2escape
ಇ(ಎ)ಸ್ಕೇಪ್
ಸಕರ್ಮಕ ಕ್ರಿಯಾಪದ
- (ಮನುಷ್ಯ, ಹಿಡಿತ, ಮೊದಲಾದವುಗಳಿಂದ) ಜಾರಿಕೊ; ನುಸುಳಿಕೊ; ತಪ್ಪಿಸಿಕೊ; ನುಣುಚಿಕೊ: he escaped the police ಅವನು ಪೋಲಿಸರಿಂದ ತಪ್ಪಿಸಿಕೊಂಡ.
- (ಇಷ್ಟವಲ್ಲದ್ದನ್ನು, ಅನಿಷ್ಟವಾದುದನ್ನು) ತೊರೆ; ತ್ಯಜಿಸು; ಬಿಟ್ಟುಬಿಡು.
- ಮರೆ; ನೆನಪಿನಿಂದ ಜಾರಿಹೋಗು; ಗಮನಕ್ಕೆ ಯಾ ಜ್ಞಾಪಕಕ್ಕೆ ಬಾರದಿರು; ನೆನಪಿನಿಂದ ನುಸುಳಿಹೋಗು: his name had escaped me ಅವನ ಹೆಸರು ನನಗೆ ಮರೆತೇಹೋಗಿತ್ತು.
- (ಮಾತು, ನಿಟ್ಟುಸಿರು, ಮೊದಲಾದವು ಬಾಯಿಯಿಂದ) ತಪ್ಪಿ ಬಂದುಬಿಡು; ಅಯತ್ನವಾಗಿ ಹೊರಬೀಳು; ಅಪ್ರಯತ್ನವಾಗಿ ಹೊರಬರು.
- (ನೆನಪು, ಗಮನ, ಮೊದಲಾದವುಗಳಿಗೆ) ಸಿಗದಿರು; ಪತ್ತೆಯಾಗದಿರು; ಕಾಣದಿರು; ಗೋಚರವಾಗದಿರು.
- ತಪ್ಪಿಸಿಕೊ; ದೂರವಾಗಿರು; ಸುರಕ್ಷಿತವಾಗಿರು; ಸ್ವತಂತ್ರವಾಗಿರು: where can we go to escape the crowds? ಗುಂಪಿನಿಂದ ದೂರವಾಗಿರಲು ನಾವು ಎಲ್ಲಿಗೆ ಹೋಗಬಹುದು?
ಅಕರ್ಮಕ ಕ್ರಿಯಾಪದ
- (ಸೆರೆಮನೆ, ವ್ಯಕ್ತಿ, ಮೊದಲಾದವುಗಳಿಂದ) ಪಾರಾಗು; ತಪ್ಪಿಸಿಕೊ; ಓಡಿಹೋಗು; ಸ್ವತಂತ್ರವಾಗು; ಬಿಡುಗಡೆ ಹೊಂದು; ವಿಮೋಚನೆ ಪಡೆ.
- (ಅನಿಲ, ದ್ರವ ಯಾ ಕಣರೂಪದ ಘನಪದಾರ್ಥವು, ಪಾತ್ರೆ, ಮೊದಲಾದವುಗಳಿಂದ) ಸೋರು; ಸೋರಿಹೋಗು; ಹೊರಸೂಸು; ಹೊರಬರು.
- ಸುರಕ್ಷಿತವಾಗಿ — ಪಾರಾಗು, ತಪ್ಪಿಸಿಕೊ.
- (ಆಪಾಯ, ಬಂಧನ, ಶಿಕ್ಷೆ, ಮೊದಲಾದವುಗಳಿಂದ) ತಪ್ಪಿಸಿಕೊ; (ಅವುಗಳಿಗೆ) ಸಿಗದಿರು.