See also 1stick
2stick ಸ್ಟಿಕ್‍
ನಾಮವಾಚಕ
  1. ಕೋಲು; (ಮುರಿದ ಯಾ ಕತ್ತರಿಸಿದ) ಚಿಕ್ಕ, ತೆಳ್ಳನೆಯ ಮರದ ಕೊಂಬೆ.
  2. (ಊರಿಕೊಂಡು ನಡೆಯಲು ಯಾ ಆಯುಧವಾಗಿ ಬಳಸಲು, ಇದನ್ನೇ ಸಮರಿ ಮಾಡಿದ) ದೊಣ್ಣೆ; ಕೋಲು; ದಂಡ; ಬೆತ್ತ.
  3. (ಸೌದೆಯಾಗಿ ಬಳಸುವ) ಕಟ್ಟಿಗೆ; ಕಡ್ಡಿ; ಪುರುಳೆ.
  4. (ಗಿಡಕ್ಕೆ, ಬಳ್ಳಿಗೆ, ಊರೆಯಾಗಿ ನಿಲ್ಲಿಸುವ) ಊರೆಗೋಲು; ಊರೆಗಳು; ಊರೆಮರ.
  5. (ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುವ) ಚೂಪುಕಡ್ಡಿ ಯಾ ಕಡ್ಡಿಯಾಕಾರದ ವಸ್ತು: cocktail stick ಕಾಕ್‍ಟೇಲ್‍ (ಕಲಕುವ) ಕಡ್ಡಿ.
  6. (ಆಡುಮಾತು)
    1. (ಮನೆಯ ಕಟ್ಟಡದಲ್ಲಿ ಬಳಸಿರುವ) ಮರಮುಟ್ಟು (ಕಂಬ ಮೊದಲಾದವು): the house was pulled down and not a stick left standing ಆ ಮನೆಯನ್ನು ಕೆಡವಿ ಹಾಕಲಾಯಿತು, ಒಂದು ಕಂಬ, ಕವೆ ಸಹ ನಿಂತಿಲ್ಲ.
    2. (ಮನೆಯ) ಪೀಠೋಪಕರಣ: he has only a few sticks of furniture ಅವನಲ್ಲಿ ಕೆಲವೇ ಕೆಲವು ಪೀಠೋಪಕರಣಗಳಿವೆ, ಅಷ್ಟೆ.
  7. (ಹಾಕಿ, ಪೋಲೋ, ಮೊದಲಾದ ಆಟಗಳಲ್ಲಿ)
    1. (ಚೆಂಡನ್ನು ಹೊಡೆಯಲು ಬಳಸುವ) ದಾಂಡು.
    2. (ಬಹುವಚನದಲ್ಲಿ) (ಹಾಕಿ ಆಟದಲ್ಲಿ) ದಾಂಡನ್ನು ಭುಜಕ್ಕಿಂತ, ಹೆಗಲಿಗಿಂತ ಮೇಲಕ್ಕೆತ್ತುವುದು ಯಾ ಹಾಗೆ ಎತ್ತುವ ತಪ್ಪು.
  8. (ಯಂತ್ರದ, ವಾಹನದ) ಗೇರು; ಗಿಯರು – ದಂಡ, ಕೋಲು, ಕಂಬಿ.
  9. (ಸಂಗೀತ ನಿರ್ದೇಶಕನ) ತಾಳದಂಡ.
  10. (ನಡುನಡುವೆ ಇರುವ ಅಡ್ಡಪಟ್ಟಿಗಳನ್ನು ಈ ಕಡೆ ಆ ಕಡೆ ಸರಿಸಿ, ಅಗಲವೋ ಕಿರಿದೋ ಮಾಡಬಹುದಾದ, ಅಚ್ಚುಮೊಳೆಗಳ ಖಾನೆಗಳನ್ನೊಳಗೊಂಡ ಅಚ್ಚು ಮೊಳೆ ಜೋಡಿಸುವವನ ಹಿಡಿಗಡ್ಡಿ, ಹಿಡಿಕೆಗಂಬಿ.
  11. (ಬಹುವಚನದಲ್ಲಿ) (ಆಡುಮಾತು)
    1. (ಅಭುಕ್ತ ಮೂಲೆಯಲ್ಲಿರುವ) ಹಳ್ಳಿಗಾಡು; ಗ್ರಾಮಾಂತರ ಪ್ರದೇಶ.
    2. ಅಡ್ಡಿ ಆತಂಕಗಳು; ಪ್ರತಿಬಂಧಕಗಳು; ಅಡೆತಡೆಗಳು.
    3. (ಆಸ್ಟ್ರೇಲಿಯ) (ಅಶಿಷ್ಟ) ಹುಟ್‍ಬಾಲ್‍ ಆಟದ ಗೋಲುಕಂಬಗಳು.
  12. (ನೌಕಾಯಾನ, ಹಾಸ್ಯ ಪ್ರಯೋಗ) ಕೂವೆಗಂಬ ಯಾ ಅಡ್ಡದೂಲ.
  13. (ಆಡುಮಾತು)
    1. ಕಡ್ಡಿ; ಕಡ್ಡಿ ಪೈಲ್ವಾನ್‍; ನರಪೇತಲ; ಬಲಹೀನ; ದುರ್ಬಲ.
    2. ಕಟ್ಟಿಗೆ; ಕೊರಡು; ಕಾಷ್ಠ; ಶುದ್ಧ ದಡ್ಡ.
    3. (ಸ್ನೇಹಪರತೆ, ಸೌಹಾರ್ದ, ಸೌಜನ್ಯ, ಮೊದಲಾದ ಸಹವಾಸಯೋಗ್ಯ ಗುಣಗಳಿಲ್ಲದ) ಕೊರಡು; ಒರಟ; ಒಡ್ಡ; ಮೊರಡ: a funny old stick ವಿಚಿತ್ರ ಮುದಿಗೊರಡು.
  14. (ಅರಗು, ಕ್ಷೌರದ ಸಾಬಊನು, ಬಣ್ಣ, ಚಾಕಲೇಟ್‍, ಡೈನಮೈಟ್‍, ಮೊದಲಾದವುಗಳ) ಕಡ್ಡಿ.
  15. (ವಿಮಾನದಿಂದ ಪುಂಖಾನುಪುಂಖವಾಗಿ, ಎಡೆಬಿಡದೆ ಸುರಿಸಿದ ಬಾಂಬಉ, ಇಳಿಸಿದ ಪ್ಯಾರಷೂಟ್‍ ಪಡೆ, ಮೊದಲಾದವುಗಳ) ಸಾಲು; ಶ್ರೇಣಿ; ಸರಣಿ.
  16. (ಆಡುಮಾತು) ಕಟು ಟೀಕೆ; ತೀವ್ರ ಖಂಡನೆ; ಛೀಮಾರಿ; ವಾಗ್ದಂಡನೆ: took a lot of stick ತೀವ್ರ ಖಂಡನೆಗೆ ಗುರಿಯಾದ.
    1. (ಯಾವುದೇ ಬಗೆಯ) ಶಿಕ್ಷೆ; ದಂಡನೆ.
    2. (ಶಿಕ್ಷೆಯಾಗಿ ಕೊಡುವ) ಬೆತ್ತದೇಟು; ದೊಣ್ಣೆಯ ಪೆಟ್ಟು (ರೂಪಕವಾಗಿ ಸಹ).
ಪದಗುಚ್ಛ
  1. as $^3$cross as two sticks.
  2. $^3$hop the stick.
  3. in $^2$cleft stick.
  4. the $^1$dirty end of the stick.
  5. (the) stick = 2stick\((17)\).
  6. up sticks (ಅಶಿಷ್ಟ) ಬೇರೆಲ್ಲಾದರೂ – ಇರು, ವಾಸಿಸು, ಹೋಗು; ಗುಳೆ ಹೋಗು; ವಲಸೆ ಹೋಗು.