See also 1cross  2cross
3cross ಕ್ರಾಸ್‍
ಗುಣವಾಚಕ
  1. ಅಡ್ಡ; ಅಡ್ಡಹಾಯುವ; ಅಡ್ಡಲಾಗಿರುವ.
  2. (ಪರಸ್ಪರ) ಕತ್ತರಿಸುವ; ಛೇದಿಸುವ; ವಿಭಾಗಿಸುವ.
  3. (ಉದ್ದೇಶ ಮೊದಲಾದವಕ್ಕೆ) ಅಡ್ಡ; ವಿರುದ್ಧ; ಪ್ರತಿಕೂಲ; ಹೊಂದಿಕೊಳ್ಳದ.
  4. (ಆಡುಮಾತು) ಸಿಡುಕಿನ; ಮುಂಗೋಪದ; ರೇಗುವ ಸ್ವಭಾವದ.
  5. ವಿವಿಧ ಯಾ ವಿಭಿನ್ನ ಅಂಶಗಳಿಂದ ಕೂಡಿದ; ಬೇರೆಬೇರೆಯ ವರ್ಗಗಳು, ಪಂಗಡಗಳು, ಪರಿಸ್ಥಿತಿಗಳು ಮೊದಲಾದವನ್ನು ಒಳಗೊಂಡ: cross-cultural perspective ವಿಭಿನ್ನ ಸಂಸ್ಕೃತಿಗಳ ಸಮಗ್ರನೋಟ.
  6. (ಅಶಿಷ್ಟ) ಮೋಸದ; ಮೋಸದಿಂದ ಗಳಿಸಿದ.
  7. ಬೆರಕೆಯ; ಮಿಶ್ರತಳಿಯ.
  8. (ಕ್ರಿಕೆಟ್‍) (ಬ್ಯಾಟಿನ ವಿಷಯದಲ್ಲಿ) ಅಡ್ಡಡ್ಡವಾಗಿ ಹಿಡಿದ; ಓರೆಯಾಗಿಟ್ಟುಕೊಂಡಿರುವ: playing with a straight bat is more likely to protect your wicket than playing with a cross bat ಬ್ಯಾಟನ್ನು ಓರೆಯಾಗಿಟ್ಟುಕೊಂಡು ಆಡುವುದಕ್ಕಿಂತ ನೇರವಾಗಿ ಅದನ್ನು ಹಿಡಿದು ಆಡಿದರೆ ವಿಕೆಟ್ಟು ಉಳಿದುಕೊಳ್ಳುವ ಸಂಭವ ಹೆಚ್ಚು.
ನುಡಿಗಟ್ಟು
  1. as cross as two sticks (ಆಡುಮಾತು) ಸಿಡುಕಿನ; ಅಸಮಾಧಾನದಿಂದ ಕೂಡಿದ.
  2. at cross purposes (ವ್ಯಕ್ತಿಗಳ ಯಾ ಗುಂಪುಗಳ ವಿಷಯದಲ್ಲಿ)
    1. (ಪರಸ್ಪರ) ತಪ್ಪಭಿಪ್ರಾಯದ; ತಪ್ಪಾಗಿ ಅರ್ಥಮಾಡಿಕೊಂಡಿರುವ.
    2. (ಪರಸ್ಪರ) ವಿರುದ್ಧವಾದ; ವಿರುದ್ಧೋದ್ದೇಶಗಳ; ವಿರುದ್ಧ ಗುರಿಗಳ.
  3. to be cross with one ಒಬ್ಬನೊಡನೆ ಹೊಂದಿಕೊಳ್ಳದಿರು; ಒಬ್ಬನ ಮೇಲೆ ಅಸಮಾಧಾನ ಮಾಡಿಕೊ.