See also 2fleet  3fleet  4fleet  5fleet  6fleet
1fleet ಹ್ಲೀಟ್‍
ನಾಮವಾಚಕ
  1. ಹಡಗುಪಡೆ; ನೌಸೇನೆ; ನೌಕಾಬಲ; ನೌಕಾ – ಸೈನ್ಯ, ದಳ; ಒಬ್ಬ ನೌಕಾಧಿಪತಿಯ ಅಧೀನದಲ್ಲಿರುವ ಯುದ್ಧದ ಹಡಗುಗಳು.
  2. ಹಡಗುಸಾಲು; ದೋಣಿತಂಡ; ನೌಕಾತಂಡ; ಒಟ್ಟಾಗಿ ಚಲಿಸುವ ಹಲವು ಹಡಗುಗಳು ಯಾ ದೋಣಿಗಳು.
  3. ವಿಮಾನತಂಡ; ವಿಮಾನಶ್ರೇಣಿ; ವಿಮಾನಪಂಕ್ತಿ.
ಪದಗುಚ್ಛ
  1. Fleet Air Arm (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ರಾಯಲ್‍ ನೌಕಾಪಡೆಯ ವೈಮಾನಿಕ ಸೇವಾ ಶಾಖೆ.
  2. fleet of cabs, taxis, etc., (ಒಬ್ಬ ಮಾಲಿಕನ ಹತ್ತಿರ ಇರುವ) ಬಾಡಿಗೆ ಗಾಡಿಗಳ ಯಾ ಮೋಟಾರು ಕಾರುಗಳ ಸಮೂಹ, ತಂಡ.
  3. the fleet ನೌಕಾಬಲ; ನೌಕಾಸೈನ್ಯ.
See also 1fleet  3fleet  4fleet  5fleet  6fleet
2fleet ಹ್ಲೀಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಂತೀಯ ಪ್ರಯೋಗ) ಖಾರಿ; ಖಾತ; ಕಡಲ ಚಾಚು.

ಪದಗುಚ್ಛ

the Fleet

  1. ಲಂಡನ್ನಿನಲ್ಲಿ ಹ್ಲೀಟ್‍ ರಸ್ತೆಯ ಪೂರ್ವಕ್ಕೆ, ಥೇಮ್ಸ್‍ ನದಿಗೆ ಹೋಗಿ ಸೇರುವ ಒಂದು ತೊರೆ.
  2. (ಚರಿತ್ರೆ) ಇದರ ಬಳಿ ಇದ್ದ ಸೆರೆಮನೆ; ಹ್ಲೀಟ್‍ ಬಂದೀಖಾನೆ.
See also 1fleet  2fleet  4fleet  5fleet  6fleet
3fleet ಹ್ಲೀಟ್‍
ಗುಣವಾಚಕ

(ಕಾವ್ಯಪ್ರಯೋಗ)

  1. ಕ್ಷಿಪ್ರ; ಶೀಘ್ರ; ವೇಗವಾದ; ಚುರುಕಾದ: antelope, the fleetest quadruped on earth ಭೂಮಿಯಲ್ಲೇ ಅತ್ಯಂತ ವೇಗವಾದ ಚತುಷ್ಪಾದಿ, ಎರಳೆ.
  2. ಕ್ಷಣಿಕ; ನಶ್ವರ; ಅಶಾಶ್ವತ; ಕ್ಷಣಭಂಗುರ .
See also 1fleet  2fleet  3fleet  5fleet  6fleet
4fleet ಹ್ಲೀಟ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಪ್ರಾಂತೀಯ ಪ್ರಯೋಗ) (ನೀರಿನ ವಿಷಯದಲ್ಲಿ) ಆಳವಿಲ್ಲದ; ಕಡಿಮೆ ಆಳದ.

See also 1fleet  2fleet  3fleet  4fleet  6fleet
5fleet ಹ್ಲೀಟ್‍
ಕ್ರಿಯಾವಿಶೇಷಣ

(ಬ್ರಿಟಿಷ್‍ ಪ್ರಯೋಗ) ಮೇಲೆ ಮೇಲೆಯೇ; ಹೆಚ್ಚು ಆಳದಲ್ಲಲ್ಲದೆ ಯಾ ಹೆಚ್ಚು ಆಳಕ್ಕೆ ಹೋಗದೆ: plough or sow fleet ಮೇಲೆ ಮೇಲೆಯೇ ಉಳು ಯಾ ಬಿತ್ತು; ಹೆಚ್ಚು ಆಳಕ್ಕೆ ಹೋಗದೆಯೇ ಮೇಲ್ಮಟ್ಟದಲ್ಲೇ ಉಳು ಯಾ ಬಿತ್ತು.

See also 1fleet  2fleet  3fleet  4fleet  5fleet
6fleet ಹ್ಲೀಟ್‍
ಸಕರ್ಮಕ ಕ್ರಿಯಾಪದ

(ಕಾಲ) ಕಳೆ; ವ್ಯರ್ಥಮಾಡು; ಪೋಲು ಮಾಡು: many young gentlemen fleet the time carelessly ಹಲವು ಜನ ಕುಲೀನ ತರುಣರು ನಿಶ್ಚಿಂತೆಯಿಂದ ಕಾಲ ಕಳೆಯುತ್ತಾರೆ.

ಅಕರ್ಮಕ ಕ್ರಿಯಾಪದ
  1. (ನದಿಯಂತೆ) ಜಾರಿಹೋಗು; ಗೊತ್ತಾಗದಂತೆ ಸರಿ; ಹೊರಟುಹೋಗು: they had fleeted out of the country ಅವರು ದೇಶದಿಂದ ಗೊತ್ತಾಗದಂತೆ ಹೊರಟುಹೋದರು.
  2. ಕಾಣದೆ ಹೋಗು; ಕಾಣದಂತಾಗು; ಮರೆಯಾಗು; ಮಾಯವಾಗು; ಅದೃಶ್ಯವಾಗು: the wandering ghosts fleet to the shades ಅಲೆದಾಡುವ ಪ್ರೇತಗಳು ಛಾಯೆಯಲ್ಲಿ ಅದೃಶ್ಯವಾಗಿ ಹೋಗುತ್ತವೆ.
  3. ನಶ್ವರವಾಗಿರು; ಕ್ಷಣಿಕವಾಗಿರು: the wealth that the gods give lasts, and fleets not away ದೇವತೆಗಳು ಕೊಡುವ ಐಶ್ವರ್ಯ ಚಿರಸ್ಥಾಯಿಯಾದುದು, ಕ್ಷಣಿಕವಾದುದಲ್ಲ.
  4. ಬೇಗ ಕಳೆದುಹೋಗು; ಅರಿವೇ ಆಗದಂತೆ ಜಾರಿ ಹೋಗು: time may fleet and youth may fade ನಮಗೆ ಅರಿವೇ ಆಗದಂತೆ ಕಾಲ ಕಳೆದು ಹೋಗಬಹುದು, ಯೌವನವೂ ಬಾಡಿಹೋಗಬಹುದು.
  5. ಬೇಗನೆ ಚಲಿಸು; ಹಾರಿ ಹೋಗು: clouds of sand fleeting along the surface of the desert ಮರಳುಗಾಡಿನ ಹೊರಮೈಯ ಮೇಲೆ ಹಾರಿಹೋಗುತ್ತಿರುವ ಮರಳುರಾಶಿಗಳು.