See also 1exhaust
2exhaust ಇ(ಎ)ಗ್‍ಸಾಸ್ಟ್‍
ಸಕರ್ಮಕ ಕ್ರಿಯಾಪದ
  1. (ಗಾಳಿಯನ್ನು) ತೆಗೆ; ನಿಷ್ಕಾಸಿಸು (ರೂಪಕವಾಗಿ ಸಹ): exhaust the air from a bell-jar ಗಂಟೆಹೂಜಿಯಿಂದ ಗಾಳಿಯನ್ನು ಹೊರತೆಗೆ.
  2. ನಿಶ್ಯೇಷವಾಗಿಸು; ಪೂರ್ತಿಯಾಗಿ ಉಪಯೋಗಿಸಿಬಿಡು; ಬಳಸಿ ಮುಗಿಸಿಬಿಡು; ತೀರಿಸಿಬಿಡು: till her lover had exhausted all his eloquence ಅವಳ ಪ್ರೇಮಿ ತನ್ನ ವಾಗ್ವೈಖರಿಯನ್ನು ಮುಗುಸಿಬಿಡುವವರೆಗೂ.
  3. ಎಲ್ಲವನ್ನೂ ಬಳಸು; (ಲೆಕ್ಕಹಾಕಿ ಪರಿಶೀಲಿಸಿ) ಮುಗಿಸು: exhausted the possiblities ಸಾಧ್ಯತೆಗಳನ್ನು ಪರಿಶೀಲಿಸಿ ಮುಗಿಸಿದ.
  4. (ಪಾತ್ರೆ) ಖಾಲಿಮಾಡು; ಬರಿದು ಮಾಡು: to exhaust a tank of fuel oil ಇಂಧನ ತೈಲವನ್ನೆಲ್ಲಾ ತೆಗೆದು ತೊಟ್ಟಿಯನ್ನು ಖಾಲಿಮಾಡು.
  5. (ವಿಷಯ ಕುರಿತು) ತಿಳಿಯಬೇಕಾದುದೆಲ್ಲವನ್ನೂ ಹೇಳಿ ಮುಗಿಸು.
  6. (ವಿಷಯ ಕುರಿತು) ತಿಳಿಯಬೇಕಾದುದನ್ನೆಲ್ಲ ಕಂಡುಹಿಡಿ; ಬುಡಮುಟ್ಟ ಶೋಧಿಸಿ ಬಿಡು.
  7. (ಮುಖ್ಯವಾಗಿ ಭೂತಕೃದಂತದಲ್ಲಿ) (ವ್ಯಕ್ತಿ, ರಾಜ್ಯ, ಮೊದಲಾದವುಗಳ ಶಕ್ತಿ, ಸಂಪತ್ತು, ಮೊದಲಾದವನ್ನು) ಹೀರಿಹಾಕು; ಬಸಿದು ಬಿಡು: the thirty years war exhausted Germany ಮೂವತ್ತು ವರ್ಷಗಳ ಯುದ್ಧ ಜರ್ಮನಿಯ ಶಕ್ತಿಯನ್ನೆಲ್ಲಾ ಹೀರಿಹಾಕಿತು.
  8. ಬಳಲಿಸು; ಆಯಾಸಪಡಿಸು; ದಣಿಸು; ಸುಸ್ತು ಮಾಡು: exhaust himself working in the heat ಸೆಕೆಯಲ್ಲಿ ಕೆಲಸಮಾಡಿ ಸುಸ್ತು ಮಾಡಿಕೊಂಡನು.
  9. (ಅಧಿಕ ಉಳುಮೆಯಿಂದ ಭೂಮಿಯ) ಸಾರಕಳೆ; ನಿಸ್ಸಾರಗೊಳಿಸು; ಫಲವತ್ತನ್ನು ನಾಶಮಾಡು: steady cropping exhausted the soil ಒಂದೇ ಸಮನೆ ಬೆಳೆ ತೆಗೆದದ್ದರಿಂದ ಭೂಮಿಯ ಸಾರ ಹಾಳಾಯಿತು.