See also 2dream
1dream ಡ್ರೀಮ್‍
ನಾಮವಾಚಕ
  1. ಕನಸು; ಸ್ವಪ್ನ.
  2. ಕನಸಾಗುವಿಕೆ; ಸ್ವಪ್ನದರ್ಶನ; ಸ್ವಪ್ನ – ಕಾಣುವಿಕೆ, ಬೀಳುವಿಕೆ.
  3. ಕನಸಿನ ವೇಳೆ; ಸ್ವಪ್ನಕಾಲ.
  4. ಕನಸಿನ ಸ್ಥಿತಿ; ಸ್ವಪ್ನಾವಸ್ಥೆ.
  5. ಎಚ್ಚರಗನಸು; ಹಗಲುಗನಸು; ಕನವರಿಕೆ; ಎಚ್ಚರವಾಗಿರುವವನಿಗೆ ತನ್ನಷ್ಟಕ್ಕೆ ತಾನೇ ಉಂಟಾಗುವ ಸ್ವಪ್ನಾವಸ್ಥೆ.
  6. ಕನಸು; ಸ್ವಪ್ನ; ಸ್ವಪ್ನಾವಸ್ಥೆ; ಸತ್ಯದ ಯಾ ವಾಸ್ತವಿಕತೆಯ ಸರಿಯಾದ ಅರಿವಿಲ್ಲದ ಮಾನಸಿಕ ಸ್ಥಿತಿ, ಅವಸ್ಥೆ.
  7. ಹಂಬಲ; ಬಯಕೆ; ಆಕಾಂಕ್ಷೆ; ಆದರ್ಶ.
  8. ಕನಸಿನ ರಾಜ್ಯ; ಸ್ವಪ್ನರಾಜ್ಯ; ಮನೋರಾಜ್ಯ; ಅಸಂಭವ ಕಲ್ಪನೆ; ಗಾಳಿಗೋಪುರ.
  9. ಅತ್ಯಂತ ಸುಂದರ ಯಾ ಬಹಳ ಆಕರ್ಷಕ ವ್ಯಕ್ತಿ, ವಸ್ತು, ಅನುಭವ, ಮೊದಲಾದವು; ಸ್ವಪ್ನಸುಂದರ, ಸ್ವಪ್ನಪ್ರಾಯ, ಸ್ವಪ್ನಸಾಧ್ಯ – ಆದದ್ದು: my tour was like a dream ನನ್ನ ಪ್ರವಾಸ ಬಹಳ ಹಿತವಾಗಿತ್ತು. she is a perfect dream ಅವಳೊಬ್ಬ ಸರ್ವಾಂಗಸುಂದರಿ; ಸ್ವಪ್ನಸುಂದರಿ. a dream of delight ಅತ್ಯಂತ ಆನಂದದಾಯಕ.
ಪದಗುಚ್ಛ

walking dream = 1dream(5).

ನುಡಿಗಟ್ಟು

like a dream (ಆಡುಮಾತು) ಸುಲಭವಾಗಿ; ಸಲೀಸಾಗಿ; ಆರಾಮವಾಗಿ; ನಿರಾಯಾಸವಾಗಿ.

See also 1dream
2dream ಡ್ರೀಮ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ dreamt ಉಚ್ಚಾರಣೆ ಡ್ರೆಮ್ಟ್‍, ಯಾ dreamed ಉಚ್ಚಾರಣೆ ಡ್ರೀಮ್ಡ್‍ ಯಾ ಡ್ರೆಮ್ಟ್‍).

ಸಕರ್ಮಕ ಕ್ರಿಯಾಪದ
  1. (ನಿದ್ರೆಯಲ್ಲಿ) ಕನಸು ಕಾಣು; ಸ್ವಪ್ನ ಕಾಣು.
  2. ಕನಸಿನಲ್ಲಿ ನೋಡು ಯಾ ಕೇಳು: dreamt a dream ಒಂದು ಕನಸು ಕಂಡೆ. did you dream it? ಅದನ್ನು ಕನಸಿನಲ್ಲಿ ಕಂಡೆಯಾ?
  3. (ಕನಸಿನಲ್ಲಿ ಹೇಗೋ ಹಾಗೆ) ಸಾಧ್ಯವೆಂದು ಭಾವಿಸು: I never dreamt that he would behave so badly ಅವನು ಆಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಾನೆಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ.
  4. ಕಲ್ಪನೆಯಲ್ಲೇ ಕಾಲ ಕಳೆ; ಕೆಲಸಮಾಡದೆ ಕಾಲಹರಣ ಮಾಡು.
ಅಕರ್ಮಕ ಕ್ರಿಯಾಪದ
  1. ಕನಸು ಕಾಣು.
  2. (ಕನಸಿನಲ್ಲೋ ಎಂಬಂತೆ) ಭಾವಿಸು: wouldn’t dream of injuring them ಅವರಿಗೆ ಹಾನಿಮಾಡಲು ಕನಸಿನಲ್ಲಿಯೂ ಭಾವಿಸಲಿಲ್ಲ.
  3. ಸಾಧ್ಯವೆಂದು ಎಣಿಸು, ಭಾವಿಸು.
  4. ಎಚ್ಚರಗನಸಿನಲ್ಲಿರು; ಭಾವಮಗ್ನನಾಗಿರು; (ಮೈಮರೆತು) ಸ್ವಪ್ನದಲ್ಲಿದ್ದಂತಿರು.
  5. ಸವಿಗನಸು ಕಾಣುತ್ತಿರು; ಕಾಲ್ಪನಿಕ ಚಿತ್ರಗಳನ್ನು ನಿರ್ಮಿಸಿಕೊ.
  6. ಚಟುವಟಿಕೆಯಿಲ್ಲದಿರು; ನಿಷ್ಕ್ರಿಯವಾಗಿರು.
  7. ವ್ಯವಹಾರಕುಶಲನಲ್ಲದಿರು; ಪ್ರಾಯೋಗಿಕವಾಗಿಲ್ಲದಿರು.
ನುಡಿಗಟ್ಟು
  1. dream away one’s time ಕಲ್ಪನೆಯಲ್ಲೇ ಕಾಲವೆಲ್ಲ ಕಳೆ; ಕನಸಿನಲ್ಲೇ ಕಾಲಕಳೆ.
  2. dream up (ಆಡುಮಾತು) (ಯೋಜನೆ ಮೊದಲಾದವನ್ನು) ಕಲ್ಪಿಸಿಕೊ; ರೂಪಿಸಿಕೊ.