See also 2dream
1dream ಡ್ರೀಮ್‍
ನಾಮವಾಚಕ
  1. ಕನಸು; ಸ್ವಪ್ನ.
  2. ಕನಸಾಗುವಿಕೆ; ಸ್ವಪ್ನದರ್ಶನ; ಸ್ವಪ್ನ – ಕಾಣುವಿಕೆ, ಬೀಳುವಿಕೆ.
  3. ಕನಸಿನ ವೇಳೆ; ಸ್ವಪ್ನಕಾಲ.
  4. ಕನಸಿನ ಸ್ಥಿತಿ; ಸ್ವಪ್ನಾವಸ್ಥೆ.
  5. ಎಚ್ಚರಗನಸು; ಹಗಲುಗನಸು; ಕನವರಿಕೆ; ಎಚ್ಚರವಾಗಿರುವವನಿಗೆ ತನ್ನಷ್ಟಕ್ಕೆ ತಾನೇ ಉಂಟಾಗುವ ಸ್ವಪ್ನಾವಸ್ಥೆ.
  6. ಕನಸು; ಸ್ವಪ್ನ; ಸ್ವಪ್ನಾವಸ್ಥೆ; ಸತ್ಯದ ಯಾ ವಾಸ್ತವಿಕತೆಯ ಸರಿಯಾದ ಅರಿವಿಲ್ಲದ ಮಾನಸಿಕ ಸ್ಥಿತಿ, ಅವಸ್ಥೆ.
  7. ಹಂಬಲ; ಬಯಕೆ; ಆಕಾಂಕ್ಷೆ; ಆದರ್ಶ.
  8. ಕನಸಿನ ರಾಜ್ಯ; ಸ್ವಪ್ನರಾಜ್ಯ; ಮನೋರಾಜ್ಯ; ಅಸಂಭವ ಕಲ್ಪನೆ; ಗಾಳಿಗೋಪುರ.
  9. ಅತ್ಯಂತ ಸುಂದರ ಯಾ ಬಹಳ ಆಕರ್ಷಕ ವ್ಯಕ್ತಿ, ವಸ್ತು, ಅನುಭವ, ಮೊದಲಾದವು; ಸ್ವಪ್ನಸುಂದರ, ಸ್ವಪ್ನಪ್ರಾಯ, ಸ್ವಪ್ನಸಾಧ್ಯ – ಆದದ್ದು: my tour was like a dream ನನ್ನ ಪ್ರವಾಸ ಬಹಳ ಹಿತವಾಗಿತ್ತು. she is a perfect dream ಅವಳೊಬ್ಬ ಸರ್ವಾಂಗಸುಂದರಿ; ಸ್ವಪ್ನಸುಂದರಿ. a dream of delight ಅತ್ಯಂತ ಆನಂದದಾಯಕ.
ಪದಗುಚ್ಛ

walking dream = 1dream(5).

ನುಡಿಗಟ್ಟು

like a dream (ಆಡುಮಾತು) ಸುಲಭವಾಗಿ; ಸಲೀಸಾಗಿ; ಆರಾಮವಾಗಿ; ನಿರಾಯಾಸವಾಗಿ.