See also 2fine  3fine  4fine  5fine  6fine  7fine
1fine ಹೈನ್‍
ನಾಮವಾಚಕ
  1. (ಊಳಿಗಮಾನ್ಯದ ಕಾನೂನು) ಊಳಿಗದ ರುಸುಮು; ಹಿಡುವಳಿ ಹಕ್ಕು ಮೊದಲಾದವನ್ನು ವಹಿಸಿಕೊಂಡಾಗ ಹಿಡುವಳಿದಾರ ಯಾ ಊಳಿಗದಾರ ಆ ಕ್ಷೇತ್ರದ ಯಜಮಾನನಿಗೆ ಕೊಡುವ ಕಂದಾಯವಲ್ಲದ ರುಸುಮು.
  2. (ತಪ್ಪು ಯಾ ಅಪರಾಧ ಮಾಡಿದುದಕ್ಕಾಗಿ ವಿಧಿಸಿದ) ದಂಡ; ಜುಲ್ಮಾನೆ; ತಪ್ಪು ಕಾಣಿಕೆ.
ನುಡಿಗಟ್ಟು

in fine

  1. ಒಟ್ಟಿನಲ್ಲಿ; ಒಟ್ಟಾರೆ.
  2. ಅಂತಿಮವಾಗಿ; ಅಖೈರಾಗಿ; ಕೊನೆಯದಾಗಿ.
  3. ಸಂಕ್ಷಿಪ್ತವಾಗಿ; ಹ್ರಸ್ವವಾಗಿ.
See also 1fine  3fine  4fine  5fine  6fine  7fine
2fine ಹೈನ್‍
ಸಕರ್ಮಕ ಕ್ರಿಯಾಪದ

ದಂಡ ಹಾಕು; ಜುಲ್ಮಾನೆ ವಿಧಿಸು, ಹಾಕು: fined him Rs.50 ಅವನಿಗೆ 50 ರೂಪಾಯಿ ದಂಡಹಾಕಿದರು.

See also 1fine  2fine  4fine  5fine  6fine  7fine
3fine ಹೈನ್‍
ಗುಣವಾಚಕ
  1. ಉತ್ತಮ – ತೆರದ, ಗುಣದ; ಮೇಲಾದ; ಶ್ರೇಷ್ಠ; ಉತ್ಕೃಷ್ಟ.
  2. ನಿರ್ಮಲ; ಸ್ವಚ್ಛ; ಶುಭ್ರ.
  3. ಶುದ್ಧ; ಅಪ್ಪಟ; ಪರಿಶುದ್ಧ; ಸಂಸ್ಕರಿಸಿದ.
  4. (ಚಿನ್ನ, ಬೆಳ್ಳಿ ಮೊದಲಾದ ಲೋಹಗಳ ವಿಷಯದಲ್ಲಿ) ಅಪ್ಪಟ; ಚೊಕ್ಕ; ನಿರ್ದಿಷ್ಟ ಪ್ರಮಾದ ಶುದ್ಧ ಲೋಹವುಳ್ಳ: fine gold ಅಪ್ಪಟ ಚಿನ್ನ: 24 ಕ್ಯಾರೆಟ್‍ ಚಿನ್ನ. gold 22 carats fine ಇಪ್ಪತ್ತನಾಲ್ಕರಲ್ಲಿ 22 ಭಾಗ ಚೊಕ್ಕ ಚಿನ್ನ ಮತ್ತು 2 ಭಾಗ ಮಿಶ್ರ ಲೋಹವುಳ್ಳ ಚಿನ್ನ.
  5. ಸೂಕ್ಷ್ಮವಾದ; ನಯವಾದ; ನವುರಾದ.
  6. ಕುಸುರಿ ಕೆಲಸದ ; ನಾಜೂಕಾದ ; ಸೂಕ್ಷ್ಮಕೌಶಲದ.
  7. (ಭಾವಗಳು) ಉದಾತ್ತ; ಉಚ್ಚ; ಉನ್ನತ.
  8. ಸೂಕ್ಷ್ಮತಂತುವುಳ್ಳ; ನವುರಾದ ಎಳೆಯುಳ್ಳ.
  9. ಸೂಕ್ಷ್ಮಕಣಗಳಿಂದ ಕೂಡಿದ.
  10. ತೆಳುವಾದ ; ಸಪುರ; ತೆಳ್ಳನೆಯ: fine figure ಸಪುರಾದ ಮೈಮಾಟ.
  11. ಚೂಪಾದ; ಮೊನಚಾದ: fine pen ಚೂಪುಮೊನೆ ಲೇಖನಿ.
  12. (ಮುದ್ರಣ, ಅಕ್ಷರದ ವಿಷಯದಲ್ಲಿ) ಕಿರು; ಸಣ್ಣ (ಗಾತ್ರದ).
  13. ಸೂಕ್ಷ್ಮಗ್ರಹಣಶಕ್ತಿಯುಳ್ಳ ಯಾ ಸೂಕ್ಷ್ಮ ವಿವೇಚನಾಶಕ್ತಿಯುಳ್ಳ.
  14. ಸೂಕ್ಷ್ಮ (ಗ್ರಾಹ್ಯ); ಸುಲಭವಾಗಿ – ಕಾಣಿಸದ, ಗೋಚರಿಸದ: a fine distinction ಸೂಕ್ಷ್ಮ ವ್ಯತ್ಯಾಸ.
  15. ಅತ್ಯುತ್ತಮ; ಅತ್ಯುತ್ಕೃಷ್ಟ; ವಿಶೇಷ ಯೋಗ್ಯತೆಯುಳ್ಳ.
  16. ಒಳ್ಳೆಯ; ತೃಪ್ತಿಕರವಾದ.
  17. ಸುಯೋಗದ; ಅದೃಷ್ಟದ: had fine sport ಸುಯೋಗದಿಂದ ಒಳ್ಳೆಯ ಬೇಟೆ ಸಿಕ್ಕಿತು. (ಅನೇಕವೇಳೆ ವ್ಯಂಗ್ಯವಾಗಿ). a fine friend you have been! ಎಂಥ ಒಳ್ಳೆಯ ಗೆಳೆಯನಯ್ಯ! a fine excuse ಒಳ್ಳೆಯ ನೆವ. all very fine, but..... ಎಲ್ಲ ಬಹಳ ಚೆನ್ನಾಗಿದೆ, ಆದರೆ....
  18. ಉತ್ಕೃಷ್ಟವಾಗಿ ರೂಪಿಸಿದ ಯಾ ವ್ಯಕ್ತಪಡಿಸಿದ.
  19. (ನೋಟದಲ್ಲಿ ಯಾ ಗಾತ್ರದಲ್ಲಿ) ಸೊಗಸಾದ; ಒಳ್ಳೆಯ: fine potatoes ಒಳ್ಳೆಯ (ಗಾತ್ರದ) ಆಲೂಗೆಡ್ಡೆಗಳು.
  20. ಆರೋಗ್ಯಕರವಾದ: I am in fine health ನಾನು ಆರೋಗ್ಯವಾಗಿದ್ದೇನೆ.
  21. (ಹವೆ ಮೊದಲಾದವುಗಳ ವಿಷಯದಲ್ಲಿ) ಶುಭ್ರ; ಹಿತಕರವಾದ; ಹಿಮವಿಲ್ಲದ, ಮೋಡವಿಲ್ಲದ, ಯಾ ಮಳೆ ಇಲ್ಲದ: fine day ಮೋಡವಿಲ್ಲದ ಹಗಲು.
  22. ಅಲಂಕಾರವಾದ; ನೀಟಾದ; ಠೀಕಾದ; ಬೆಡಗಿನ: fine feathers ನೀಟಾದ ಗರಿಗಳು.
  23. ಅತಿ ನಾಜೂಕಿನ; ಅತಿ ಬೆಡಗಿನ.
  24. (ಭಾಷೆ, ಬರವಣಿಗೆಗಳ ವಿಷಯದಲ್ಲಿ)
    1. ಅತ್ಯಲಂಕಾರದ; ಅತಿಶಯಿಸಿದ.
    2. ಅತಿ ನಯದ; ಪ್ರಾಮಾಣಿಕವಲ್ಲದ; ಹೊಗಳಿಕೆಯ; ಔಪಚಾರಿಕ: say fine things about person ಒಬ್ಬ ವ್ಯಕ್ತಿಯ ಬಗ್ಗೆ ಹೊಗಳಿಕೆಯ ಮಾತನಾಡು.
    3. ಚಂದದ; ಅಂದವಾದ; ಸುಂದರವಾದ: call things by fine names ಸುಂದರವಾದ ಹೆಸರುಗಳಿಂದ ಕರೆ; ಅಂದವಾದ ಹೆಸರಿಡು.
  25. ಅಂದವಾದ; ಸುಂದರವಾದ; ಲಕ್ಷಣವಾದ: a fine young lady ಸುಂದರ ಯುವತಿ.
ಪದಗುಚ್ಛ
  1. fine chemicals.
  2. fine feathers ಬೆಡಗಿನ ಗರಿಗಳು (ರೂಪಕವಾಗಿ ಸಹ): fine feathers make fine birds ರೆಕ್ಕೆ ಚೆನ್ನಾಗಿದ್ದರೆ ಹಕ್ಕಿ ಚೆನ್ನ; ಅಲಂಕಾರವಿದ್ದರೆ ರೂಪೂ ಸುಂದರ.
  3. fine gentleman, lady ನೀಟುಗಾರ, ನೀಟುಗಾತಿ; ಕೆಲಸಮಾಡುವುದು ಗೌರವಕ್ಕೆ ಕುಂದು ಎಂದು ಭಾವಿಸುವ ಗಂಡಸು, ಹೆಂಗಸು.
ನುಡಿಗಟ್ಟು
  1. cut (or run) it fine (ಕಾಲ, ಅಂತರ, ಮೊದಲಾದವುಗಳ ವಿಷಯದಲ್ಲಿ) ಅತ್ಯಲ್ಪ – ಅಂತರ ಬಿಡು, ಅವಕಾಶ ನೀಡು.
  2. one fine day ಒಂದಾನೊಂದು ದಿನ.
  3. one of these days ಎಂದಾದರೊಂದು ದಿನ; ಭವಿಷ್ಯದಲ್ಲಿ ಎಂದಾದರೂ.
See also 1fine  2fine  3fine  5fine  6fine  7fine
4fine ಹೈನ್‍
ನಾಮವಾಚಕ
  1. ಒಳ್ಳೆಯ – ಹವೆ, ವಾಯು ಗುಣ; ಮಳೆಗಾಳಿ ಚಳಿ – ಕೊರೆತ ಇಲ್ಲದೆ ಬೆಚ್ಚಗಿರುವ ಹವೆ: in rain or fine ಮಳೆ ಇರಲಿ, ಇಲ್ಲದಿರಲಿ; ಮಳೆಯಾಗಲಿ, ಬಿಸಿಲಾಗಲಿ.
  2. (ಬಹುವಚನದಲ್ಲಿ) (ಗಣಿ, ಗಿರಣಿ, ಮೊದಲಾದವುಗಳಲ್ಲಿನ) ಸೂಕ್ಷ್ಮ ಕಣಗಳು.
See also 1fine  2fine  3fine  4fine  6fine  7fine
5fine ಹೈನ್‍
ಕ್ರಿಯಾವಿಶೇಷಣ
  1. ಅಂದವಾಗಿ; ನಯವಾಗಿ; ನಾಜೂಕಾಗಿ: talk fine ಅಂದವಾಗಿ ಮಾತನಾಡು.
  2. (ಆಡುಮಾತು) ಬಹಳ ಚೆನ್ನಾಗಿ: that will suit me fine ಅದು ನನಗೆ ಬಹಳ ಚೆನ್ನಾಗಿ ಹೊಂದುತ್ತದೆ.
See also 1fine  2fine  3fine  4fine  5fine  7fine
6fine ಹೈನ್‍
ಸಕರ್ಮಕ ಕ್ರಿಯಾಪದ

(ಬಿಯರ್‍ ಅನ್ನು) ತಿಳಿ ಮಾಡು; ಸ್ವಚ್ಛಮಾಡು.

ಅಕರ್ಮಕ ಕ್ರಿಯಾಪದ

(ದ್ರವದ ವಿಷಯದಲ್ಲಿ) ತಿಳಿಯಾಗು.

ಪದಗುಚ್ಛ

fine away, down, or off

  1. ಹೆಚ್ಚು – ಸೂಕ್ಷ್ಮವಾಗಿಸು, ನವಿರಾಗಿಸು, ತೆಳ್ಳಗಾಗಿಸು, ಸಪೂರಗೊಳಿಸು.
  2. ಹೆಚ್ಚು – ಸೂಕ್ಷ್ಮವಾಗು, ನವಿರಾಗು, ತೆಳ್ಳಗಾಗು, ಸಪುರವಾಗು.
  3. ಸಣ್ಣದಾಗಿಸು.
  4. ಸಣ್ಣದಾಗು.
  5. ನಯವಾಗು; ನುಣುಪಾಗು.
  6. ನಯವಾಗಿಸು; ನುಣುಪಾಗಿಸು.
  7. ತುದಿಯ ಕಡೆ – ಚೂಪಾಗಿಸು, ಚೂಪಾಗುವಂತೆ ಮಾಡು.
  8. ತುದಿಯ ಕಡೆಗೆ ಚೂಪಾಗು, ಚೂಪಾಗುತ್ತ ಹೋಗು.
See also 1fine  2fine  3fine  4fine  5fine  6fine
7fine ಹೀನ್‍
ನಾಮವಾಚಕ