See also 2fare
1fare ಹೇರ್‍
ನಾಮವಾಚಕ
  1. (ಪ್ರಯಾಣದ) ರುಸುಮು; ಬಾಡಿಗೆ; ಛಾರ್ಜು; ಶುಲ್ಕ; ಮೂಲ್ಯ; ಟಿಕೆಟ್‍ ಹಣ.
  2. ಬಾಡಿಗೆಬಂಡಿಯಲ್ಲಿನ ಪ್ರಯಾಣಿಕ(ರು): he drove his fare home ಅವನು ತನ್ನ ಗಾಡಿಯಲ್ಲಿನ ಪ್ರಯಾಣಿಕರನ್ನು ಮನೆಗೆ ಕೊಂಡೊಯ್ದ.
  3. (ಒದಗಿಸುವ) ಊಟ; ತಿಂಡಿತೀರ್ಥ; ಅನ್ನ; ಆಹಾರ; ಭೋಜನ; ಉಣಿಸು; ತಿನಿಸು: good fare ಒಳ್ಳೆಯ ತಿಂಡಿತೀರ್ಥ. bad fare ಕೆಟ್ಟ ತಿಂಡಿ. plentiful fare ಸಮೃದ್ಧಿಯಾದ ತಿಂಡಿತೀರ್ಥ.
  4. (ಸಾರ್ವಜನಿಕರಿಗೆ ಮನರಂಜನೆಗಾಗಿ ನೀಡುವ) ಸಾಮಗ್ರಿ; ಕಾರ್ಯಕ್ರಮ: literary fare ಸಾಹಿತ್ಯಕ ಸಾಮಗ್ರಿ. theatre fare ರಂಗಭೂಮಿಯ ಕಾರ್ಯಕ್ರಮ.
  5. ಪ್ರಯಾಣಿಕ; ಸಾರ್ವಜನಿಕ ವಾಹನ ಹಾಗೂ ಅದರ ಚಾಲಕನನ್ನು ಬಾಡಿಗೆಗೆ ತೆಗೆದುಕೊಳ್ಳುವ ವ್ಯಕ್ತಿ.
ಪದಗುಚ್ಛ
See also 1fare
2fare ಹೇರ್‍
ಅಕರ್ಮಕ ಕ್ರಿಯಾಪದ
  1. (ಕಾವ್ಯಪ್ರಯೋಗ ಯಾ ಸಾಹಿತ್ಯ) ಪ್ರಯಾಣ ಮಾಡು; ಪ್ರಯಾಣ ಹೋಗು; ಪಯಣಿಸು.
  2. (ಪ್ರಾಚೀನ ಪ್ರಯೋಗ) ಆಗು; ಉಂಟಾಗು; ನಡೆಯು; ಸಂಭವಿಸು: how fares it? ಅದು ಹೇಗಿದೆ? ಏಗೆ ನಡೆಯುತ್ತಿದೆ? ಏನಾಯಿತು?
  3. ಬದುಕು; ಬಾಳು; ಇರು: fare well ಚೆನ್ನಾಗಿ ಬಾಳು; ಚೆನ್ನಾಗಿರು; ಅಭಿವೃದ್ಧಿ ಹೊಂದು. fare ill ಕೆಟ್ಟದಾಗು; ದುರದೃಷ್ಟಕ್ಕೆ ಒಳಗಾಗು; ಕೇಡಾಗು.
  4. (ಪ್ರಾಚೀನ ಪ್ರಯೋಗ) ಔತಣ ಪಡೆ; ಭೋಜನ ಮಾಡು; ಊಟಮಾಡು; ತಿನ್ನು: they fared sumptuously ಅವರು ಪುಷ್ಕಳವಾಗಿ ಊಟ ಮಾಡಿದರು.
ಪದಗುಚ್ಛ

fare forth (ಪ್ರಯಾಣ) ಹೊರಡು; ಪ್ರಾರಂಭಿಸು.