See also 2exhaust
1exhaust ಇ(ಎ)ಗ್‍ಸಾಸ್ಟ್‍
ನಾಮವಾಚಕ
  1. ನಿಷ್ಕಾಸ:
    1. ಉಗಿಯಂತ್ರ, ಅಂತರ್ದಹನ ಯಂತ್ರ, ಮೊದಲಾದವುಗಳಲ್ಲಿ ಚಾಲಕದ್ರವ, ಉಗಿ ಯಾ ಅನಿಲವು ಕಾರ್ಯ ಮುಗಿಸಿದ ನಂತರ ಹೊರಕ್ಕೆ ಬರುವುದು.
    2. ಚಾಲಕದ್ರವದಂತೆ ಬರುವ ದ್ರವ, ಉಗಿ ಯಾ ಅನಿಲ ಕಾರ್ಯ ಮುಗಿಸಿದ ನಂತರ ಹೊರಕ್ಕೆ ಬರುವುದು.
    3. ಹಾಗೆ ಇರುವ ದ್ರವ, ಉಗಿ ಯಾ ಅನಿಲ.
    4. ಇದೇ ರೀತಿ ಟರ್ಬೈನಿನಿಂದ ಅನಿಲ ಯಾ ದ್ರವ ಹೊರಗೆ ಬರುವುದು.
  2. ನಿರ್ವಾತಕರಣ; ಶೂನ್ಯೀಕರಣ; ಪಾತ್ರೆಯನ್ನು ನಿರ್ವಾತಗೊಳಿಸುವುದು; ಅದರಲ್ಲಿನ ವಾಯುವನ್ನು ತೆಗೆದುಹಾಕುವುದು.
  3. ನಿರ್ವಾತಕ (ಉಪಕರಣ).
See also 1exhaust
2exhaust ಇ(ಎ)ಗ್‍ಸಾಸ್ಟ್‍
ಸಕರ್ಮಕ ಕ್ರಿಯಾಪದ
  1. (ಗಾಳಿಯನ್ನು) ತೆಗೆ; ನಿಷ್ಕಾಸಿಸು (ರೂಪಕವಾಗಿ ಸಹ): exhaust the air from a bell-jar ಗಂಟೆಹೂಜಿಯಿಂದ ಗಾಳಿಯನ್ನು ಹೊರತೆಗೆ.
  2. ನಿಶ್ಯೇಷವಾಗಿಸು; ಪೂರ್ತಿಯಾಗಿ ಉಪಯೋಗಿಸಿಬಿಡು; ಬಳಸಿ ಮುಗಿಸಿಬಿಡು; ತೀರಿಸಿಬಿಡು: till her lover had exhausted all his eloquence ಅವಳ ಪ್ರೇಮಿ ತನ್ನ ವಾಗ್ವೈಖರಿಯನ್ನು ಮುಗುಸಿಬಿಡುವವರೆಗೂ.
  3. ಎಲ್ಲವನ್ನೂ ಬಳಸು; (ಲೆಕ್ಕಹಾಕಿ ಪರಿಶೀಲಿಸಿ) ಮುಗಿಸು: exhausted the possiblities ಸಾಧ್ಯತೆಗಳನ್ನು ಪರಿಶೀಲಿಸಿ ಮುಗಿಸಿದ.
  4. (ಪಾತ್ರೆ) ಖಾಲಿಮಾಡು; ಬರಿದು ಮಾಡು: to exhaust a tank of fuel oil ಇಂಧನ ತೈಲವನ್ನೆಲ್ಲಾ ತೆಗೆದು ತೊಟ್ಟಿಯನ್ನು ಖಾಲಿಮಾಡು.
  5. (ವಿಷಯ ಕುರಿತು) ತಿಳಿಯಬೇಕಾದುದೆಲ್ಲವನ್ನೂ ಹೇಳಿ ಮುಗಿಸು.
  6. (ವಿಷಯ ಕುರಿತು) ತಿಳಿಯಬೇಕಾದುದನ್ನೆಲ್ಲ ಕಂಡುಹಿಡಿ; ಬುಡಮುಟ್ಟ ಶೋಧಿಸಿ ಬಿಡು.
  7. (ಮುಖ್ಯವಾಗಿ ಭೂತಕೃದಂತದಲ್ಲಿ) (ವ್ಯಕ್ತಿ, ರಾಜ್ಯ, ಮೊದಲಾದವುಗಳ ಶಕ್ತಿ, ಸಂಪತ್ತು, ಮೊದಲಾದವನ್ನು) ಹೀರಿಹಾಕು; ಬಸಿದು ಬಿಡು: the thirty years war exhausted Germany ಮೂವತ್ತು ವರ್ಷಗಳ ಯುದ್ಧ ಜರ್ಮನಿಯ ಶಕ್ತಿಯನ್ನೆಲ್ಲಾ ಹೀರಿಹಾಕಿತು.
  8. ಬಳಲಿಸು; ಆಯಾಸಪಡಿಸು; ದಣಿಸು; ಸುಸ್ತು ಮಾಡು: exhaust himself working in the heat ಸೆಕೆಯಲ್ಲಿ ಕೆಲಸಮಾಡಿ ಸುಸ್ತು ಮಾಡಿಕೊಂಡನು.
  9. (ಅಧಿಕ ಉಳುಮೆಯಿಂದ ಭೂಮಿಯ) ಸಾರಕಳೆ; ನಿಸ್ಸಾರಗೊಳಿಸು; ಫಲವತ್ತನ್ನು ನಾಶಮಾಡು: steady cropping exhausted the soil ಒಂದೇ ಸಮನೆ ಬೆಳೆ ತೆಗೆದದ್ದರಿಂದ ಭೂಮಿಯ ಸಾರ ಹಾಳಾಯಿತು.