penny ಪೆನಿ
ನಾಮವಾಚಕ
(ಬಹುವಚನ ಮೊತ್ತವಾಗಿ ಬೆಲೆ ಹೇಳುವಲ್ಲಿ pence ಉಚ್ಚಾರಣೆ– ಪೆನ್ಸ್‍; ನಾಣ್ಯಗಳು ಎಂಬ
  1. ಪೆನ್ನಿ; (ಹಿಂದೆ) ಷಿಲಿಂಗಿನ $\frac{ 1}{ 12}$ರಷ್ಟು ಬೆಲೆಯ (ಈಗ ದಶಮಾಂಶ ಪದ್ಧತಿಯಲ್ಲಿ $\frac{ 1}{ 10}$ರಷ್ಟು ಬೆಲೆಯ, ಕಂಚಿನ) ಇಂಗ್ಲಿಷ್‍ ನಾಣ್ಯ: gave me my change in pennies ನನಗೆ ಕೊಡಬೇಕಾದ ಚಿಲ್ಲರೆಯನ್ನವನು ಪೆನ್ನಿಗಳಲ್ಲಿ (ಪೆನ್ನಿ ನಾಣ್ಯದಲ್ಲಿ) ಕೊಟ್ಟ.
  2. ಪೆನ್ನಿ; ಪೌಂಡಿನ ನೂರನೇ ಒಂದು ಭಾಗಕ್ಕೆ ಸಮನಾದ ಬ್ರಿಟಿಷ್‍ ನಾಣ್ಯ ಮತ್ತು ಹಣ ಘಟಕ.
  3. (ಅಮೆರಿಕನ್‍ ಪ್ರಯೋಗ, ಆಡುಮಾತು) ಒಂದು ಸೆಂಟು ನಾಣ್ಯ.
  4. (ಬೈಬ್‍ಲ್‍) = denarius.
ಪದಗುಚ್ಛ
  1. a bad penny worth ನಷ್ಟದ ವ್ಯಾಪಾರ.
  2. a good penny worth ಲಾಭದ ವ್ಯಾಪಾರ.
  3. a penny for your thoughts ನಿನ್ನ ಮನಸ್ಸಿನಲ್ಲಿರುವುದನ್ನು ತಿಳಿಸಿದರೆ, ಒಂದು ಪೆನ್ನಿ ಕೊಡುತ್ತೇನೆ; ಎಲ್ಲಿ, ನಿನ್ನ ಮನಸ್ಸಿನಲ್ಲಿ ಏನಿದೆಯೋ ಹೇಳು, ಒಂದು ಪೆನ್ನಿ ಕೊಡುತ್ತೇನೆ (ಗಂಭೀರ ಚಿಂತನೆಯಲ್ಲಿ ಮುಳುಗಿರುವವನು ಅವನ ಮನಸ್ಸಿನಲ್ಲಿರುವುದನ್ನು ತಿಳಿಸಲು ಕೋರುವ ಮಾತಾಗಿ).
  4. a penny plain and two pence coloured ಒಕ್ಕಾಣಿ ರೂಪ, ದುಗ್ಗಾಣಿ ಸಿಂಗಾರ; ಬೆಲೆ ನೋಡಿದರೆ ಒಂದು ಪೆನ್ನಿ, ಬಣ್ಣ ಮಾತ್ರ ಎರಡು ಪೆನ್ನಿ.
  5. a pretty penny ಸುಮಾರು ಹಣ; ದಂಡಿ ಹಣ; ಭಾರಿ ಹಣ, ಮೊತ್ತ.
  6. in for a penny, in for a pound (ಕೈಗೊಂಡ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಹೇಳುವ ಮಾತಾಗಿ) ಕಾಸು ಕೂಡಿಸಲು ಹೊರಟಲ್ಲಿ, ಕೋಟಿಯನ್ನು ಮುಟ್ಟಿಸಲೇಬೇಕು; ಪ್ರಾರಂಭಿಸಿದ್ದನ್ನು ಏನೇ ಆದರೂ ಕೊನೆ ಮುಟ್ಟಿಸಲೇಬೇಕು.
  7. like a bad penny ಬೇಡದಿದ್ದಾಗ ಪದೇ ಪದೇ ಹಿಂದಿರುಗಿ ಬರುವ; ಬೇಡವೆನಿಸಿದಾಗ ಮತ್ತೆ ಮತ್ತೆ ವಾಪಾಸಾಗುವ.
  8. not a penny worth ಚಿಕ್ಕಾಸಿನಷ್ಟೂ ಬೆಲೆಯಿಲ್ಲ; ಒಂದು ಕುರುಡು ಕಾಸಿನಷ್ಟೂ ಇಲ್ಲ; ಅಲ್ಪಸ್ವಲ್ಪವೂ ಇಲ್ಲ.
  9. pennies from heaven ಅನಿರೀಕ್ಷಿತ ಲಾಭಗಳು.
  10. penny wise and pound foolish ಕಾಸಿಗೆ ಜಾಣ ಕೋಟಿಗೆ ಕೋಣ; ಸಣ್ಣ ವಿಷಯಗಳಲ್ಲಿ ಜಾಣ, ಮಹತ್ವದ ವಿಷಯಗಳಲ್ಲಿ ಕೋಣ, ದಡ್ಡ; ಕಾಸಿನ ವಿಷಯದಲ್ಲಿ ಹುಷಾರು, ರೂಪಾಯಿ ವಿಷಯದಲ್ಲಿ ಧಾರಾಳಿ, ದುಂದುಗಾರ.
  11. take care of pence the pound will take care of themselves ಕಾಸಿನ ಕಾಳಜಿ ಮಾಡಿದರೆ ರೂಪಾಯಿನ ಚಿಂತೆ ಇರುವುದಿಲ್ಲ; ಪುಡಿಗಾಸನ್ನು ನೋಡಿಕೊ, ಗಂಟು ತಾನಾಗಿ ಕೊಡುತ್ತದೆ.
  12. the penny drops (ಆಡುಮಾತು) ಕೊನೆಗೆ ಒಬ್ಬನು ಅರಿತು ಕೊಳ್ಳಲಾರಂಭಿಸುತ್ತಾನೆ.
  13. turn an honest penny ಪ್ರಾಮಾಣಿಕತೆಯಿಂದ ಹಣ, ಕಾಸು ಸಂಪಾದಿಸು.
  14. two a penny ಕಾಸಿಗೆರಡು; ಅಗ್ಗವಾಗಿ ಸಿಕ್ಕಿದರೂ ಪ್ರಯೋಜನವಿಲ್ಲದ್ದು.