See also 2flesh
1flesh ಹ್ಲೆಷ್‍
ನಾಮವಾಚಕ
  1. ಮಾಂಸ; ಬಾಡು; ಅಡಗು.
  2. (ಹಣ್ಣಿನ ಯಾ ಸಸ್ಯದ) ತಿರುಳು.
  3. ತುಂಬು ಮೈ; ಮೈತುಂಬಿರುವಿಕೆ; ದೇಹಪುಷ್ಟತೆ; ಮಾಂಸಲತೆ; ಮಾಂಸಲತ್ವ.
  4. ಬೊಜ್ಜು; ಕೊಬ್ಬಿನಿಂದ ತುಂಬಿಕೊಂಡಿರುವಿಕೆ: lose flesh ಕೃಶವಾಗು; ತೆಳುವಾಗು; ಬೊಜ್ಜು ಕರಗು. put on flesh ಬೊಜ್ಜು ಬೆಳೆಸು.
  5. ಮಾಂಸ; (ಈನನ್ನೂ, ಕೆಲವು ವೇಳೆ ಕೋಳಿಜಾತಿಯನ್ನೂ ಬಿಟ್ಟು) ಆಹಾರಕ್ಕಾಗಿ ಬಳಸುವ ಪ್ರಾಣಿಯ ದೇಹದ ಊತಕಗಳು, ಮುಖ್ಯವಾಗಿ ಕೊಬ್ಬು ಇರುವ ಯಾ ಇಲ್ಲದಿರುವ ಮಾಂಸಖಂಡ.
  6. ಹೊರಮೈ; (ಬಣ್ಣ ಯಾ ಚಹರೆಯನ್ನು ಕುರಿತು) ಮನುಷ್ಯನ ದೇಹದ ಕಾಣುವ ಭಾಗ.
  7. ಇಂದ್ರಿಯಗಳ ಹಸಿವು; ಇಂದ್ರಿಯಾಸಕ್ತಿ; ವಿಷಯಾಸಕ್ತಿ; ವಿಷಯಸುಖಗಳ ಅಪೇಕ್ಷೆ: gratification of the flesh ವಿಷಯಾಸಕ್ತಿಯ ತೃಪ್ತಿ.
  8. (ಮನಸ್ಸು ಯಾ ಆತ್ಮಕ್ಕೆ ವಿರುದ್ಧವಾಗಿ) ದೇಹ; ಶರೀರ; ಒಡಲು: the spirit is willing but the flesh is weak ಮನಸ್ಸು ಇಷ್ಟಪಡುತ್ತಿದೆ, ಆದರೆ ದೇಹಕ್ಕೆ (ದೈಹಿಕಾಸಕ್ತಿಗಳಿಗೆ) ಹಿಡಿಸದು.
  9. ಮನುಷ್ಯರು; ಮಾನವ ಜನಾಂಗ; ಮನುಷ್ಯಜಾತಿ.
  10. (ನೈತಿಕ ಯಾ ಆಧ್ಯಾತ್ಮಿಕ ಅಂಶಗಳಿಂದ ಭಿನ್ನವಾದ) ಮನುಷ್ಯ ಸ್ವಭಾವ; ಮಾನವ ಪ್ರಕೃತಿ; ಮಾನವನ ಸ್ವಾಭಾವಿಕ ದೈಹಿಕ ಗುಣಗಳು.
  11. = flesh side.
ಪದಗುಚ್ಛ
  1. flesh and blood
    1. ದೇಹ; ಮೈ; ಶರೀರ.
    2. ರಕ್ತಮಾಂಸ; ದೇಹಪದಾರ್ಥ; ದೇಹವು ಯಾವ ಸಾಮಗ್ರಿಗಳಿಂದಾಗಿದೆಯೋ ಅವು.
    3. ಮಾನವಕುಲ; ಮನುಷ್ಯಜಾತಿ; ಮನುಷ್ಯವರ್ಗ.
    4. (ಕಾಮ, ರಾಗ, ಮನೋದೌರ್ಬಲ್ಯಗಳಿಂದ ಕೂಡಿದ) ಮನುಷ್ಯಸ್ವಭಾವ; ಮಾನವ ಪ್ರಕೃತಿ: more than flesh and blood can stand ಮಾನವಸ್ವಭಾವಕ್ಕೆ ಈರಿ.
    5. ಜೀವಂತವಾದ; (ಅಧಿಭೌತ ಯಾ ಕಾಲ್ಪನಿಕ ಆಗಿರದೆ) ನಿಜವಾಗಿ ಬದುಕಿರುವ, ಜೀವಿಸಿರುವ.
  2. in flesh
    1. ಮೈತುಂಬಿಕೊಂಡು; ದಷ್ಟಪುಷ್ಟವಾಗಿ; ಮಾಂಸಲವಾಗಿ.
    2. ಬೊಜ್ಜು ಬೆಳೆದು.
ನುಡಿಗಟ್ಟು
  1. after the flesh ದೈಹಿಕವಾಗಿ; ಶಾರೀರಿಕವಾಗಿ.
  2. all flesh ಎಲ್ಲ – ದೇಹಿಗಳು, ಶರೀರಿಗಳು; ದೇಹವುಳ್ಳದ್ದೆಲ್ಲವೂ.
  3. flesh and fell
    1. ಇಡೀ ದೇಹ; ಪೂರ್ತಿ ಮೈ.
    2. ಪೂರ್ತಿಯಾಗಿ; ಸಂಪೂರ್ಣವಾಗಿ.
  4. go the way of all flesh ಸಾಯು.
  5. in the flesh
    1. ದೇಹದೊಡನೆ; ದೇಹವಿಶಿಷ್ಟವಾಗಿ; ಸಶರೀರವಾಗಿ; ದೇಹಹೊತ್ತು; ಮೂರ್ತಿಮತ್ತಾಗಿ.
    2. ಜೀವಂತವಾಗಿ.
  6. make person’s flesh creep (ಮುಖ್ಯವಾಗಿ ಅತಿಮಾನುಷ ಶಕ್ತಿಗಳ ಭಯದಿಂದ) ಮೈಜುಮ್ಮೆನಿಸು; ಅತಿ ದಿಗಿಲುಬೀಳಿಸು; ಗಾಬರಿಗೊಳಿಸು; ಭೀತಿ ಹುಟ್ಟಿಸು.
  7. neither 1fish, flesh nor good red herring
  8. one flesh ಒಂದೇ ವ್ಯಕ್ತಿಯಂತೆ ಒಟ್ಟುಗೂಡಿರುವ; ಒಂದೇ ದೇಹದಂತಿರುವ.
  9. one’s own flesh and blood
    1. ರಕ್ತಸಂಬಂಧಿಗಳು; ಹತ್ತಿರದ ಸಂಬಂಧಿಗಳು.
    2. ತನ್ನ ಸಂತತಿಯವರು; ವಂಶಜರು.
  10. proud flesh ಗಾಯದ ಮೇಲೆ ಏಳುವ ಗುಳ್ಳೆಗಳು.
  11. sins of the flesh ವ್ಯಭಿಚಾರ; ಹಾದರ.
  12. the way of all flesh ಮಾನವಾನುಭವ; ಎಲ್ಲ ಮನುಷ್ಯರಿಗೂ ಸಮಾನವಾಗಿರುವ ಅನುಭವ.
See also 1flesh
2flesh ಹ್ಲೆಷ್‍
ಸಕರ್ಮಕ ಕ್ರಿಯಾಪದ
  1. (ಬೇಟೆನಾಯಿ ಮೊದಲಾದವುಗಳಿಗೆ ರಕ್ತದ ರುಚಿ ತೋರಿಸಿ) ಪ್ರೇರಿಸು; ಉದ್ರೇಕಿಸು; ಪ್ರಚೋದಿಸು.
  2. ಕೊಲೆಮಾಡಲು ಪ್ರೇರೇಪಿಸು; ರಕ್ತಪಾತಕ್ಕೆ ತೊಡಗಿಸು.
  3. (ಗೆಲವಿನ ಮುನ್‍ಸೂಚನೆ ತೋರಿಸಿ) ಉದ್ರೇಕಿಸು; ಕೆರಳಿಸು.
  4. (ಖಡ್ಗಕ್ಕೆ) ಮೊದಲ ಸಲಕ್ಕೆ ಮಾಂಸದ ರುಚಿ ತೋರಿಸು.
  5. (ರೂಪಕವಾಗಿ) (ಲೇಖನಿ, ಬುದ್ಧಿ, ಮೊದಲಾದವನ್ನು) ಪ್ರಥಮಬಾರಿಗೆ ಬಳಸು; ಮೊದಲನೆಯ ಸಲ–ಉಪಯೋಗಿಸು, ಪ್ರಯೋಗಿಸು.
  6. ದೇಹವತ್ತಾಗಿಸು; ಮಾಂಸ – ಹೊದ್ದಿಸು, ತುಂಬು; ಮೂರ್ತಸ್ವರೂಪ ಕೊಡು.
ನುಡಿಗಟ್ಟು

flesh out

  1. ಮೂರ್ತೀಕರಿಸು; ಮೂರ್ತಿಮತ್ತಾಗಿ ಮಾಡು; ದೇಹವತ್ತಾಗಿ ಮಾಡು.
  2. ದೇಹ ಧರಿಸು; ಮೂರ್ತಿಮತ್ತಾಗು.