ಮುಚ್ಚಲು ಬಳಸುವ ಲೋಹದ ತೆಳು ತಗಡು ಯಾ ಹಾಳೆ.
  5. (ರತ್ನ ಮೊದಲಾದವುಗಳ ಹೊಳಪನ್ನು ವೈದೃಶ್ಯದಿಂದ ಹೆಚ್ಚಿಸಲು ಯಾ ಅದಕ್ಕೆ ಕಾಂತಿ ಯಾ ಬಣ್ಣ ಕೊಡುವುದಕ್ಕಾಗಿ ಅವುಗಳ ಕೆಳಗಿಡುವ) ವರ್ತಿರೇಕು; ಬಣ್ಣದ ರೇಕು.
  6. (ಕಾಂತಿವರ್ಧಕ) ವೈದೃಶ್ಯ; ವೈದೃಶ್ಯದಿಂದ ಪ್ರಭೆ ಹೆಚ್ಚಿಸುವ ವಸ್ತು, ವ್ಯಕ್ತಿ: acting as a foil for a stage comedian ನಾಟಕರಂಗದ ಹಾಸ್ಯನಟನಿಗೆ ವೈಶ್ಯವಾಗಿ.