See also 2escape
1escape ಇ(ಎ)ಸ್ಕೇಪ್‍
ನಾಮವಾಚಕ
  1. (ನಿರ್ಬಂಧ, ಅಪಾಯ, ಮೊದಲಾದವುಗಳಿಂದ) ವಿಮೋಚನೆ; ಬಿಡುಗಡೆ; ಪಾರಾಗುವುದು; ತಪ್ಪಿಸಿಕೊಳ್ಳುವುದು; ತಪ್ಪಿಸಿಕೊಂಡು ಹೋಗುವುದು.
  2. ಪಾರಾದ ಸ್ಥಿತಿ; ಪಾರಾಗುವಿಕೆ; ತಪ್ಪಿಸಿಕೊಳ್ಳುವಿಕೆ: a narrow escape, hairbreadth escape ಬಹಳ ಸ್ವಲ್ಪ ಅವಕಾಶದಲ್ಲಿ, ಕೂದಲೆಳೆಯಷ್ಟರಲ್ಲಿ — ತಪ್ಪಿಸಿಕೊಂಡದ್ದು, ಪಾರಾದದ್ದು.
  3. ಪಾರಾಗುವ ಮಾರ್ಗ, ಹಾದಿ, ಸಾಧನ; ಅಪಾಯ ಮೊದಲಾದವುಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಸಾಧನ: we used the window as an escape ನಾವು ಕಿಟಕಿಯನ್ನು ಪಾರಾಗುವ ಸಾಧನವಾಗಿ ಬಳಸಿದೆವು.
  4. ಪಲಾಯನ; ಅಪಕರ್ಷಣೆ; ಯಥಾರ್ಥತೆಯಿಂದ ದೂರವಾಗುವುದು; ವಾಸ್ತವಿಕ ಯಾ ಸತ್ಯಸ್ಥಿತಿಯಿಂದ ಓಡಿಹೋಗಲು ಯಾ ಮನಸ್ಸನ್ನು ಬೇರೆಡೆಗೆ ಸೆಳೆಯಲು ಸಹಾಯಕವಾಗುವ ಮುಖ್ಯವಾಗಿ ಸಾಹಿತ್ಯ, ಸಂಗೀತ, ಮೊದಲಾದ ಸಾಧನ: mythological stories can be an escape ಪೌರಾಣಿಕ ಕಥೆಗಳು (ವಾಸ್ತವಿಕತೆಯಿಂದ) ಪಲಾಯನವಾಗಬಹುದು.
  5. (ಅನಿಲ, ನೀರು, ಮೊದಲಾದವು) ಸೋರಿಕೆ; ಸೋರಿಹೋಗುವುದು.
  6. ತೋಟದ ಕಳೆ; ಕಾಡುಸಸಿಯಂತೆ ಬೆಳೆಯುವ ತೋಟದ ಸಸ್ಯ; ತಾನೇತಾನಾಗಿ ಹಬ್ಬುವ ತೋಟದ ಗಿಡ, ಕಳೆ.
  7. ಪಾರೇಣಿ; ಉರಿಪಾರು ಏಣಿ (ಸಾಧನ); ಬೆಂಕಿಹೊತ್ತಿಕೊಂಡ ಮನೆಯಿಂದ ಒಳಗಿರುವವರನ್ನು ರಕ್ಷಿಸಲು ಉಪಯೋಗಿಸುವ ಏಣಿ, ಸಾಧನ.