See also 2favour
1favour ಹೇವರ್‍
ನಾಮವಾಚಕ
  1. ಸ್ನೇಹದೃಷ್ಟಿ; ಸೌಹಾರ್ದ; ಒಲವು; ಪ್ರಸನ್ನತೆ: find favour in the eyes of (ಒಬ್ಬನ) ಸೌಹಾರ್ದ ಗಳಿಸು.
  2. ಒಪ್ಪಿಕೆ; ಸಮ್ಮತಿ; ಅನುಮತಿ; ಮೆಚ್ಚಿಕೆ: look with favour on ಮೆಚ್ಚಿಕೆಯಿಂದ ನೋಡು.
  3. ಕೃಪೆ; ಅನುಗ್ರಹ; ಪ್ರಸಾದ: be (or stand) high in person’s favour ಒಬ್ಬನ ವಿಶೇಷ ಕೃಪೆಗೆ ಪಾತ್ರನಾಗಿರು.
  4. ಮಿಗಿಲಾದ ದಯೆ; ಸಲ್ಲಬೇಕಾದುದಕ್ಕಿಂತ ಹೆಚ್ಚು ದಯೆ; ಮಹದನುಗ್ರಹ; ಮಹೋಪಕಾರ: I should esteem it a favour ಮಹೋಪಕಾರವೆಂದು ಭಾವಿಸುತ್ತೇನೆ. do me the favour of doing ಮಾಡುವ ಮಹದನುಗ್ರಹ ಮಾಡಿ.
  5. (ಪ್ರಾಚೀನ ಪ್ರಯೋಗ) ಅಪ್ಪಣೆ; ಅನುಮತಿ: by your favour ತಮ್ಮ ಅಪ್ಪಣೆಯಾದರೆ.
  6. ಕ್ಷಮೆ : give me your favour, sir ತಮ್ಮ ಕ್ಷಮೆ ನೀಡಿ, ಸ್ವಾಮಿ.
  7. ಪಕ್ಷಪಾತ.
  8. ದಾಕ್ಷಿಣ್ಯ; ಅತಿ ಸೌಮ್ಯವೂ ಉದಾರವೂ ಆದ ವರ್ತನೆ: without fear or favour ಭಯ ಯಾ ದಾಕ್ಷಿಣ್ಯ ಇಲ್ಲದೆ; ಆಗ್ರಹಾನುಗ್ರಹವನ್ನು ಲೆಕ್ಕಿಸದೆ.
  9. ಸಹಾಯ; ನೆರವು; ಅನುಕೂಲ: under favour of night ರಾತ್ರಿಯ ಸಹಾಯದಿಂದ.
  10. ಒಲವಿನ ಕುರುಹಾಗಿ ಕೊಟ್ಟ ಯಾ ತೊಡುವ ವಸ್ತು (ರಿಬ್ಬನ್‍ ಕುಣಿಕೆ, ಗುಲಾಬಿ ಹೂವಿನ ಆಕೃತಿ, ಅಧಿಕಾರ ಸೂಚಕ ಲಾಂಛನ, ಬಿಲ್ಲೆ, ಮೊದಲಾದವು).
  11. (ಪ್ರಾಚೀನ ಪ್ರಯೋಗ) ನೋಟ; ದೃಷ್ಟಿ; ಮುಖಮುದ್ರೆ.
  12. (ಪ್ರಾಚೀನ ಪ್ರಯೋಗ) (ವಾಣಿಜ್ಯ) ಕಾಗದ; ಪತ್ರ: your favour of yesterday ನಿಮ್ಮ ನೆನ್ನೆಯ ಪತ್ರ.
ಪದಗುಚ್ಛ
  1. hard favoured ಗಡಸು ಮುಖವುಳ್ಳ; ಬಿರುಸು ಮುಖವುಳ್ಳ.
  2. ill-favoured ಕುರೂಪವಾದ ಮುಖವುಳ್ಳ.
  3. in favour of
    1. ಪರವಾಗಿ: I voted in favour of him ನಾನು ಅವನ ಪರವಾಗಿ ವೋಟು ಮಾಡಿದೆ.
    2. ಹೆಸರಿನಲ್ಲಿ; ಹೆಸರಿಗೆ: cheque drawn in his favour ಅವನ ಹೆಸರಿಗೆ ಬರೆದ ಚೆಕ್ಕು.
  4. well favoured ಚೆಲುವಾದ ಮುಖವುಳ್ಳ.
ನುಡಿಗಟ್ಟು
  1. bestows her favours ಸಂಭೋಗಕ್ಕೆ ಎಡೆಮಾಡಿಕೊಡುತ್ತಾಳೆ, ಒಪ್ಪುತ್ತಾಳೆ.
  2. $^3$curry favour.
  3. find favour in the eyes of ಒಬ್ಬನ ಒಲವು, ಪ್ರೀತಿ ಗಳಿಸು; ಒಬ್ಬನಿಗೆ ಪ್ರಿಯನಾಗು.
  4. under favour ಹಾಗೆ ಹೇಳಬಹುದಾದಲ್ಲಿ.
See also 1favour
2favour ಹೇವರ್‍
ಸಕರ್ಮಕ ಕ್ರಿಯಾಪದ
  1. ದಯೆಯಿಂದ ಯಾ ವಿಶ್ವಾಸದಿಂದ ಕಾಣು: Chirst favoured Judas ಕ್ರಿಸ್ತನು ಜೂಡಸನನ್ನು ದಯೆಯಿಂದ ಕಂಡ.
  2. ಅನುಮತಿಸು; ಒಪ್ಪು; ಮೆಚ್ಚು: the doctrines they most favoured ಅವರು ಅತ್ಯಂತ ಮೆಚ್ಚಿದ ಸಿದ್ಧಾಂತಗಳು.
  3. ದಯೆತೋರು: I beseech you, favour me so much ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ನನಗೆ ಅಷ್ಟು ದಯೆ ತೋರಿಸಿ.
  4. ಎಡೆಗೊಡು; ಆಸ್ಪದಗೊಡು: to favour the deceit ಮೋಸಕ್ಕೆ ಎಡೆಗೊಡಲು.
  5. ಅನುಗ್ರಹಿಸು: ವರನೀಡು; ಉಪಕರಿಸು (ಬಹುವೇಳೆ ಕೃತಜ್ಞತಾಸೂಚಕವಾಗಿ ಪ್ರಯೋಗ): fortune favoured me with a great gift ಅದೃಷ್ಟದೇವತೆ ನನಗೆ ದೊಡ್ಡ ವರವೊಂದನ್ನು ಅನುಗ್ರಹಿಸಿದಳು.
  6. ಪಕ್ಷಪಾತ ತೋರಿಸು; ನ್ಯಾಯಈರಿ (ಒಬ್ಬನ) ಪಕ್ಷವಹಿಸು, ಪಕ್ಷಕ್ಕೆ ಓಲು: the examiner was accused of having favoured his own pupils ತನ್ನ ವಿದ್ಯಾರ್ಥಿಗಳಿಗೇ ಪಕ್ಷಪಾತ ತೋರಿಸಿದನೆಂದು ಪರೀಕ್ಷಕನ ಮೇಲೆ ಆರೋಪ ಹೊರಿಸಲಾಯಿತು.
  7. ನೆರವಾಗು; ಸಹಾಯಕವಾಗು; ಬೆಂಬಲಿಸು; ಒತ್ತಾಸೆ ನೀಡು.
  8. (ಸಿದ್ಧಾಂತ ಮೊದಲಾದವನ್ನು) ಸಮರ್ಥಿಸು; ಪುಷ್ಟೀಕರಿಸು: those facts which favoured the doctrine ಈ ತತ್ತ್ವವನ್ನು ಸಮರ್ಥಿಸಿದ ವಾಸ್ತವಾಂಶಗಳು.
  9. (ವ್ಯಕ್ತಿಗೆ) ಅನುಕೂಲ, ಸೌಲಭ್ಯ – ಒದಗಿಸಿಕೊಡು: the wind favours them ಗಾಳಿ ಅವರಿಗೆ ಅನುಕೂಲವಾಗಿದೆ.
  10. (ಕಾರ್ಯನೀತಿಯನ್ನು ಯಾ ಕಾರ್ಯಕ್ರಮವನ್ನು) ಸುಗಮಗೊಳಿಸು; ಸರಾಗವಾಗಿಸು: circumstances favoured the enterprise ಪರಿಸ್ಥಿತಿ ಆ ಉದ್ಯಮವನ್ನು ಸುಗಮವಾಗಿಸಿತು.
  11. (ಆಡುಮಾತು) ಮುಖಲಕ್ಷಣಗಳು ಮೊದಲಾದವುಗಳಲ್ಲಿ ಹೋಲು: favour one’s father ತನ್ನ ತಂದೆಯನ್ನು ಹೋಲು.
ಪದಗುಚ್ಛ

favoured by (ಪತ್ರವ್ಯವಹಾರದ ವಿಷಯದಲ್ಲಿ) (ಇಂಥವರ) ಕೃಪೆಯಿಂದ; ಅನುಗ್ರಹದಿಂದ.