IN
ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) Indiana.

In
ಸಂಕೇತ

(ರಸಾಯನವಿಜ್ಞಾನ) indium (ಧಾತು).

See also 2in  3in  4in
1in ಇನ್‍
ಉಪಸರ್ಗ
  1. – ಅಲ್ಲಿ:
    1. ದೇಶ, ಕಾಲ, ಸಂದರ್ಭ, ಮೊದಲಾದವುಗಳ ಪರಿಮಿತಿಗಳಿಗೆ ಒಳಪಟ್ಟಿರುವುದನ್ನೋ, ಅವುಗಳಲ್ಲಿ ವ್ಯಕ್ತಿಯ ಯಾ ವಸ್ತುವಿನ ಸ್ಥಾನವನ್ನೋ ನಿರ್ದೇಶಿಸುವಲ್ಲಿ.
    2. ಖಂಡ, ದೇಶ, ದೊಡ್ಡ ಯಾ ಪ್ರಸಿದ್ಧ ನಗರಗಳ ವಿಷಯದಲ್ಲಿ: in Asia ಏಷ್ಯಾದಲ್ಲಿ, in India ಭಾರತದಲ್ಲಿ. in Mysore ಮೈಸೂರಿನಲ್ಲಿ.
    3. ಯಾವುದೇ ಪಟ್ಟಣ, ಬಡಾವಣೆ, ಹಳ್ಳಿ ಮೊದಲಾದವಲ್ಲಿ, ಸಾರ್ವಜನಿಕ ಯಾ ಖಾಸಗಿ ಪ್ರಾಮುಖ್ಯವಿರುವಲ್ಲಿ: in the house ಮನೆಯಲ್ಲಿ. in the pond ಕೊಳದಲ್ಲಿ. in the school ಶಾಲೆಯಲ್ಲಿ. in the rain ಮಳೆಯಲ್ಲಿ.
    4. ರೂಪಕವಾಗಿ: in haste ಅವಸರದಲ್ಲಿ. in sorrow ದುಃಖದಲ್ಲಿ: in his sleep ಅವನ ನಿದ್ದೆಯಲ್ಲಿ.
    5. ಉಡಿಗೆತೊಡಿಗೆ ಮೊದಲಾದವನ್ನು ಧರಿಸಿ: in muslin ಮಸ್ಲಿನ್ನಿನಲ್ಲಿ; ಮಸ್ಲಿನ್‍ ಧರಿಸಿ. in mourning ಶೋಕಸೂಚಕ ದಿರುಸಿನಲ್ಲಿ; ಸೂತಕದ ಉಡುಪಿನಲ್ಲಿ.
    6. ಗ್ರಂಥಕರ್ತನ ಹೆಸರನ್ನು ಅವನ ಕೃತಿಗಳಿಗೆ ಸಂಕೇತವಾಗಿ ಬಳಸುವಲ್ಲಿ: in Shakespeare ಷೇಕ್ಸ್‍ಪಿಯರ್‍ನಲ್ಲಿ; ಷೇಕ್ಸ್‍ಪಿಯರ್‍ನ ಕೃತಿಗಳಲ್ಲಿ.
    7. ಊನವಾದ ಅವಯವ ಮೊದಲಾದವುಗಳ ವಿಷಯದಲ್ಲಿ: blind in one eye ಒಂದು ಕಣ್ಣು ಕುರುಡಾಗಿ. week in English ಇಂಗ್ಲಿಷಿನಲ್ಲಿ ದುರ್ಬಲ. a change in the constitution ರಾಜ್ಯಾಂಗದ ಸ್ವರೂಪ, ರಚನೆ, ಸ್ಥಿತಿ, ಮೊದಲಾದವುಗಳಲ್ಲಿ ಬದಲಾವಣೆ. lacking in courage ಧೈರ್ಯ ಸಾಲದೆ.
    8. (ಭಿನ್ನಾಂಕದ ವಿಷಯದಲ್ಲಿ): not one in a hundred ನೂರರಲ್ಲಿ, ನೂರಕ್ಕೆ ಒಬ್ಬನೂ ಯಾ ಒಂದೂ ಇಲ್ಲ. one in three failed ಮೂವರಲ್ಲಿ ಒಬ್ಬನು ಅನುತ್ತೀರ್ಣನಾಗಿದ್ದಾನೆ. she is one in a million ಅವಳು ದಶಲಕ್ಷದಲ್ಲಿ ಒಬ್ಬಳು.
    9. ವ್ಯಕ್ತಿ ಯಾ ವಸ್ತು ಅಂಶವಾಗಿರುವ ಒಂದು ಸಂಸ್ಥೆಯ, ಸಮುದಾಯದ ವಿಷಯದಲ್ಲಿ: in the army ಸೈನ್ಯದಲ್ಲಿ. shares in a company ಒಂದು ಕಂಪನಿಯ ಷೇರುಗಳು.
    10. ಅಂತರ್ಗತ ವಿಷಯವಾಗಿ: there is something in what you say ನೀನು ಹೇಳುವುದರಲ್ಲಿ ಸ್ವಲ್ಪ ಸತ್ಯಾಂಶವಿದೆ.
    11. (ಆಡುಮಾತು) ಒಂದು ತರಹದ್ದು, ವಿಧದ್ದು-ಆಗಿ: the latest thing in luxury ಭೋಗವಸ್ತುಗಳಲ್ಲಿ ಅತ್ಯಾಧುನಿಕ ವಸ್ತು.
    12. ಆ ವ್ಯಕ್ತಿಯಾಗಿ: found a friend in Ajay ಅಜಯನಲ್ಲಿ ಗೆಳೆಯನನ್ನು ಕಂಡನು.
    13. (ಭೌತಿಕವಲ್ಲದ ಕ್ಷೇತ್ರಗಳ ವಿಷಯದಲ್ಲಿ) ಸಂಬಂಧಿಸಿದಂತೆ; ಸೇರಿದಂತೆ: in politics ರಾಜಕೀಯ(ಕ್ಷೇತ್ರ)ದಲ್ಲಿ. in fancy ಊಹೆಯಲ್ಲಿ. in my opinion ನನ್ನ ಅಭಿಪ್ರಾಯದಲ್ಲಿ.
    14. (ಪ್ರಾಣಿಯ ವಿಷಯದಲ್ಲಿ) ಗಬ್ಬವಾಗಿ: in calf ಗಬ್ಬವಾಗಿ.
    15. ಒಂದರ ಪ್ರಭಾವದಲ್ಲಿ; ವಶದಲ್ಲಿ: in liquor ಮದ್ಯದ ಅಮಲಿನಲ್ಲಿ; ಮತ್ತೇರಿ.
    16. (ವ್ಯಾಕರಣ) ಆದಿಯಲ್ಲಿ ಯಾ ಅಂತ್ಯದಲ್ಲಿ ಇರುವ, ಹೊಂದಿರುವ: words in ‘pro-’ ‘ಪ್ರೊ-’ ಇಂದ ಆರಂಭವಾಗುವ ಪದಗಳು. words in -ation, ‘ಏಷನ್‍’ನಿಂದ ಅಂತ್ಯವಾಗುವ ಪದಗಳು.
    17. (ಉದ್ಯೋಗ ಮೊದಲಾದವುಗಳ ವಿಷಯದಲ್ಲಿ) ಉದ್ದೇಶದಿಂದ; ಉದ್ದೇಶ ಸೂಚಕವಾಗಿ: in search of ಹುಡುಕುತ್ತ; ಹುಡುಕಿಕೊಂಡು; ಅನ್ವೇಷಿಸುತ್ತ; ಅನ್ವೇಷಣದಲ್ಲಿ. in reply to ಉತ್ತರವಾಗಿ. in honour of ಗೌರವಾರ್ಥವಾಗಿ.
    18. ಆ ರೂಪದಲ್ಲಿ; ಏರ್ಪಡಿಸಿರುವ ರೂಪದಲ್ಲಿ ಯಾ ಏರ್ಪಾಟಿನಲ್ಲಿ: falling in folds ನಿರಿಗೆ ನಿರಿಗೆಗಳಾಗಿ, ಮಡಿಕೆ ಮಡಿಕೆಯಾಗಿ – ಇಳಿಯಬಿದ್ದಿರುವ. packed in dozens ಹನ್ನೆರಡು ಹನ್ನೆರಡಾಗಿ ಕಟ್ಟಿಟ್ಟ; ಡಜನ್‍ಡಜನ್ನಾಗಿ ಕಟ್ಟಿರುವ. sold in building plots ನಿವೇಶನದ ರೂಪದಲ್ಲಿ ಮಾರಿದ.
    19. ಆ ಭಾಷೆಯಲ್ಲಿ: written in French ಹ್ರೆಂಚ್‍ ಭಾಷೆಯಲ್ಲಿ ಬರೆದಿರುವ.
    20. ಸಲಕರಣೆ ಯಾ ಸಾಮಗ್ರಿ ಯಾ ಸಾಧನವಾಗಿ: drawn in pencil ಪೆನ್ಸಿಲ್ಲಿನಿಂದ ಬರೆದ. coat in green velvet ಹಸುರು ಮಖಮಲ್ಲಿನಲ್ಲಿ ಹೊಲಿದ ಅಂಗಿ. in this way we succeeded ಈ ವಿಧಾನದಲ್ಲಿ ನಾವು ಯಶಸ್ವಿಯಾದೆವು.
    21. ಕಾಲದಲ್ಲಿ; ಸಮಯದಲ್ಲಿ: in the night ರಾತ್ರಿಯಲ್ಲಿ. in May ಮೇ ತಿಂಗಳಿನಲ್ಲಿ. in summer ಬೇಸಿಗೆಯಲ್ಲಿ. in 1976 1976ರಲ್ಲಿ. in his forties ಅವನ ನಲವತ್ತರ (ದಶಕದ)ಲ್ಲಿ. drowned in crossing the river ನದಿಯನ್ನು ದಾಟುವಲ್ಲಿ ಯಾ ದಾಟುವಾಗ ಮುಳುಗಿದ.
    22. ಕಾಲವಾದ; ಕಾಲ ಕಳೆದ ನಂತರದ: back in ten minutes ಹತ್ತು ನಿಮಿಷಗಳಲ್ಲಿ ಹಿಂದಕ್ಕೆ.
    23. ವ್ಯಕ್ತಿಯ ಸಾಮರ್ಥ್ಯಕ್ಕೊಳಪಟ್ಟಂತೆ: as far as in me lies ನನ್ನ ಕೈಲಾದ ಮಟ್ಟಿಗೂ: did not think he had it in him ಅವನಲ್ಲಿ ಆ ಸಾಮರ್ಥ್ಯ ಇದೆಯೆಂದು ಎಣಿಸಿರಲಿಲ್ಲ.
  2. (ಚಲನೆ ಯಾ ಬದಲಾವಣೆ ಹೇಳುವ ಕ್ರಿಯಾಪದಗಳೊಂದಿಗೆ) ಒಳಗೆ; ಅಲ್ಲಿ: put it in your pocket ನಿನ್ನ ಜೇಬಿನ ಒಳಗೆ ಇಟ್ಟುಕೊ. cut it in two (or half) ಅದನ್ನು ಎರಡಾಗಿ (ಯಾ ಅರ್ಧಕ್ಕೆ ಸರಿಯಾಗಿ) ಕತ್ತರಿಸು. throw it in the fire ಬೆಂಕಿಯಲ್ಲಿ ಹಾಕು. slam the door in his face ಅವನ ಮುಖಕ್ಕೆ (ಹೊಡೆಯುವಂತೆ) ಬಾಗಿಲು ಬಡಿ, ಮುಚ್ಚು.
  3. (ಗೌಣ ಕರ್ಮಪದದೊಡನೆ ಸಂಬಂಧಸೂಚಕವಾಗಿ) -ಅಲ್ಲಿ: believe in ಒಬ್ಬನನ್ನು ನಂಬು. engage in ಒಂದರಲ್ಲಿ ತೊಡಗು. rejoice in ಒಂದರಲ್ಲಿ ಸಂತೋಷಿಸು. share in ಒಂದರಲ್ಲಿ ಪಾಲುಗೊಳ್ಳು, ಸಂತೋಷಿಸು.
  4. ಕ್ರಿಯಾವಿಶೇಷಣಗಳಾದ ಪದಗುಚ್ಛಗಳನ್ನು ರಚಿಸುವಾಗ: in any case ಅಂತೂ ಇಂತೂ; ಯಾವುದೇ ಸಂದರ್ಭದಲ್ಲಿ; ಏನೇ ಆಗಲಿ. in fact ವಾಸ್ತವದಲ್ಲಿ; ವಾಸ್ತವವಾಗಿ; ವಸ್ತುತಃ. in short ಸಂಕ್ಷಿಪ್ತವಾಗಿ; ಅಡಕವಾಗಿ. in truth ಸತ್ಯವಾಗಿ; ನಿಜದಲ್ಲಿ. in vain ವ್ಯರ್ಥವಾಗಿ.
  5. (ಮಾಡುತ್ತಿರುವ ಕೆಲಸದ ವಿಷಯದಲ್ಲಿ): in pursuance of ಮಾಡುತ್ತ; ಮುಂದುವರಿಸುತ್ತ.
ಪದಗುಚ್ಛ
  1. have it in one ಯಾವುದನ್ನೇ ಮಾಡುವ ಶಕ್ತಿ, ಸಾಮರ್ಥ್ಯ ಇರು: he has in him to be an able prime minister ಅವನಲ್ಲಿ ಪ್ರಧಾನಮಂತ್ರಿಯಾಗುವ ಸಾಮರ್ಥ್ಯವಿದೆ.
  2. in itself.
  3. in so $^1$far as.
  4. in $^3$tears.
  5. in that
    1. ಆದ್ದರಿಂದ; ಅದರಿಂದ; ಆ ಕಾರಣದಿಂದ.
    2. ಅಷ್ಟರಮಟ್ಟಿಗೆ; ಆ ಮಟ್ಟಿಗೆ.
ನುಡಿಗಟ್ಟು
  1. in cash
    1. ಹಣವುಳ್ಳ; ಹಣವಂತನಾದ; ಹಣವಂದಿಗನಾದ.
    2. ನಗದಾಗಿ; ನಗದು (ಹಣದ) ರೂಪದಲ್ಲಿ.
  2. in clover.
  3. in fetters ಬಂಧನದಲ್ಲಿ; ಸೆರೆಯಲ್ಲಿ.
  4. in it (ಸಾಮಾನ್ಯವಾಗಿ ನಿಷೇಧಾರ್ಥದಲ್ಲಿ) ಸ್ಪರ್ಧೆಯಲ್ಲಿ: the race for prime ministership is expected, but I am not in it ಪ್ರಧಾನಮಂತ್ರಿ ಪದವಿಗೆ ಸ್ಪರ್ಧೆ ನಿರೀಕ್ಷಿಸಲಾಗಿದೆ, ಆದರೆ ಆ ಸ್ಪರ್ಧೆಯಲ್ಲಿ ನಾನು ಇಲ್ಲ.
  5. in order to (or that) (ಆ) ಉದ್ದೇಶದಿಂದ.
  6. leap in the $^2$dark.
  7. little in it = ನುಡಿಗಟ್ಟು \((8)\).
  8. nothing in it
    1. (ಕುದುರೆ ಜೂಜಿನಲ್ಲಿ) ಸ್ಪರ್ಧಿಯು ಇನ್ನೂ ಖಚಿತವಾಗಿ ಮೇಲುಗೈಯಾಗಿಲ್ಲ; ಗೆಲುವು ಯಾರಿಗೆ ಎಂಬುದನ್ನು ಇನ್ನೂ ಹೇಳುವಂತಿಲ್ಲ.
    2. (ಎರಡು ಅಥವಾ ಹೆಚ್ಚು ಅವಕಾಶ, ಮಾರ್ಗ, ಮೊದಲಾದವುಗಳ ನಡುವೆ) ವ್ಯತ್ಯಾಸವೇನೂ ಇಲ್ಲ.
  9. not much in it = ನುಡಿಗಟ್ಟು \((8)\).
See also 1in  3in  4in
2in ಇನ್‍
ಕ್ರಿಯಾವಿಶೇಷಣ

(ಕೆಲವು ಎಲ್ಲೆಗಳ ಒಳಗಿರುವ ಸ್ಥಾನವನ್ನು ಯಾ ಅಂಥ ಸ್ಥಾನಕ್ಕೆ ಚಲನವನ್ನು ಸೂಚಿಸುವ ಕ್ರಿಯಾವಿಶೇಷಣವಾಗಿ).

  1. (ಕೋಣೆ, ಮನೆ, ಆವರಣ, ಮೊದಲಾದವುಗಳ) ಒಳಗೆ; ಒಳಗಡೆ; ಒಳಕ್ಕೆ; – ಅಲ್ಲಿ: come in ಒಳಗೆ ಬಾ. send him in ಅವನನ್ನು ಒಳಕ್ಕೆ ಕಳುಹಿಸು. walk in (ಒಳಕ್ಕೆ) ಬಾ.
  2. ಮನೆಯಲ್ಲಿ; ಗೃಹದಲ್ಲಿ; ಮುಖ್ಯವಾಗಿ ಸ್ವಗೃಹದಲ್ಲಿ, ತನ್ನ ಮನೆಯಲ್ಲಿ: he is in ಅವನು ಮನೆಯಲ್ಲಿದ್ದಾನೆ. will be in tomorrow ನಾಳೆ ಮನೆಯಲ್ಲಿರುತ್ತಾರೆ.
  3. ಪತ್ರಿಕೆಯಲ್ಲಿ; ಪತ್ರಿಕೆಯೊಳಗೆ: put a notice in ಪತ್ರಿಕೆಯಲ್ಲಿ ಒಂದು ಪ್ರಕಟಣೆ ಹಾಕು. is my article in? ನನ್ನ ಲೇಖನ ಪತ್ರಿಕೆಯಲ್ಲಿ ಬಂದಿದೆಯೇ? looked for the word, but it was not in ಆ ಪದಕ್ಕಾಗಿ ಹುಡುಕಿದೆ, ಆದರೆ ಅದು ಪುಸ್ತಕದಲ್ಲಿರಲಿಲ್ಲ.
  4. ಒಳಗೆ; ಒಳಗಡೆ; ಒಳಭಾಗದಲ್ಲಿ: coat with the woolly side in ತುಪ್ಪಟ ಭಾಗ ಒಳಮೈಯಲ್ಲಿರುವ, ಒಳಗಡೆಯಿರುವ – ಅಂಗಿ.
  5. (ಒಂದು ವಸ್ತುವನ್ನು) ಸುತ್ತುಗಟ್ಟಿ; ಆವರಿಸಿ; ಮುತ್ತಿ; ಮುಚ್ಚಿ; ದಿಗ್ಬಂಧನದಲ್ಲಿರಿಸಿ; ಒಳಗೆ ಇಟ್ಟು: hemmed in ಬೇಲಿಯಿಂದ ಸುತ್ತುಗಟ್ಟಿ. locked in ಒಳಗೆ ಕೂಡಿ ಬೀಗ ಹಾಕಿ. walled in ಸುತ್ತ ಗೋಡೆಯಿಂದ ಆವರಿಸಿ. cover in ಒಳಗೆ ಸೇರಿಸಿ ಮುಚ್ಚಿಬಿಡು. roof in ಚಾವಣಿ ಹಾಕು; ಚಾವಣಿಯಿಂದ ಮುಚ್ಚು.
  6. (ಹ್ಯಾಷನ್‍, ಬಳಕೆ, ಕಾಲ, ಅಧಿಕಾರ, ಪರಿಣಾಮಕಾರಿಯಾದ ಯಾ ಅನುಕೂಲಕರ ಕ್ರಿಯೆ) ಇರುವಂತೆ; ಬಂದಿರುವಂತೆ; ಒದಗಿರುವಂತೆ: short skirts are in ಕಿರುಲಂಗಗಳು ಈಗ ಹ್ಯಾಷನ್‍ ಆಗಿವೆ. mangoes are in ಮಾವಿನ ಹಣ್ಣುಗಳ ಕಾಲ ಬಂದಿದೆ. the Liberals are in ಲಿಬರಲ್‍ ಪಕ್ಷದವರು ಅಧಿಕಾರಕ್ಕೆ ಬಂದಿದ್ದಾರೆ. my luck was in ನನ್ನ ಅದೃಷ್ಟದ ಕಾಲ ಒದಗಿತ್ತು.
  7. (ಬ್ಯಾಟುಗಾರ, ಚುನಾಯಿತ ಅಭ್ಯರ್ಥಿ, ಮೊದಲಾದವರಂತೆ) ವರ್ತಿಸಿ; ನಡೆದುಕೊಂಡು: before he had been five minutes in (ಕ್ರಿಕೆಟ್‍) ಅವನು ಆಟಕ್ಕಿಳಿದ ಐದು ನಿಮಿಷದೊಳಗಾಗಿ; ಅವನು ಬ್ಯಾಟು ಮಾಡತೊಡಗಿದ ಐದು ನಿಮಿಷದೊಳಗೆ.
  8. (ಮನೆಯ ಉರಿಯ ವಿಷಯದಲ್ಲಿ) ಉರಿಯುತ್ತಿರುವಂತೆ: keep the fire in ಬೆಂಕಿಯನ್ನು ಉರಿಯುತ್ತಲೇ, ಉರಿಯುವಂತೆ – ಇಟ್ಟಿರು.
  9. (ರೈಲು, ದೋಣಿ, ಕಾಲ, ಸುಗ್ಗಿ, ಕೋರಿಕೆ, ಮೊದಲಾದವುಗಳ ವಿಷಯದಲ್ಲಿ)
    1. ಬಂದಿರುವಂತೆ; ತಲುಪಿರುವಂತೆ.
    2. ಸ್ವೀಕರಿಸುವಂತೆ.
  10. ( ಉತ್ತರಪ್ರತ್ಯಯದಂತೆ) ಬಹುಜನ ಒಂದುಗೂಡಿ ದೀರ್ಘಕಾಲಿಕ ಯಾ ಸತತವಾಗಿ ಮಾಡುವ ಕಾರ್ಯಕ್ರಮವನ್ನು ಸೂಚಿಸುವಲ್ಲಿ: sit-in ಬೈಠಕ್‍ ಮುಷ್ಕರ; ಕೆಲಸ ನಿಲ್ಲಿಸಿ ಬಹುಜನ ಕುಳಿತು ನಡೆಸುವ ಮುಷ್ಕರ. teach-in ಬಹುಜನ ಒಂದುಗೂಡಿ ನಡೆಸುವ ಶಿಕ್ಷಣ.
  11. ( ಸಕರ್ಮಕ ಕ್ರಿಯಾಪದಗಳೊಡನೆ) ಭೇದಿಸಿಕೊಂಡು ಒಳಹೊಕ್ಕು, ಒಳಹೋಗಿ: burn in ಕಾಯಿಸಿ (ಇನ್ನೊಂದರೊಡನೆ) ಬೆಸೆ. cut in ಕೊರೆದು ಕೂಡಿಸು.rub in
    1. ಉಜ್ಜಿ ಒಳಹೊಗಿಸು; ಉಜ್ಜಿ ಒಳಕ್ಕೆ ಪ್ರವೇಶಿಸುವಂತೆ ಮಾಡು.
    2. (ರೂಪಕವಾಗಿ) (ಅಪ್ರಿಯವಾದದ್ದನ್ನು ಹೇಳಿ ಹೇಳಿ) ಮನಸ್ಸನ್ನು – ಚುಚ್ಚು, ಕುತ್ತು.
ಪದಗುಚ್ಛ
  1. day, week, year, etc. in, day etc. out ಪ್ರತಿದಿನ, ಪ್ರತಿವಾರ, ಪ್ರತಿವರ್ಷ; ದಿನಗಟ್ಟಲೆ, ವಾರಗಟ್ಟಲೆ, ವರ್ಷಗಟ್ಟಲೆ.
  2. in and out ಒಮ್ಮೆ ಒಳಕ್ಕೆ, ಒಮ್ಮೆ ಹೊರಕ್ಕೆ; ಒಳಗೂ ಹೊರಗೂ; ಹಿಂದಕ್ಕೂ ಮುಂದಕ್ಕೂ.
  3. in at
    1. (ಸ್ಥಳ ಮೊದಲಾದವುಗಳಲ್ಲಿ) ಇರು; ಹಾಜರಿರು.
    2. ನೆರವಾಗಿರು; ಸಹಾಯವಾಗಿರು: in at the kill ಕೊಲ್ಲುವುದರಲ್ಲಿ ನೆರವಾಗಿರು.
  4. in between ನಡುನಡುವೆ; ಮಧ್ಯೆಮಧ್ಯೆ; ನಡುವಣ ಅಂತರದಲ್ಲಿ.
  5. in with it
    1. ಅದನ್ನು ಒಳಗಿಡು.
    2. ಅದನ್ನು ಒಳಕ್ಕೆ ತೆಗೆದುಕೊಂಡು ಹೋಗು.
ನುಡಿಗಟ್ಟು
  1. have it in for (ವ್ಯಕ್ತಿಯ ಮೇಲೆ) ಸೇಡು ತೀರಿಸಿಕೊ.
  2. in and in
    1. ಹತ್ತಿರದ ನಂಟರನ್ನು ಮದುವೆಯಾಗು; ಸಈಪದ ಬಂಧುಗಳಲ್ಲೇ ವಿವಾಹ ಸಂಬಂಧ ಬೆಳೆಸು.
    2. (ತಳಿಗಳ ವಿಷಯದಲ್ಲಿ) ಅದೇ ಜಾತಿಯಲ್ಲಿ, ಒಂದೇ ಜಾತಿಯ ಪ್ರಾಣಿಗಳಲ್ಲಿ – ತಳಿ ಬೆಳಸು.
  3. in for
    1. (ಸಾಮಾನ್ಯವಾಗಿ ವಿಪತ್ತು ಮೊದಲಾದ ಅಹಿತ ಪರಿಣಾಮಗಳಿಗೆ) ಗುರಿಯಾಗಿ; ಸಿಕ್ಕಿಕೊಳ್ಳುವ ಸ್ಥಿತಿಯಲ್ಲಿ.
    2. (ಪಂದ್ಯದಲ್ಲಿ, ಬಹುಮಾನಕ್ಕಾಗಿ, ಇತ್ಯಾದಿ ಸಂದರ್ಭಗಳಲ್ಲಿ) ಸ್ಪರ್ಧೆಯಲ್ಲಿ ಸೇರಿ.
    3. (ಒಂದಕ್ಕೆ) ಕಟ್ಟುಬಿದ್ದು; ಬದ್ಧವಾಗಿ.
  4. in for a penny.
  5. in on (ಆಡುಮಾತು) (ಗುಟ್ಟು, ಸಮಾಚಾರ, ಮೊದಲಾದವನ್ನು) ಅರಿತು.
  6. $^1$throw in.
  7. (well) in with (ಇನ್ನೊಬ್ಬರೊಡನೆ) ಸ್ನೇಹಭಾವದಿಂದ; ಮೈತ್ರಿಯಿಂದ.
See also 1in  2in  4in
3in ಇನ್‍
ಗುಣವಾಚಕ
  1. ಅಂತ; ಒಳಗಿನ; ಒಳಗಣ; ಒಳಗಿರುವ.
  2. ರಹಸ್ಯದ; ಗುಪ್ತ; ಗೂಢ; ಗಹನ.
  3. ವರಿಷ್ಠ ವೃತ್ತಗಳಲ್ಲಿ ಪ್ರಚಲಿತವಾಗಿರುವ.
  4. ಹ್ಯಾಷನ್ನಿನ; ನಾಜೂಕಾಗಿರುವ: the in thing to do ಮಾಡಬೇಕಾಗಿರುವ ಫ್ಯಾಷನ್ನಿನ ಕೆಲಸ.
See also 1in  2in  3in
4in ಇನ್‍
ನಾಮವಾಚಕ
  1. (ಬಹುವಚನದಲ್ಲಿ) ಅಧಿಕಾರಪಕ್ಷ; ಅಧಿಕಾರದಲ್ಲಿರುವ ರಾಜಕೀಯ ಪಕ್ಷ: a matter of ins versus outs ಅಧಿಕಾರಪಕ್ಷ ಮತ್ತು ಅಧಿಕಾರೇತರ ಪಕ್ಷಗಳ ನಡುವಣ ಕಲಹದ ವಿಷಯ.
  2. (ಕ್ರೀಡೆ) ಸರದಿ ತಂಡ; ಆಟದ ಸರದಿ ಯಾರದೋ ಆ ಆಟಗಾರರ ತಂಡ: the circle within which the ins stand ಆಟದ ಸರದಿಯವರು ನಿಂತುಕೊಂಡಿರುವ ವೃತ್ತ.
  3. ಪ್ರಭಾವಶಾಲಿಯ ಪರಿಚಯ ಯಾ ಪ್ರಭಾವ: he has got an in with influential people ಅವನಿಗೆ ಪ್ರಭಾವಶಾಲಿ ವ್ಯಕ್ತಿಗಳ ಪರಿಚಯವಿದೆ.
ಪದಗುಚ್ಛ

ins and outs:

  1. ತಿರುವುಮುರುವುಗಳು; ಒಂದು ರಸ್ತೆಯಲ್ಲಿ ಸಿಗುವ ಬಳಸು ಬಳಸಾದ ವಕ್ರವಕ್ರವಾದ ತಿರುವುಮುರುವುಗಳು.
  2. (ರೂಪಕವಾಗಿ) (ಒಂದು ಕಾರ್ಯಕ್ರಮದಲ್ಲಿ ಅನುಸರಿಸುವ, ನೇರವಲ್ಲದ) ವಕ್ರಮಾರ್ಗ.
  3. (ರೂಪಕವಾಗಿ) (ಯಾವುದೋ ವಿಷಯ, ಕಾರ್ಯಕ್ರಮ, ಮೊದಲಾದವುಗಳ) ಎಲ್ಲ – ವಿವರಗಳು, ವಿಚಾರಗಳು; ಸಮಸ್ತವೂ; ಸಕಲವೂ; ಒಳಹೊರಗುಗಳು.