See also 2favour
1favour ಹೇವರ್‍
ನಾಮವಾಚಕ
  1. ಸ್ನೇಹದೃಷ್ಟಿ; ಸೌಹಾರ್ದ; ಒಲವು; ಪ್ರಸನ್ನತೆ: find favour in the eyes of (ಒಬ್ಬನ) ಸೌಹಾರ್ದ ಗಳಿಸು.
  2. ಒಪ್ಪಿಕೆ; ಸಮ್ಮತಿ; ಅನುಮತಿ; ಮೆಚ್ಚಿಕೆ: look with favour on ಮೆಚ್ಚಿಕೆಯಿಂದ ನೋಡು.
  3. ಕೃಪೆ; ಅನುಗ್ರಹ; ಪ್ರಸಾದ: be (or stand) high in person’s favour ಒಬ್ಬನ ವಿಶೇಷ ಕೃಪೆಗೆ ಪಾತ್ರನಾಗಿರು.
  4. ಮಿಗಿಲಾದ ದಯೆ; ಸಲ್ಲಬೇಕಾದುದಕ್ಕಿಂತ ಹೆಚ್ಚು ದಯೆ; ಮಹದನುಗ್ರಹ; ಮಹೋಪಕಾರ: I should esteem it a favour ಮಹೋಪಕಾರವೆಂದು ಭಾವಿಸುತ್ತೇನೆ. do me the favour of doing ಮಾಡುವ ಮಹದನುಗ್ರಹ ಮಾಡಿ.
  5. (ಪ್ರಾಚೀನ ಪ್ರಯೋಗ) ಅಪ್ಪಣೆ; ಅನುಮತಿ: by your favour ತಮ್ಮ ಅಪ್ಪಣೆಯಾದರೆ.
  6. ಕ್ಷಮೆ : give me your favour, sir ತಮ್ಮ ಕ್ಷಮೆ ನೀಡಿ, ಸ್ವಾಮಿ.
  7. ಪಕ್ಷಪಾತ.
  8. ದಾಕ್ಷಿಣ್ಯ; ಅತಿ ಸೌಮ್ಯವೂ ಉದಾರವೂ ಆದ ವರ್ತನೆ: without fear or favour ಭಯ ಯಾ ದಾಕ್ಷಿಣ್ಯ ಇಲ್ಲದೆ; ಆಗ್ರಹಾನುಗ್ರಹವನ್ನು ಲೆಕ್ಕಿಸದೆ.
  9. ಸಹಾಯ; ನೆರವು; ಅನುಕೂಲ: under favour of night ರಾತ್ರಿಯ ಸಹಾಯದಿಂದ.
  10. ಒಲವಿನ ಕುರುಹಾಗಿ ಕೊಟ್ಟ ಯಾ ತೊಡುವ ವಸ್ತು (ರಿಬ್ಬನ್‍ ಕುಣಿಕೆ, ಗುಲಾಬಿ ಹೂವಿನ ಆಕೃತಿ, ಅಧಿಕಾರ ಸೂಚಕ ಲಾಂಛನ, ಬಿಲ್ಲೆ, ಮೊದಲಾದವು).
  11. (ಪ್ರಾಚೀನ ಪ್ರಯೋಗ) ನೋಟ; ದೃಷ್ಟಿ; ಮುಖಮುದ್ರೆ.
  12. (ಪ್ರಾಚೀನ ಪ್ರಯೋಗ) (ವಾಣಿಜ್ಯ) ಕಾಗದ; ಪತ್ರ: your favour of yesterday ನಿಮ್ಮ ನೆನ್ನೆಯ ಪತ್ರ.
ಪದಗುಚ್ಛ
  1. hard favoured ಗಡಸು ಮುಖವುಳ್ಳ; ಬಿರುಸು ಮುಖವುಳ್ಳ.
  2. ill-favoured ಕುರೂಪವಾದ ಮುಖವುಳ್ಳ.
  3. in favour of
    1. ಪರವಾಗಿ: I voted in favour of him ನಾನು ಅವನ ಪರವಾಗಿ ವೋಟು ಮಾಡಿದೆ.
    2. ಹೆಸರಿನಲ್ಲಿ; ಹೆಸರಿಗೆ: cheque drawn in his favour ಅವನ ಹೆಸರಿಗೆ ಬರೆದ ಚೆಕ್ಕು.
  4. well favoured ಚೆಲುವಾದ ಮುಖವುಳ್ಳ.
ನುಡಿಗಟ್ಟು
  1. bestows her favours ಸಂಭೋಗಕ್ಕೆ ಎಡೆಮಾಡಿಕೊಡುತ್ತಾಳೆ, ಒಪ್ಪುತ್ತಾಳೆ.
  2. $^3$curry favour.
  3. find favour in the eyes of ಒಬ್ಬನ ಒಲವು, ಪ್ರೀತಿ ಗಳಿಸು; ಒಬ್ಬನಿಗೆ ಪ್ರಿಯನಾಗು.
  4. under favour ಹಾಗೆ ಹೇಳಬಹುದಾದಲ್ಲಿ.