ತಿನಿಸು, ಭಕ್ಷ್ಯ – ಪಟ್ಟಿ; ಊಟದಲ್ಲಿ ಬಡಿಸುವ ಭಕ್ಷ್ಯ ಭೋಜ್ಯಗಳ ಪಟ್ಟಿ.
(ರೂಪಕವಾಗಿ) ಕಾರ್ಯಕ್ರಮ.
bill of health (ನೌಕೆ ಯಾ ಬಂದರಿನ) ಆರೋಗ್ಯ ಪತ್ರ; ಹಡಗು ಹೊರಡುವ ಕಾಲಕ್ಕೆ ಬಂದರಿನಲ್ಲಿ ಯಾ ನೌಕೆಯಲ್ಲಿ ಯಾವ ಅಂಟು ರೋಗವೂ ಇಲ್ಲವೆಂದು ಹಡಗಿನ ಅಧಿಕಾರಿ ತೆಗೆದುಕೊಳ್ಳುವ ಅಧಿಕೃತ ಪತ್ರ.
bill of indictment (ಚರಿತ್ರೆ ಮತ್ತು ಅಮೆರಿಕನ್ ಪ್ರಯೋಗ) ಆರೋಪಣ ಪತ್ರ; ನ್ಯಾಯದರ್ಶಿಮಂಡಲಿಯ ಮುಂದೆ ಮಂಡಿಸಿದ ಲಿಖಿತ ಆರೋಪಣೆಗಳ ಪತ್ರ.
bill of lading ರಫ್ತುಪಟ್ಟಿ; ಭರಾವಣೆ ಚೀಟಿ; ವಹನಪತ್ರ; ಹಡಗಿನ ಯಜಮಾನನು ಸಾಮಾನು ಕಳುಹಿಸುವವನಿಗೆ ಕೊಡುವ ತಪಶೀಲು ರಸೀತಿ.
bill of quantities (ಬ್ರಿಟಿಷ್ ಪ್ರಯೋಗ) (ಕಟ್ಟಡದ ನಿರ್ಮಾಣದಲ್ಲಿ ಸಾಮಾನು, ಅಳತೆ, ಕೆಲಸ, ಬೆಲೆ ಮೊದಲಾದವುಗಳ) ವಿವರಪಟ್ಟಿ; ತಪಶೀಲು ವರದಿ; ಯಾದಾಸ್ತು.
bill of sale ಕ್ರಯಪತ್ರ; ಸ್ವಂತ ಆಸ್ತಿಯ ವರ್ಗಾವಣೆ ಸರ್ಟಿಹಿಕೇಟು; ಮುಖ್ಯವಾಗಿ ಚರ ಆಸ್ತಿಯನ್ನು ಒತ್ತೆಯಾಗಿ ಇಟ್ಟಿರುವುದಾಗಿ ಸ್ಥಿರ ಆಸ್ತಿಯನ್ನು ಎರವಲಾಗಿ ಪಡೆದವನು ಮಾಡುವ ಸರ್ಟಿಹಿಕೇಟು.
clean bill of health
ನೀರೋಗಪತ್ರ; ಯಾವರೋಗವೂ ಇಲ್ಲವೆಂದು ನೀಡುವ ಪತ್ರ.
(ರೂಪಕವಾಗಿ) (ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ ಕೂಲಂಕಷ ಪರೀಕ್ಷೆಯ ತರುವಾಯ ನೀಡುವ) ಒಳ್ಳೆಯ, ಅನುಕೂಲಕರವಾದ – ವರದಿ.
ನುಡಿಗಟ್ಟು
find a true bill (ನ್ಯಾಯದರ್ಶಿಗಳ ಮಹಾಮಂಡಲಿ) ತನಿಖೆಗೆ ಅರ್ಹವೆಂದು ಕಳುಹಿಸಿಕೊಡು.
ignore the bill (ನ್ಯಾಯದರ್ಶಿಗಳ ಮಹಾಮಂಡಲಿ) ತನಿಖೆಗೆ ಅನರ್ಹವೆಂದು ತಳ್ಳಿಹಾಕು, ತಿರಸ್ಕರಿಸು.