See also 2flute
1flute ಹ್ಲೂಟ್‍
ನಾಮವಾಚಕ
  1. ಕೊಳಲು; ವೇಣು; ಮುರಳಿ; ಪಿಳ್ಳಂಗೋವಿ.
  2. ವೇಣುವಾದಕ; ಕೊಳಲು ನುಡಿಸುವವ.
  3. (ಆರ್ಗನ್‍ ವಾದ್ಯದ) ಕೊಳಲು ಕೊಳವಿ; ಕೊಳಲಿನ ನಾದ ಹೊರಡಿಸುವ ಕೊಳವಿ.
  4. ಅರೆಗೊಳವಿ:
    1. ಕಂಬದಲ್ಲಿ ಕೊರೆದು ಮಾಡಿದ ಅರೆಗೊಳವಿಯ ಆಕಾರದ ಲಂಬವಾದ ತೋಡು ಯಾ ಗಾಡಿ.
    2. ಬೇರೆಲ್ಲಾದರೂ (ಉದಾಹರಣೆಗೆ ನಿರಿಗೆ ಅಂಚುಗಳಲ್ಲಿ) ಮಾಡಿರುವ ಇಂಥದೇ ರಚನೆ.
  5. ಕೊಳವೆಲೋಟ; 17ನೇ ಶತಮಾನದ ಉದ್ದವಾದ ವೈನ್‍ ಲೋಟ.
See also 1flute
2flute ಹ್ಲೂಟ್‍
ಸಕರ್ಮಕ ಕ್ರಿಯಾಪದ
  1. (ರಾಗ, ಗೀತ, ಮೊದಲಾದವನ್ನು) ಕೊಳಲಿನಲ್ಲಿ ನುಡಿಸು; ಪಿಳ್ಳಂಗೋವಿಯಿಂದ ವಾದನ ಮಾಡು.
  2. ಕೊಳವೆ ಕೊರೆ; ಕಲ್ಲು ಮೊದಲಾದವುಗಳಲ್ಲಿ ಅರೆಕೊಳವಿ ಆಕಾರದ ಗಾಡಿಮಾಡು.
ಅಕರ್ಮಕ ಕ್ರಿಯಾಪದ
  1. ಕೊಳಲೂದು; ಪಿಳ್ಳಂಗೋವಿ ಊದು; ಕೊಳಲು ಬಾರಿಸು; ವೇಣುವಾದನಮಾಡು.
  2. ಕೊಳಲಿನ ನಾದದಂತೆ ಸಿಳ್ಳುಹಾಕು, ಹಾಡು, ಯಾ ಮಾತನಾಡು.