See also 1coast
2coast ಕೋಸ್ಟ್‍
ಸಕರ್ಮಕ ಕ್ರಿಯಾಪದ

ಸಂಚಿತಶಕ್ತಿಯಿಂದಲೇ (ಯಂತ್ರ, ವಾಹನ, ಮೊದಲಾದವನ್ನು) ಸಾಗಿಸು, ಒಯ್ಯು, ಮುಂದುವರೆಸು: coast a rocket round the moon ಸಂಚಿತಶಕ್ತಿಯಿಂದಲೇ ರಾಕೆಟ್ಟನ್ನು ಚಂದ್ರನ ಸುತ್ತ ಸುತ್ತಿಸು.

ಅಕರ್ಮಕ ಕ್ರಿಯಾಪದ
  1. (ಹಡಗಿನ ವಿಷಯದಲ್ಲಿ) ತೀರದಲ್ಲೇ ಸಂಚರಿಸು; ಕಡಲಕರೆಯಲ್ಲಿ ಯಾನಮಾಡು.
  2. ಒಂದೇ ತೀರದ ರೇವುಗಳೊಡನೆ ವ್ಯಾಪಾರ ನಡೆಸು.
  3. ಹಿಮಗಲ್ಲಿನ ಮೇಲೆ ಜಾರುಬಂಡಿಯಲ್ಲಿ ಜಾರು ಯಾ ಜಾರುತ್ತ ಸಾಗು.
  4. (ಬೈಸಿಕಲ್‍ ಮೊದಲಾದ ವಾಹನದ ವಿಷಯದಲ್ಲಿ) (ಕಾಲಿನ ಬಲ, ಎಂಜಿನ್‍ ಬಲ ಬಳಸದೆ) ವಾಹನ ನಡೆಸು: we cut off the car engine and coasted for a mile ಕಾರಿನ ಎಂಜಿನ್‍ ನಿಲ್ಲಿಸಿ ಹಾಗೆಯೇ ಒಂದು ಮೈಲಿ ದೂರ ಮುಂದುವರಿದೆವು.
  5. (ರೂಪಕವಾಗಿ) (ಯಾವ ಪ್ರಯತ್ನವೂ ಇಲ್ಲದೆ ಬರಿಯ ಪ್ರಭಾವದಿಂದ) ಅನಾಯಾಸವಾಗಿ–ಏಳಿಗೆ ಹೊಂದು, ಪ್ರಗತಿ ಹೊಂದು, ಮುಂದುವರಿ: he coasted through the college ಆತ ಅನಾಯಾಸವಾಗಿ, ಕಷ್ಟ ಪಡದೆ ಕಾಲೇಜು ದಾಟಿದ.