See also 2escape
1escape ಇ(ಎ)ಸ್ಕೇಪ್‍
ನಾಮವಾಚಕ
  1. (ನಿರ್ಬಂಧ, ಅಪಾಯ, ಮೊದಲಾದವುಗಳಿಂದ) ವಿಮೋಚನೆ; ಬಿಡುಗಡೆ; ಪಾರಾಗುವುದು; ತಪ್ಪಿಸಿಕೊಳ್ಳುವುದು; ತಪ್ಪಿಸಿಕೊಂಡು ಹೋಗುವುದು.
  2. ಪಾರಾದ ಸ್ಥಿತಿ; ಪಾರಾಗುವಿಕೆ; ತಪ್ಪಿಸಿಕೊಳ್ಳುವಿಕೆ: a narrow escape, hairbreadth escape ಬಹಳ ಸ್ವಲ್ಪ ಅವಕಾಶದಲ್ಲಿ, ಕೂದಲೆಳೆಯಷ್ಟರಲ್ಲಿ — ತಪ್ಪಿಸಿಕೊಂಡದ್ದು, ಪಾರಾದದ್ದು.
  3. ಪಾರಾಗುವ ಮಾರ್ಗ, ಹಾದಿ, ಸಾಧನ; ಅಪಾಯ ಮೊದಲಾದವುಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಸಾಧನ: we used the window as an escape ನಾವು ಕಿಟಕಿಯನ್ನು ಪಾರಾಗುವ ಸಾಧನವಾಗಿ ಬಳಸಿದೆವು.
  4. ಪಲಾಯನ; ಅಪಕರ್ಷಣೆ; ಯಥಾರ್ಥತೆಯಿಂದ ದೂರವಾಗುವುದು; ವಾಸ್ತವಿಕ ಯಾ ಸತ್ಯಸ್ಥಿತಿಯಿಂದ ಓಡಿಹೋಗಲು ಯಾ ಮನಸ್ಸನ್ನು ಬೇರೆಡೆಗೆ ಸೆಳೆಯಲು ಸಹಾಯಕವಾಗುವ ಮುಖ್ಯವಾಗಿ ಸಾಹಿತ್ಯ, ಸಂಗೀತ, ಮೊದಲಾದ ಸಾಧನ: mythological stories can be an escape ಪೌರಾಣಿಕ ಕಥೆಗಳು (ವಾಸ್ತವಿಕತೆಯಿಂದ) ಪಲಾಯನವಾಗಬಹುದು.
  5. (ಅನಿಲ, ನೀರು, ಮೊದಲಾದವು) ಸೋರಿಕೆ; ಸೋರಿಹೋಗುವುದು.
  6. ತೋಟದ ಕಳೆ; ಕಾಡುಸಸಿಯಂತೆ ಬೆಳೆಯುವ ತೋಟದ ಸಸ್ಯ; ತಾನೇತಾನಾಗಿ ಹಬ್ಬುವ ತೋಟದ ಗಿಡ, ಕಳೆ.
  7. ಪಾರೇಣಿ; ಉರಿಪಾರು ಏಣಿ (ಸಾಧನ); ಬೆಂಕಿಹೊತ್ತಿಕೊಂಡ ಮನೆಯಿಂದ ಒಳಗಿರುವವರನ್ನು ರಕ್ಷಿಸಲು ಉಪಯೋಗಿಸುವ ಏಣಿ, ಸಾಧನ.
See also 1escape
2escape ಇ(ಎ)ಸ್ಕೇಪ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯ, ಹಿಡಿತ, ಮೊದಲಾದವುಗಳಿಂದ) ಜಾರಿಕೊ; ನುಸುಳಿಕೊ; ತಪ್ಪಿಸಿಕೊ; ನುಣುಚಿಕೊ: he escaped the police ಅವನು ಪೋಲಿಸರಿಂದ ತಪ್ಪಿಸಿಕೊಂಡ.
  2. (ಇಷ್ಟವಲ್ಲದ್ದನ್ನು, ಅನಿಷ್ಟವಾದುದನ್ನು) ತೊರೆ; ತ್ಯಜಿಸು; ಬಿಟ್ಟುಬಿಡು.
  3. ಮರೆ; ನೆನಪಿನಿಂದ ಜಾರಿಹೋಗು; ಗಮನಕ್ಕೆ ಯಾ ಜ್ಞಾಪಕಕ್ಕೆ ಬಾರದಿರು; ನೆನಪಿನಿಂದ ನುಸುಳಿಹೋಗು: his name had escaped me ಅವನ ಹೆಸರು ನನಗೆ ಮರೆತೇಹೋಗಿತ್ತು.
  4. (ಮಾತು, ನಿಟ್ಟುಸಿರು, ಮೊದಲಾದವು ಬಾಯಿಯಿಂದ) ತಪ್ಪಿ ಬಂದುಬಿಡು; ಅಯತ್ನವಾಗಿ ಹೊರಬೀಳು; ಅಪ್ರಯತ್ನವಾಗಿ ಹೊರಬರು.
  5. (ನೆನಪು, ಗಮನ, ಮೊದಲಾದವುಗಳಿಗೆ) ಸಿಗದಿರು; ಪತ್ತೆಯಾಗದಿರು; ಕಾಣದಿರು; ಗೋಚರವಾಗದಿರು.
  6. ತಪ್ಪಿಸಿಕೊ; ದೂರವಾಗಿರು; ಸುರಕ್ಷಿತವಾಗಿರು; ಸ್ವತಂತ್ರವಾಗಿರು: where can we go to escape the crowds? ಗುಂಪಿನಿಂದ ದೂರವಾಗಿರಲು ನಾವು ಎಲ್ಲಿಗೆ ಹೋಗಬಹುದು?
ಅಕರ್ಮಕ ಕ್ರಿಯಾಪದ
  1. (ಸೆರೆಮನೆ, ವ್ಯಕ್ತಿ, ಮೊದಲಾದವುಗಳಿಂದ) ಪಾರಾಗು; ತಪ್ಪಿಸಿಕೊ; ಓಡಿಹೋಗು; ಸ್ವತಂತ್ರವಾಗು; ಬಿಡುಗಡೆ ಹೊಂದು; ವಿಮೋಚನೆ ಪಡೆ.
  2. (ಅನಿಲ, ದ್ರವ ಯಾ ಕಣರೂಪದ ಘನಪದಾರ್ಥವು, ಪಾತ್ರೆ, ಮೊದಲಾದವುಗಳಿಂದ) ಸೋರು; ಸೋರಿಹೋಗು; ಹೊರಸೂಸು; ಹೊರಬರು.
  3. ಸುರಕ್ಷಿತವಾಗಿ — ಪಾರಾಗು, ತಪ್ಪಿಸಿಕೊ.
  4. (ಆಪಾಯ, ಬಂಧನ, ಶಿಕ್ಷೆ, ಮೊದಲಾದವುಗಳಿಂದ) ತಪ್ಪಿಸಿಕೊ; (ಅವುಗಳಿಗೆ) ಸಿಗದಿರು.