2flesh
ಸಕರ್ಮಕ ಕ್ರಿಯಾಪದ
- (ಬೇಟೆನಾಯಿ ಮೊದಲಾದವುಗಳಿಗೆ ರಕ್ತದ ರುಚಿ ತೋರಿಸಿ) ಪ್ರೇರಿಸು; ಉದ್ರೇಕಿಸು; ಪ್ರಚೋದಿಸು.
- ಕೊಲೆಮಾಡಲು ಪ್ರೇರೇಪಿಸು; ರಕ್ತಪಾತಕ್ಕೆ ತೊಡಗಿಸು.
- (ಗೆಲವಿನ ಮುನ್‍ಸೂಚನೆ ತೋರಿಸಿ) ಉದ್ರೇಕಿಸು; ಕೆರಳಿಸು.
- (ಖಡ್ಗಕ್ಕೆ) ಮೊದಲ ಸಲಕ್ಕೆ ಮಾಂಸದ ರುಚಿ ತೋರಿಸು.
- (ರೂಪಕವಾಗಿ) (ಲೇಖನಿ, ಬುದ್ಧಿ, ಮೊದಲಾದವನ್ನು) ಪ್ರಥಮಬಾರಿಗೆ ಬಳಸು; ಮೊದಲನೆಯ ಸಲ–ಉಪಯೋಗಿಸು, ಪ್ರಯೋಗಿಸು.
- ದೇಹವತ್ತಾಗಿಸು; ಮಾಂಸ – ಹೊದ್ದಿಸು, ತುಂಬು; ಮೂರ್ತಸ್ವರೂಪ ಕೊಡು.
ನುಡಿಗಟ್ಟು
flesh out
- ಮೂರ್ತೀಕರಿಸು; ಮೂರ್ತಿಮತ್ತಾಗಿ ಮಾಡು; ದೇಹವತ್ತಾಗಿ ಮಾಡು.
- ದೇಹ ಧರಿಸು; ಮೂರ್ತಿಮತ್ತಾಗು.