See also 1fiddle  2fiddle
3fiddle ಹಿಡ್‍ಲ್‍
ಸಕರ್ಮಕ ಕ್ರಿಯಾಪದ
  1. ಪಿಟೀಲಿನ ಮೇಲೆ (ರಾಗ ಮೊದಲಾದವನ್ನು) ಬಾರಿಸು, ನುಡಿಸು.
  2. ಪೋಲು ಮಾಡು; ವ್ಯರ್ಥವಾಗಿ ಕಳೆ: fiddle time away ಸಮಯ ಪೋಲು ಮಾಡು.
  3. (ಅಶಿಷ್ಟ) ಮೋಸಮಾಡು; ಟೋಪಿಹಾಕು; ದಗಾಹಾಕು: fiddle an income tax return ವರಮಾನ ತೆರಿಗೆಯ ವಿವರ ಸಲ್ಲಿಸುವಾಗ ವಂಚಿಸು, ತಪ್ಪುಲೆಕ್ಕಕೊಡು.
ಅಕರ್ಮಕ ಕ್ರಿಯಾಪದ
  1. ಪಿಟೀಲು ನುಡಿಸು.
  2. ಸೋಮಾರಿಯಾಗಿರು; ಹುಡುಗಾಟವಾಡು.
  3. ಸುಮ್ಮನೆ ಕೈಯಾಡಿಸುತ್ತಿರು: fiddling with a piece of string ದಾರದ ತುಂಡಿನ ಮೇಲೆ ಕೈಯಾಡಿಸುತ್ತಾ.
  4. ಹುಡುಗಾಟದಲ್ಲಿ ಕಳೆದುಬಿಡು; ಪೋಲುಮಾಡು; ವ್ಯರ್ಥವಾಗಿ ಕಳೆ; ಕಾಲಹರಣಮಾಡು: stop fiddling around and get to work ವ್ಯರ್ಥವಾಗಿ ಕಾಲಕಳೆಯುವುದನ್ನು ನಿಲ್ಲಿಸಿ ಕೆಲಸ ಪ್ರಾರಂಭಿಸು.