See also 2flare
1flare ಹ್ಲೇರ್‍
ಸಕರ್ಮಕ ಕ್ರಿಯಾಪದ

ಭಗ್ಗನೆ ಉರಿಯುವಂತೆ, ಉರಿಹೊತ್ತಿಕೊಳ್ಳುವಂತೆ – ಮಾಡು.

ಅಕರ್ಮಕ ಕ್ರಿಯಾಪದ
  1. (ಹಡಗಿನ ಪಕ್ಕಗಳು, ಮದ್ಯದ ಲೋಟ, ಷರಾಯಿ, ಸ್ಕರ್ಟ್‍ ಮೊದಲಾದವುಗಳ ವಿಷಯದಲ್ಲಿ) ಕ್ರಮೇಣ ಮೇಲ್ಮುಖವಾಗಿ ಯಾ ಕೆಳಮುಖವಾಗಿ ಅಗಲವಾಗು.
  2. ಭಗ್ಗನೆ ಉರಿಹೊತ್ತಿಕೊ.
  3. (ಚಂಚಲ ಜ್ವಾಲೆಯಿಂದ) ಧಗಧಗಿಸು.
  4. ಉರಿಯಂತೆ ಪ್ರಜ್ವಲಿಸು; ಕಣ್ಣುಕೋರೈಸು; ಕಣ್ಣಿಗೆ ಬಡಿ, ತಾಗು.
  5. ಫಕ್ಕನೆ – ಕೆರಳು, ರೇಗು ಸಿಟ್ಟಾಗು.
  6. ಫಕ್ಕನೆ – ಕಾರ್ಯಕಾರಿಯಾಗು, ಕೆಲಸ ಮಾಡಲು ಪ್ರಾರಂಭಿಸು, ಚಟುವಟಿಕೆ ಆರಂಭಿಸು.
ಪದಗುಚ್ಛ

flare up (or out)

  1. ಭುಗಿಲೇಳು; ಭಗ್ಗನೆ ಹೊತ್ತಿಕೊ.
  2. ಫಕ್ಕನೆ – ರೇಗು; ಕೆರಳು.
  3. ಫಕ್ಕನೆ – ಕೆಲಸ ಮಾಡಲು ಶುರುಮಾಡು; ಇದ್ದಕ್ಕಿದ್ದಂತೆ ಚಟುವಟಿಕೆ ಪ್ರಾರಂಭಿಸು.