See also 2coast
1coast ಕೋಸ್ಟ್‍
ನಾಮವಾಚಕ
  1. ಕಡಲ ಕರೆ; ಕಡಲ ಕಿನಾರೆ; ಕರಾವಳಿ; ಸಮುದ್ರದ–ಅಂಚು, ದಂಡೆ, ದಡ, ತೀರ.
  2. (ಅಮೆರಿಕನ್‍ ಪ್ರಯೋಗ) (ಕೆನಡಾ) (ಸ್ಕೇಟಿಂಗ್‍, ಸ್ಕೀಯಿಂಗ್‍ ಆಟಗಳ) ಹಿಮರಾಶಿಯ ಇಳಿಜಾರು; ನೀರ್ಗಲ್ಲಿನ ಇಳುಕಲು.
  3. ಹಿಮದ ರಾಶಿಯ ಇಳಿಜಾರಿನಲ್ಲಿ ಜಾರುಬಂಡಿಯಲ್ಲಿ ಜಾರುವುದು.
  4. ಇಳಿಜಾರು ಸವಾರಿ; ಇಳಕಲು ಸವಾರಿ; ಇಳಿಜಾರು ಪ್ರದೇಶದಲ್ಲಿ ಪೆಡಲನ್ನು ಒತ್ತದೆ ಬೈಸಿಕಲ್ಲಿನಲ್ಲಿ, ಯಂತ್ರವನ್ನು ಬಳಸದೆ ಮೋಟಾರು ವಾಹನದಲ್ಲಿ, ಮಾಡುವ ಸವಾರಿ.
ಪದಗುಚ್ಛ
  1. clear coast
    1. (ಓಡಾಟಕ್ಕೆ ಯಾವ ಅಡಚಣೆಯೂ ಇಲ್ಲದೆ) ಬರಿದಾಗಿರುವ ತೀರ; ಖಾಲಿ ತೀರ.
    2. (ರೂಪಕವಾಗಿ) (ವ್ಯಕ್ತಿಯ ಸಂಕಲ್ಪವನ್ನು ಸಾಧಿಸಲು) ಸಲೀಸಾದ ಹಾದಿ; ನಿರಾತಂಕವಾದ ದಾರಿ; ಅಡ್ಡಿ ಆತಂಕವಿಲ್ಲದ ಮಾರ್ಗ; ಅನಿರ್ಬಾಧಿತ ಮಾರ್ಗ.
  2. coast-to-coast ದಡದಿಂದ ದಡಕ್ಕೆ; ಒಂದು ತೀರದಿಂದ ಇನ್ನೊಂದು ತೀರದವರೆಗೆ; ದ್ವೀಪದ ಯಾ ಖಂಡದ ಅಡ್ಡಗಲಕ್ಕೂ.
  3. the Coast (ಅಮೆರಿಕನ್‍ ಪ್ರಯೋಗ) ಅಮೆರಿಕದ ಪೆಸಿಹಿಕ್‍ ಸಾಗರದ–ತೀರ, ದಂಡೆ.