See also 2fleet  3fleet  4fleet  5fleet  6fleet
1fleet ಹ್ಲೀಟ್‍
ನಾಮವಾಚಕ
  1. ಹಡಗುಪಡೆ; ನೌಸೇನೆ; ನೌಕಾಬಲ; ನೌಕಾ – ಸೈನ್ಯ, ದಳ; ಒಬ್ಬ ನೌಕಾಧಿಪತಿಯ ಅಧೀನದಲ್ಲಿರುವ ಯುದ್ಧದ ಹಡಗುಗಳು.
  2. ಹಡಗುಸಾಲು; ದೋಣಿತಂಡ; ನೌಕಾತಂಡ; ಒಟ್ಟಾಗಿ ಚಲಿಸುವ ಹಲವು ಹಡಗುಗಳು ಯಾ ದೋಣಿಗಳು.
  3. ವಿಮಾನತಂಡ; ವಿಮಾನಶ್ರೇಣಿ; ವಿಮಾನಪಂಕ್ತಿ.
ಪದಗುಚ್ಛ
  1. Fleet Air Arm (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ರಾಯಲ್‍ ನೌಕಾಪಡೆಯ ವೈಮಾನಿಕ ಸೇವಾ ಶಾಖೆ.
  2. fleet of cabs, taxis, etc., (ಒಬ್ಬ ಮಾಲಿಕನ ಹತ್ತಿರ ಇರುವ) ಬಾಡಿಗೆ ಗಾಡಿಗಳ ಯಾ ಮೋಟಾರು ಕಾರುಗಳ ಸಮೂಹ, ತಂಡ.
  3. the fleet ನೌಕಾಬಲ; ನೌಕಾಸೈನ್ಯ.