(ಭೂತರೂಪ ಮತ್ತು ಭೂತಕೃದಂತ dreamt ಉಚ್ಚಾರಣೆ ಡ್ರೆಮ್ಟ್, ಯಾ dreamed ಉಚ್ಚಾರಣೆ ಡ್ರೀಮ್ಡ್ ಯಾ ಡ್ರೆಮ್ಟ್).
ಸಕರ್ಮಕ ಕ್ರಿಯಾಪದ
(ನಿದ್ರೆಯಲ್ಲಿ) ಕನಸು ಕಾಣು; ಸ್ವಪ್ನ ಕಾಣು.
ಕನಸಿನಲ್ಲಿ ನೋಡು ಯಾ ಕೇಳು: dreamt a dream ಒಂದು ಕನಸು ಕಂಡೆ. did you dream it? ಅದನ್ನು ಕನಸಿನಲ್ಲಿ ಕಂಡೆಯಾ?
(ಕನಸಿನಲ್ಲಿ ಹೇಗೋ ಹಾಗೆ) ಸಾಧ್ಯವೆಂದು ಭಾವಿಸು: I never dreamt that he would behave so badly ಅವನು ಆಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಾನೆಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ.
ಕಲ್ಪನೆಯಲ್ಲೇ ಕಾಲ ಕಳೆ; ಕೆಲಸಮಾಡದೆ ಕಾಲಹರಣ ಮಾಡು.
ಅಕರ್ಮಕ ಕ್ರಿಯಾಪದ
ಕನಸು ಕಾಣು.
(ಕನಸಿನಲ್ಲೋ ಎಂಬಂತೆ) ಭಾವಿಸು: wouldn’t dream of injuring them ಅವರಿಗೆ ಹಾನಿಮಾಡಲು ಕನಸಿನಲ್ಲಿಯೂ ಭಾವಿಸಲಿಲ್ಲ.