See also 1fleet  2fleet  3fleet  4fleet  5fleet
6fleet ಹ್ಲೀಟ್‍
ಸಕರ್ಮಕ ಕ್ರಿಯಾಪದ

(ಕಾಲ) ಕಳೆ; ವ್ಯರ್ಥಮಾಡು; ಪೋಲು ಮಾಡು: many young gentlemen fleet the time carelessly ಹಲವು ಜನ ಕುಲೀನ ತರುಣರು ನಿಶ್ಚಿಂತೆಯಿಂದ ಕಾಲ ಕಳೆಯುತ್ತಾರೆ.

ಅಕರ್ಮಕ ಕ್ರಿಯಾಪದ
  1. (ನದಿಯಂತೆ) ಜಾರಿಹೋಗು; ಗೊತ್ತಾಗದಂತೆ ಸರಿ; ಹೊರಟುಹೋಗು: they had fleeted out of the country ಅವರು ದೇಶದಿಂದ ಗೊತ್ತಾಗದಂತೆ ಹೊರಟುಹೋದರು.
  2. ಕಾಣದೆ ಹೋಗು; ಕಾಣದಂತಾಗು; ಮರೆಯಾಗು; ಮಾಯವಾಗು; ಅದೃಶ್ಯವಾಗು: the wandering ghosts fleet to the shades ಅಲೆದಾಡುವ ಪ್ರೇತಗಳು ಛಾಯೆಯಲ್ಲಿ ಅದೃಶ್ಯವಾಗಿ ಹೋಗುತ್ತವೆ.
  3. ನಶ್ವರವಾಗಿರು; ಕ್ಷಣಿಕವಾಗಿರು: the wealth that the gods give lasts, and fleets not away ದೇವತೆಗಳು ಕೊಡುವ ಐಶ್ವರ್ಯ ಚಿರಸ್ಥಾಯಿಯಾದುದು, ಕ್ಷಣಿಕವಾದುದಲ್ಲ.
  4. ಬೇಗ ಕಳೆದುಹೋಗು; ಅರಿವೇ ಆಗದಂತೆ ಜಾರಿ ಹೋಗು: time may fleet and youth may fade ನಮಗೆ ಅರಿವೇ ಆಗದಂತೆ ಕಾಲ ಕಳೆದು ಹೋಗಬಹುದು, ಯೌವನವೂ ಬಾಡಿಹೋಗಬಹುದು.
  5. ಬೇಗನೆ ಚಲಿಸು; ಹಾರಿ ಹೋಗು: clouds of sand fleeting along the surface of the desert ಮರಳುಗಾಡಿನ ಹೊರಮೈಯ ಮೇಲೆ ಹಾರಿಹೋಗುತ್ತಿರುವ ಮರಳುರಾಶಿಗಳು.