See also 2fiddle  3fiddle
1fiddle ಹಿಡ್‍ಲ್‍
ನಾಮವಾಚಕ
  1. (ಆಡುಮಾತು ಯಾ ಹೀನಾರ್ಥಕ ಪ್ರಯೋಗ) ಪಿಟೀಲು.
  2. ಪಿಟೀಲನ್ನು ಹೋಲುವ ಯಾವುದೇ ವಾದ್ಯ.
  3. (ನೌಕಾಯಾನ) ಉರುಳುತಡೆ; ತಡೆಗಂಬಿ; ಮೇಜಿನ ಮೇಲಿನಿಂದ ಪದಾರ್ಥಗಳು ಉರುಳಿ ಹೋಗದಂತೆ ತಡೆಯುವ ಸಾಧನ.
  4. (ಅಶಿಷ್ಟ) ಮೋಸ; ವಂಚನೆ; ಠಕ್ಕು; ದಗಾ.
ನುಡಿಗಟ್ಟು
  1. face as long as a fiddle ಅಳುಮೋರೆ; ಜೋಲುಮುಖ.
  2. fit as a fiddle ಆರೋಗ್ಯವಾಗಿ ಮತ್ತು ಉಲ್ಲಾಸವಾಗಿ; ಗಟ್ಟಿಮುಟ್ಟಾಗಿ; ಹುಮ್ಮಸ್ಸಿನಲ್ಲಿ.
  3. hang up one’s fiddle when one comes home ಹೊರಗೆ ಸರಸಿಯಾಗಿರು; ಮನೆಯಲ್ಲಿ ಮೂದೇವಿಯಾಗಿರು; ಹೊರಗೆ ಹುಮ್ಮಸ್ಸಿನಿಂದಿರು, ಮನೆಗೆ ಬಂದರೆ ಮಂಕಾಗಿರು.
  4. play first fiddle ಮುಂದಾಗಿರು; ಮುಖ್ಯ ಪಾತ್ರವಹಿಸು; ಮುಖ್ಯ ಪಾತ್ರವಹಿಸು.
  5. play second fiddle ಅಧೀನವಾಗಿ ವರ್ತಿಸು; ಅನುಯಾಯಿಯಾಗು; ಹಿಮ್ಮೇಳ ಹಾಡು.
See also 1fiddle  3fiddle
2fiddle ಹಿಡ್‍ಲ್‍
ಭಾವಸೂಚಕ ಅವ್ಯಯ

ಅಸಂಬದ್ಧ! ಅರ್ಥವಿಲ್ಲದ್ದು! ಹುಚ್ಚುಮಾತು!

See also 1fiddle  2fiddle
3fiddle ಹಿಡ್‍ಲ್‍
ಸಕರ್ಮಕ ಕ್ರಿಯಾಪದ
  1. ಪಿಟೀಲಿನ ಮೇಲೆ (ರಾಗ ಮೊದಲಾದವನ್ನು) ಬಾರಿಸು, ನುಡಿಸು.
  2. ಪೋಲು ಮಾಡು; ವ್ಯರ್ಥವಾಗಿ ಕಳೆ: fiddle time away ಸಮಯ ಪೋಲು ಮಾಡು.
  3. (ಅಶಿಷ್ಟ) ಮೋಸಮಾಡು; ಟೋಪಿಹಾಕು; ದಗಾಹಾಕು: fiddle an income tax return ವರಮಾನ ತೆರಿಗೆಯ ವಿವರ ಸಲ್ಲಿಸುವಾಗ ವಂಚಿಸು, ತಪ್ಪುಲೆಕ್ಕಕೊಡು.
ಅಕರ್ಮಕ ಕ್ರಿಯಾಪದ
  1. ಪಿಟೀಲು ನುಡಿಸು.
  2. ಸೋಮಾರಿಯಾಗಿರು; ಹುಡುಗಾಟವಾಡು.
  3. ಸುಮ್ಮನೆ ಕೈಯಾಡಿಸುತ್ತಿರು: fiddling with a piece of string ದಾರದ ತುಂಡಿನ ಮೇಲೆ ಕೈಯಾಡಿಸುತ್ತಾ.
  4. ಹುಡುಗಾಟದಲ್ಲಿ ಕಳೆದುಬಿಡು; ಪೋಲುಮಾಡು; ವ್ಯರ್ಥವಾಗಿ ಕಳೆ; ಕಾಲಹರಣಮಾಡು: stop fiddling around and get to work ವ್ಯರ್ಥವಾಗಿ ಕಾಲಕಳೆಯುವುದನ್ನು ನಿಲ್ಲಿಸಿ ಕೆಲಸ ಪ್ರಾರಂಭಿಸು.