See also 1-er  3-er  4-er  5-er
2-er -ಅರ್‍
ಉತ್ತರಪ್ರತ್ಯಯ

ಹಳೆಯ ಹ್ರೆಂಚಿನಿಂದಲೂ ಇತರ ವಿವಿಧ ಮೂಲಗಳಿಂದಲೂ ಹುಟ್ಟಿದ ನಾಮವಾಚಕಗಳ ಮತ್ತು ಗುಣವಾಚಕಗಳ ತುದಿಯಲ್ಲಿನ ಉತ್ತರಪ್ರತ್ಯಯ:

  1. ಲ್ಯಾಟಿನ್‍ ಭಾಷೆಯ -arem ಉತ್ತರಪ್ರತ್ಯಯದಿಂದ ರೂಪಾಂತರಗೊಂಡ ಹಳೆಯ ಹ್ರೆಂಚಿನ ಮತ್ತು ಮಧ್ಯಕಾಲೀನ ಇಂಗ್ಲಿಷಿನ -er ಉತ್ತರಪ್ರತ್ಯಯವು ಆಮೇಲೆ -ar ಎಂಬ ರೂಪ ತಳೆದು, ಪರಿಣಾಮವಾಗಿ ಹುಟ್ಟಿರುವ
    1. ನಾಮವಾಚಕಗಳಲ್ಲಿ: scholar, pillar.
    2. ಗುಣವಾಚಕಗಳಲ್ಲಿ: scaler, lunar, solar.
  2. ಲ್ಯಾಟಿನ್‍ ಭಾಷೆಯ ಗುಣವಾಚಕಗಳಲ್ಲಿ -arius ಮತ್ತು -arium ಉತ್ತರಪ್ರತ್ಯಯಗಳಿಂದ ರೂಪಾಂತರಗೊಂಡು:
    1. ಆಂಗ್ಲೋಹ್ರೆಂಚ್‍ ಮತ್ತು ಮಧ್ಯಂತರ ಇಂಗ್ಲಿಷ್‍ನಲ್ಲಿ -er ರೂಪತಾಳಿ, ಪರಿಣಾಮವಾಗಿ ಹುಟ್ಟಿರುವ ನಾಮವಾಚಕಗಳಲ್ಲಿ: butler, carpenter, danger.
    2. ಇಂಗ್ಲಿಷಿನಲ್ಲಿ -ary ರೂಪತಾಳಿ ಪರಿಣಾಮವಾಗಿ ಹುಟ್ಟಿರುವ ನಾಮವಾಚಕಗಳಲ್ಲಿ: actuary, adversary, dictionary.
    3. ಗುಣವಾಚಕಗಳಲ್ಲಿ: arbitrary, contrary, primary.
  3. ಲ್ಯಾಟಿನ್‍ ಭಾಷೆಯ -atura, -atoram ಉತ್ತರಪ್ರತ್ಯಯಗಳು ಹಳೆಯ ಹ್ರೆಂಚ್‍ನಲ್ಲಿ -eure ಆಗಿ ಇಂಗ್ಲಿಷ್‍ನಲ್ಲಿ
    1. -er ರೂಪಕ್ಕೆ ಬದಲಾಯಿಸಿ, ಇದರಿಂದ ಹುಟ್ಟಿರುವ ನಾಮವಾಚಕಗಳಲ್ಲಿ: boarder, counter.
    2. -ure ರೂಪಕ್ಕೆ ಬದಲಾಯಿಸಿ, ಹೀಗೆ ಹುಟ್ಟಿರುವ ನಾಮವಾಚಕಗಳಲ್ಲಿ: figure, aperture, composure, scripture, failure, pleasure, seizure, treasure.
  4. -er ಉತ್ತರಪ್ರತ್ಯಯವು ರೂಪಾಂತರಗೊಂಡು -or ಆಗಿರುವ ನಾಮವಾಚಕಗಳು: actor, confessor, doctor, donor, emperor, vendor, tailor, warrior, administrator, creditor, bachelor, chancellor, sailor, mirror.