See also 2-er  3-er  4-er  5-er
1-er -ಅರ್‍
ಉತ್ತರಪ್ರತ್ಯಯ

ನಾಮವಾಚಕಗಳಿಂದ, ಗುಣವಾಚಕಗಳಿಂದ ಯಾ ಕ್ರಿಯಾಪದಗಳಿಂದ ಹುಟ್ಟುವ ಕರ್ತ್ರರ್ಥಕ ನಾಮಪದಗಳ ತುದಿಯಲ್ಲಿ ಸೇರುವ ಉತ್ತರಪ್ರತ್ಯಯ:

  1. ಒಂದು ಕೆಲಸ ಮಾಡುವ ಮನುಷ್ಯ ಯಾ ಪ್ರಾಣಿ ಎಂಬ ಅರ್ಥದ ನಾಮವಾಚಕಗಳಲ್ಲಿ: maker, player, reporter, teacher.
  2. ಉಪಕರಣ, ಯಂತ್ರ, ಘಟನೆ, ಕ್ರಿಯೆ, ಮೊದಲಾದ ಅರ್ಥದ ನಾಮವಾಚಕಗಳಲ್ಲಿ: poker, paper-cutter, deodorizer, eye-opener.
  3. ಒಂದು ವಸ್ತುವಿಗೆ ಯಾ ವಿಷಯಕ್ಕೆ ಸಂಬಂಧಪಟ್ಟವನು ಎಂಬ ಅರ್ಥದ ನಾಮವಾಚಕಗಳಲ್ಲಿ: hatter, geographer, grocer.
  4. ಸ್ಥಳ ಮೊದಲಾದವುಗಳಿಗೆ ಸೇರಿದವನು ಎಂಬ ಅರ್ಥದ ನಾಮವಾಚಕಗಳಲ್ಲಿ: villager, Londoner, Britisher.
  5. ಬೇರೆ ರೀತಿಯಲ್ಲಿ ಕೊನೆಗೊಳ್ಳುವ ಪದಗಳ ಅಶಿಷ್ಟವಾದ ಅಪಭ್ರಂಶ ರೂಪಗಳಲ್ಲಿ: rugger, soccer, footer.
  6. ವಿಶಿಷ್ಟ ಗುಣದ ಯಾ ಸಂದರ್ಭದ ವ್ಯಕ್ತಿ ಯಾ ವಸ್ತು ಎಂಬುದನ್ನು ಸೂಚಿಸುವ ನಾಮವಾಚಕಗಳಲ್ಲಿ: sixfooter, teetotaller, fiver, tenner.
See also 1-er  3-er  4-er  5-er
2-er -ಅರ್‍
ಉತ್ತರಪ್ರತ್ಯಯ

ಹಳೆಯ ಹ್ರೆಂಚಿನಿಂದಲೂ ಇತರ ವಿವಿಧ ಮೂಲಗಳಿಂದಲೂ ಹುಟ್ಟಿದ ನಾಮವಾಚಕಗಳ ಮತ್ತು ಗುಣವಾಚಕಗಳ ತುದಿಯಲ್ಲಿನ ಉತ್ತರಪ್ರತ್ಯಯ:

  1. ಲ್ಯಾಟಿನ್‍ ಭಾಷೆಯ -arem ಉತ್ತರಪ್ರತ್ಯಯದಿಂದ ರೂಪಾಂತರಗೊಂಡ ಹಳೆಯ ಹ್ರೆಂಚಿನ ಮತ್ತು ಮಧ್ಯಕಾಲೀನ ಇಂಗ್ಲಿಷಿನ -er ಉತ್ತರಪ್ರತ್ಯಯವು ಆಮೇಲೆ -ar ಎಂಬ ರೂಪ ತಳೆದು, ಪರಿಣಾಮವಾಗಿ ಹುಟ್ಟಿರುವ
    1. ನಾಮವಾಚಕಗಳಲ್ಲಿ: scholar, pillar.
    2. ಗುಣವಾಚಕಗಳಲ್ಲಿ: scaler, lunar, solar.
  2. ಲ್ಯಾಟಿನ್‍ ಭಾಷೆಯ ಗುಣವಾಚಕಗಳಲ್ಲಿ -arius ಮತ್ತು -arium ಉತ್ತರಪ್ರತ್ಯಯಗಳಿಂದ ರೂಪಾಂತರಗೊಂಡು:
    1. ಆಂಗ್ಲೋಹ್ರೆಂಚ್‍ ಮತ್ತು ಮಧ್ಯಂತರ ಇಂಗ್ಲಿಷ್‍ನಲ್ಲಿ -er ರೂಪತಾಳಿ, ಪರಿಣಾಮವಾಗಿ ಹುಟ್ಟಿರುವ ನಾಮವಾಚಕಗಳಲ್ಲಿ: butler, carpenter, danger.
    2. ಇಂಗ್ಲಿಷಿನಲ್ಲಿ -ary ರೂಪತಾಳಿ ಪರಿಣಾಮವಾಗಿ ಹುಟ್ಟಿರುವ ನಾಮವಾಚಕಗಳಲ್ಲಿ: actuary, adversary, dictionary.
    3. ಗುಣವಾಚಕಗಳಲ್ಲಿ: arbitrary, contrary, primary.
  3. ಲ್ಯಾಟಿನ್‍ ಭಾಷೆಯ -atura, -atoram ಉತ್ತರಪ್ರತ್ಯಯಗಳು ಹಳೆಯ ಹ್ರೆಂಚ್‍ನಲ್ಲಿ -eure ಆಗಿ ಇಂಗ್ಲಿಷ್‍ನಲ್ಲಿ
    1. -er ರೂಪಕ್ಕೆ ಬದಲಾಯಿಸಿ, ಇದರಿಂದ ಹುಟ್ಟಿರುವ ನಾಮವಾಚಕಗಳಲ್ಲಿ: boarder, counter.
    2. -ure ರೂಪಕ್ಕೆ ಬದಲಾಯಿಸಿ, ಹೀಗೆ ಹುಟ್ಟಿರುವ ನಾಮವಾಚಕಗಳಲ್ಲಿ: figure, aperture, composure, scripture, failure, pleasure, seizure, treasure.
  4. -er ಉತ್ತರಪ್ರತ್ಯಯವು ರೂಪಾಂತರಗೊಂಡು -or ಆಗಿರುವ ನಾಮವಾಚಕಗಳು: actor, confessor, doctor, donor, emperor, vendor, tailor, warrior, administrator, creditor, bachelor, chancellor, sailor, mirror.
See also 1-er  2-er  4-er  5-er
3-er -ಅರ್‍
ಉತ್ತರಪ್ರತ್ಯಯ

‘ತರ’ ಭಾವದ ಗುಣವಾಚಕಗಳ ಮತ್ತು ಕ್ರಿಯಾವಿಶೇಷಣಗಳ ಕೊನೆಯಲ್ಲಿನ ಉತ್ತರಪ್ರತ್ಯಯ

  1. ಈಗ ಕೇವಲ ಕಾವ್ಯದಲ್ಲಿ, ಶಿಷ್ಟ ಗದ್ಯಶೈಲಿಯಲ್ಲಿ ಮಾತ್ರ ಏಕೋಚ್ಚಾರಾಂಶವುಳ್ಳ ಪದಗಳಲ್ಲಿ ಮತ್ತು -y, -ly, -le, -er, -owಗಳಲ್ಲಿ ಕೊನೆಗೊಳ್ಳುವ ಎರಡು ಉಚ್ಚಾರಾಂಶಗಳ ಪದಗಳಲ್ಲಿ ಮತ್ತು (ಮುಖ್ಯವಾಗಿ ಕಡೆಯ ಉಚ್ಚಾರಾಂಶದ ಮೇಲೆ ಒತ್ತಡ ಬೀಳುವ) ಇನ್ನು ಕೆಲವು ಪದಗಳಲ್ಲಿ: gayer, lovelier, abler, narrower.
  2. (ಮುಖ್ಯವಾಗಿ) ಗುಣವಾಚಕದಂತೆಯೇ ರೂಪವುಳ್ಳ ಕ್ರಿಯಾವಿಶೇಷಣಗಳಲ್ಲಿ: harder, faster.
  3. ಜರ್ಮನ್‍ ಮೊದಲಾದ ಭಾಷೆಗಳಲ್ಲಿ ಕಂಡುಬರುವ ಸ್ವರವ್ಯತ್ಯಾಸವು ಈಗ elder, better ಗಳಲ್ಲಿ ಮಾತ್ರ ಉಳಿದಿದೆ.
See also 1-er  2-er  3-er  5-er
4-er -ಅರ್‍
ಉತ್ತರಪ್ರತ್ಯಯ
  1. ಯಾವುದೇ ಕ್ರಿಯೆಯ ಒಂದು ನಿದರ್ಶನ ಎಂಬ ಅರ್ಥದಲ್ಲಿ ಕ್ರಿಯಾಪದದ ಅಂತ್ಯದಲ್ಲಿ ಸೇರಿಸುವ ಉತ್ತರಪ್ರತ್ಯಯ: dinner, supper.
  2. (ನ್ಯಾಯಶಾಸ್ತ್ರ) ಯಾವುದೇ ನ್ಯಾಯಸಮ್ಮತವಾದ ಕ್ರಿಯೆಯನ್ನು ಕಾರ್ಯಗತಗೊಳಿಸುವ ಪತ್ರ ಎಂಬ ಅರ್ಥದಲ್ಲಿ ಕ್ರಿಯಾಂತ್ಯದಲ್ಲಿ ಸೇರಿಸುವ ಪ್ರತ್ಯಯ: disclaimer.
See also 1-er  2-er  3-er  4-er
5-er -ಅರ್‍
ಉತ್ತರಪ್ರತ್ಯಯ

ಇತರ ಕ್ರಿಯಾಪದಗಳಿಂದ ಹುಟ್ಟುವ ಆವರ್ತನಾರ್ಥಕ ಕ್ರಿಯಾಪದಗಳ ತುದಿಯಲ್ಲಿನ ಉತ್ತರಪ್ರತ್ಯಯ:

  1. wend ಪದದಿಂದ wander, wave ಪದದಿಂದ waver.
  2. ಧ್ವನಿಯ ಅನುಕರಣದಿಂದ ಹುಟ್ಟುವ ಕ್ರಿಯಾಪದಗಳ ತುದಿಯಲ್ಲಿನ ಉತ್ತರಪ್ರತ್ಯಯ: twitter, batter, flicker, flutter.