ಸಂಚಿತಶಕ್ತಿಯಿಂದಲೇ (ಯಂತ್ರ, ವಾಹನ, ಮೊದಲಾದವನ್ನು) ಸಾಗಿಸು, ಒಯ್ಯು, ಮುಂದುವರೆಸು: coast a rocket round the moon ಸಂಚಿತಶಕ್ತಿಯಿಂದಲೇ ರಾಕೆಟ್ಟನ್ನು ಚಂದ್ರನ ಸುತ್ತ ಸುತ್ತಿಸು.
ಹಿಮಗಲ್ಲಿನ ಮೇಲೆ ಜಾರುಬಂಡಿಯಲ್ಲಿ ಜಾರು ಯಾ ಜಾರುತ್ತ ಸಾಗು.
(ಬೈಸಿಕಲ್ ಮೊದಲಾದ ವಾಹನದ ವಿಷಯದಲ್ಲಿ) (ಕಾಲಿನ ಬಲ, ಎಂಜಿನ್ ಬಲ ಬಳಸದೆ) ವಾಹನ ನಡೆಸು: we cut off the car engine and coasted for a mile ಕಾರಿನ ಎಂಜಿನ್ ನಿಲ್ಲಿಸಿ ಹಾಗೆಯೇ ಒಂದು ಮೈಲಿ ದೂರ ಮುಂದುವರಿದೆವು.
(ರೂಪಕವಾಗಿ) (ಯಾವ ಪ್ರಯತ್ನವೂ ಇಲ್ಲದೆ ಬರಿಯ ಪ್ರಭಾವದಿಂದ) ಅನಾಯಾಸವಾಗಿ–ಏಳಿಗೆ ಹೊಂದು, ಪ್ರಗತಿ ಹೊಂದು, ಮುಂದುವರಿ: he coasted through the college ಆತ ಅನಾಯಾಸವಾಗಿ, ಕಷ್ಟ ಪಡದೆ ಕಾಲೇಜು ದಾಟಿದ.