See also 2accidental
1accidental ಆಕ್ಸಿಡೆನ್ಟಲ್‍
ಗುಣವಾಚಕ
  1. ಅಕಸ್ಮಾತ್ತಾದ; ಆಕಸ್ಮಿಕ(ವಾದ); ಅನಿರೀಕ್ಷಿತವಾದ.
  2. ಪ್ರಾಸಂಗಿಕ; ಆನುಷಂಗಿಕ; ಸಾಂದರ್ಭಿಕ: accidental benefits ಆನುಷಂಗಿಕ–ಪ್ರಯೋಜನಗಳು, ಫಲಗಳು.
  3. (ವಸ್ತುವಿನ ವಿಷಯದಲ್ಲಿ) ಅಮುಖ್ಯ; ಗೌಣ; ಆಗಂತುಕ; ಆನುಷಂಗಿಕ.
  4. (ಸಂಗೀತ) ಸ್ವರ ನಕ್ಷೆಯಲ್ಲಿ ಮಂದ್ರ, ಮಧ್ಯಮ, ತಾರಸ್ಥಾಯಿಗಳ ಭೇದವನ್ನು ಸೂಚಿಸುವ ಯಾ ಸೂಚಿಸಲು ಹಾಕುವ ಚಿಹ್ನೆಯ: accidental sharp ತಾರಚಿಹ್ನೆ. accidental flat ಮಂದ್ರಚಿಹ್ನೆ. accidental natural ಮಧ್ಯಮ ಚಿಹ್ನೆ.
See also 1accidental
2accidental ಆಕ್ಸಿಡೆನ್ಟಲ್‍
ನಾಮವಾಚಕ
  1. (ತರ್ಕಶಾಸ್ತ್ರ) ಗೌಣವಾದುದು; ಆಗಂತುಕ ಅಂಶ; ಆನುಷಂಗಿಕ ಗುಣ.
  2. (ಸಂಗೀತ) ತಾರ, ಮಧ್ಯಮ, ಮಂದ್ರ ಸ್ಥಾಯಿಗಳ ಭೇದವನ್ನು ಸೂಚಿಸಲು ಒಂದು ಸ್ವರದ ಹಿಂದೆ ಸ್ವರನಕ್ಷೆಯಲ್ಲಿ ರೇಖಿಸುವ ಒಂದು ಬಗೆಯ ಚಿಹ್ನೆ.
  3. (ಬಹುವಚನದಲ್ಲಿ) ಸೂರ್ಯನ ಬೆಳಕಲ್ಲದೆ ಬೇರೆ ಬಗೆಯ (ಉದಾಹರಣೆಗೆ ದೀಪ, ಬೆಂಕಿ ಮೊದಲಾದವುಗಳ) ಬೆಳಕಿನ ಪರಿಣಾಮಗಳನ್ನು ತೋರಿಸುವ ಚಿತ್ರಣ.
  4. ಗೌಣವಾದುದು; ಅಮುಖ್ಯವಾದುದು; ಅಪ್ರಧಾನವಾದುದು.