See also 2flare
1flare ಹ್ಲೇರ್‍
ಸಕರ್ಮಕ ಕ್ರಿಯಾಪದ

ಭಗ್ಗನೆ ಉರಿಯುವಂತೆ, ಉರಿಹೊತ್ತಿಕೊಳ್ಳುವಂತೆ – ಮಾಡು.

ಅಕರ್ಮಕ ಕ್ರಿಯಾಪದ
  1. (ಹಡಗಿನ ಪಕ್ಕಗಳು, ಮದ್ಯದ ಲೋಟ, ಷರಾಯಿ, ಸ್ಕರ್ಟ್‍ ಮೊದಲಾದವುಗಳ ವಿಷಯದಲ್ಲಿ) ಕ್ರಮೇಣ ಮೇಲ್ಮುಖವಾಗಿ ಯಾ ಕೆಳಮುಖವಾಗಿ ಅಗಲವಾಗು.
  2. ಭಗ್ಗನೆ ಉರಿಹೊತ್ತಿಕೊ.
  3. (ಚಂಚಲ ಜ್ವಾಲೆಯಿಂದ) ಧಗಧಗಿಸು.
  4. ಉರಿಯಂತೆ ಪ್ರಜ್ವಲಿಸು; ಕಣ್ಣುಕೋರೈಸು; ಕಣ್ಣಿಗೆ ಬಡಿ, ತಾಗು.
  5. ಫಕ್ಕನೆ – ಕೆರಳು, ರೇಗು ಸಿಟ್ಟಾಗು.
  6. ಫಕ್ಕನೆ – ಕಾರ್ಯಕಾರಿಯಾಗು, ಕೆಲಸ ಮಾಡಲು ಪ್ರಾರಂಭಿಸು, ಚಟುವಟಿಕೆ ಆರಂಭಿಸು.
ಪದಗುಚ್ಛ

flare up (or out)

  1. ಭುಗಿಲೇಳು; ಭಗ್ಗನೆ ಹೊತ್ತಿಕೊ.
  2. ಫಕ್ಕನೆ – ರೇಗು; ಕೆರಳು.
  3. ಫಕ್ಕನೆ – ಕೆಲಸ ಮಾಡಲು ಶುರುಮಾಡು; ಇದ್ದಕ್ಕಿದ್ದಂತೆ ಚಟುವಟಿಕೆ ಪ್ರಾರಂಭಿಸು.
See also 1flare
2flare ಹ್ಲೇರ್‍
ನಾಮವಾಚಕ
  1. ಕಣ್ಣು ಕೋರೈಸುವ ಚಂಚಲ ಬೆಳಕು.
  2. ಮರೆಯಿಲ್ಲದೆ ಬಯಲಿನಲ್ಲಿ ಪ್ರಜ್ವಲಿಸುವ ಉರಿ.
  3. ಭುಗಿಲು; ಭಗ್ಗನೆ ಹೊತ್ತಿಕೊಂಡ ಉರಿ.
  4. ಸನ್ನೆ ಬೆಳಕು; ಸಂಕೇತದೀಪ:
    1. ಸಮುದ್ರದಲ್ಲಿ ಸಂಕೇತಕ್ಕಾಗಿ ಉಪಯೋಗಿಸುವ ಉರಿ ಯಾ ಬೆಳಕು.
    2. ಸಂಕೇತಕ್ಕಾಗಿ ಉಪಯೋಗಿಸುವ ಪ್ರಜ್ವಲಿಸುವ ಬೆಳಕು.
  5. ಉರಿ ಚೀಲ; ಬೆಂಕಿಕೋಶ; ದಾಳಿ ಇಡುವ ಸ್ಥಳವನ್ನು ಬೆಳಗಲು ವಿಮಾನದಿಂದ ಕೆಳಕ್ಕೆ ಹಾಕುವ ಉರಿಯುವ ವಸ್ತುವಿರುವ ಕೋಶ.
  6. ಆಡಂಬರ.
  7. ಹಡಗಿನ ಪಕ್ಕಗಳ ಮೇಲುಬ್ಬು.
  8. (ಮುಖ್ಯವಾಗಿ ಹೆಂಗಸರ ಲಂಗದ) ಕೆಳಭಾಗದ ಉಬ್ಬು, ಅಗಲ ಭಾಗ.
  9. (ಖಗೋಳ ವಿಜ್ಞಾನ) (ಸೌರ) ವಿಕಿರಣಸ್ಫೋಟ; ವಿಕಿರಣ ಭುಗಿಲು; ಸೂರ್ಯನ ಮೇಲೆ, ಇತರ ತಾರೆಗಳ ಮೇಲೆ ಕೆಲವು ವೇಳೆ ಇದ್ದಕ್ಕಿದ್ದಂತೆ ಸಿಡಿದೇಳುವ ವಿಕಿರಣ ಪ್ರವಾಹ.
  10. (ಛಾಯಾಚಿತ್ರಣ) (ಆಂತರಿಕ ಪ್ರತಿಫಲನ ಮೊದಲಾದವುಗಳಿಂದ ಉಂಟಾದ ಪ್ರತಿಬಿಂಬವನ್ನು ಮಸಕುಗೊಳಿಸುವ) ಅಧಿಕ ಪ್ರಕಾಶ; ಹೆಚ್ಚಿನ ಬೆಳಕು.
ಪದಗುಚ್ಛ

flare path ದೀಪ್ತಪಥ; ಬೆಳಕುಹಾದಿ; ವಿಮಾನವು ಮೇಲೇರಲು, ಕೆಳಕ್ಕೆ ಇಳಿಯಲು ಅನುಕೂಲವಾಗುವಂತೆ ಬೆಳಕು ಚೆಲ್ಲಿದ ಪ್ರದೇಶ.