See also 2stick
1stick ಸ್ಟಿಕ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ stuck ಉಚ್ಚಾರಣೆ– ಸ್ಟಕ್‍).
ಸಕರ್ಮಕ ಕ್ರಿಯಾಪದ
  1. (ವಸ್ತು ಯಾ ಅದರ ತುದಿಯನ್ನು) ಚುಚ್ಚು; ಒಳಹೋಗಿಸು; ತೂರಿಸು: stuck a finger in my eye ನನ್ನ ಕಣ್ಣಿನ ಒಳಕ್ಕೆ ಬೆರಳು ಚುಚ್ಚಿದ. stick the bayonet through the breast ಎದೆಯೊಳಕ್ಕೆ ಸನೀನು ಹೊಗಿಸು, ತೂರಿಸು. stick a pin through it ಅದರೊಳಕ್ಕೆ ಗುಂಡುಸೂಜಿ ಚುಚ್ಚು.
  2. (ಮೊನಚು ತುದಿಯಿಂದ) ಚುಚ್ಚು; ಇರಿ; ತಿವಿ: I will pull out my knife and stick you ನನ್ನ ಚಾಕು ಹಿರಿದು ನಿನ್ನನ್ನು ಇರಿಯುತ್ತೇನೆ. stick the spurs in the horse’s sides ರಿಕಾಪಿನ ಮೊನೆಯಿಂದ ಕುದುರೆಯ ಪಕ್ಕೆಗಳನ್ನು ತಿವಿ.
  3. (ಮೊನೆಯನ್ನು) ನಾಟು; ನೆಡು; ಚುಚ್ಚು : cake stuck (over) with almonds ಬಾದಾಮಿ ಬೀಜ ನಾಟಿದ ಕೇಕು. pin cushion stuck full of pins ತುಂಬ ಗುಂಡುಸೂಜಿ ಚುಚ್ಚಿದ ಸೂಜಿಮೆತ್ತೆ.
  4. (ಸಲಾಕಿ ಮೊದಲಾದವುಗಳ ಮೊನೆಯ ಮೇಲೆ ಯಾ ಮೊನೆಯ ಮೇಲೆ ಹೇಗೋ ಹಾಗೆ) ಚುಚ್ಚಿಡು; ಸಿಕ್ಕಿಸು; ಸಿಕ್ಕಿಸಿಡು; ನೆಡು; ನಾಟಿಸು ( ಅಕರ್ಮಕ ಕ್ರಿಯಾಪದ ಸಹ): the heads of the beheaded were stuck on the spikes of the gateway ದಿಡ್ಡಿ ಬಾಗಿಲಿನ ಸಲಾಕಿಗಳ ಮೊನೆಗಳ ಮೇಲೆ ಶಿರಚ್ಛೇದ ಹೊಂದಿದವರ ತಲೆಗಳನ್ನು ಸಿಕ್ಕಿಸಲಾಗಿತ್ತು. the arrows stuck in the target ಆ ಬಾಣಗಳು ಗುರಿಹಲಗೆಯಲ್ಲಿ ನಾಟಿಕೊಂಡುವು. a piece of needlework with the needle stuck in it ಸೂಜಿಯನ್ನು ಸಿಕ್ಕಿಸಿದ ಕಸೂತಿ ಬಟ್ಟೆ. stick the feather in your cap ಆ ಗರಿಯನ್ನು ನಿನ್ನ ಟೋಪಿಗೆ ಸಿಕ್ಕಿಸಿಕೊ. stick the rose in the buttonhole ಗುಂಡಿಯ ತೂತಿಗೆ ಗುಲಾಬಿ ಹೂವನ್ನು ಸಿಕ್ಕಿಸಿಕೊ. stick pen behind one’s ear ಕಿವಿಯ ಹಿಂದೆ ಪೆನ್ನನ್ನು ಸಿಕ್ಕಿಸಿಕೊ.
  5. (ಮುಖ್ಯವಾಗಿ ಅವಸರದಲ್ಲಿ) ಅಡ್ಡಾದಿಡ್ಡಿಯಾಗಿ ಹಾಕು; ಅಲ್ಲಿ ಇಲ್ಲಿ ಇಡು: stick a few commas in it ಕೆಲವು ಅಲ್ಪ ವಿರಾಮ ಚಿಹ್ನೆಗಳನ್ನು ಅಲ್ಲಲ್ಲಿ ಹಾಕು, ಸೇರಿಸು. just stick it on the table, (or down anywhere) ಇದನ್ನು ಸುಮ್ಮನೆ ಮೇಜಿನ ಮೇಲೆ (ಯಾ ಎಲ್ಲೋ ಒಂದು ಕಡೆ) ಇಡು, ಹಾಕು: stick your cap on ನಿನ್ನ ಟೋಪಿಯನ್ನು ತಲೆಯ ಮೇಲೆ ಹಾಕಿಕೊ, ಇಟ್ಟುಕೊ. stick them in your pocket ಅವುಗಳನ್ನು ನಿನ್ನ ಜೇಬಿನಲ್ಲಿಟ್ಟುಕೊ.
  6. (ಅಂಟು ಮೊದಲಾದವುಗಳಿಂದ) ಅಂಟಿಸು; ಹತ್ತಿಸು; ಹಚ್ಚು; ಕಚ್ಚಿಸು: stick label ಲೇಬಲ್ಲನ್ನು, ಚೀಟಿಯನ್ನು – ಅಂಟಿಸು, ಹಚ್ಚು. stick a postage stamp ಅಂಚೆಯ ಸ್ಟಾಂಪನ್ನು ಅಂಟಿಸು, ಹಚ್ಚು. stick it on the bill ಭಿತ್ತಿಪತ್ರದ ಮೇಲೆ ಅದನ್ನು ಅಂಟಿಸು.
  7. (ಆಡುಮಾತು) ತಾಳಿಕೊ; ತಡೆದುಕೊ; ಸಹಿಸು; ಸಹಿಸಿಕೊ: I cannot stick that worthless fellow ಆ ಅಯೋಗ್ಯನನ್ನು ನಾನು ಸಹಿಸಲಾರೆ. I couldn’t stick it any longer ಇನ್ನು (ಮುಂದೆ) ಅದನ್ನು ತಡೆದುಕೊಳ್ಳಲು, ಸಹಿಸಿಕೊಂಡಿರಲು, ನನಗೆ ಸಾಧ್ಯವಿಲ್ಲ.
  8. (ವ್ಯಕ್ತಿಯ ಮೇಲೆ ಯಾವುದಕ್ಕೇ ಆಗಲಿ) ದೋಷಾರೋಪಣೆ ಮಾಡು; ತಪ್ಪು ಹೊರಿಸು.
  9. (ಗಿಡಕ್ಕೆ, ಬಳ್ಳಿಗೆ ಊರೆಯಾಗಿ) ಕೋಲನ್ನು – ಕಟ್ಟು, ನೆಡು.
ಅಕರ್ಮಕ ಕ್ರಿಯಾಪದ
  1. ಅಂಟಿಕೊ; ಕಚ್ಚಿಕೊ; ಹತ್ತಿಕೊ:this envelope will not stick ಈ ಲಕೋಟೆಯು ಅಂಟಿಕೊಳ್ಳುವುದಿಲ್ಲ. sticks like a bur ಅಂಟುಪುರಳೆಯಂತೆ ಅಂಟಿಕೊಳ್ಳುತ್ತದೆ.
  2. ಉಳಿ; ಉಳಿದುಕೊಂಡಿರು; ಕಚ್ಚಿಕೊಂಡಿರು; ಅಂಟಿಕೊಂಡಿರು: the nickname stuck to her ಆ ಅಡ್ಡಹೆಸರೇ ಅವಳಿಗೆ ಅಂಟಿಕೊಂಡಿತು. the memory of it still sticks in my mind ಅದರ ನೆನಪು ನನ್ನ ಮನಸ್ಸಿನಲ್ಲಿ ಇನ್ನೂ ಉಳಿದುಕೊಂಡೇ ಇದೆ.
  3. (ಆಡುಮಾತು) ಇರುವ ಜಾಗಕ್ಕೆ ಅಂಟಿಕೊಂಡಿರು; (ಇದ್ದ ಜಾಗವನ್ನು ಬಿಡದೆ) ಇದ್ದಲ್ಲೇ ಇರು; ಕಚ್ಚಿಕೊಂಡಿರು: are you going to stick indoors all day? ಹಗಲೆಲ್ಲ ಮನೆಯೊಳಗೇ ಕಚ್ಚಿಕೊಂಡಿರುತ್ತೀಯಾ?
  4. (ಆಡುಮಾತು) (ದೂರು, ಅಪವಾದ, ಆಪಾದನೆ, ಇವುಗಳ ವಿಷಯದಲ್ಲಿ) ಕಚ್ಚಿಕೊ; ಅಂಟಿಕೊ; ನಿಜವಾದದ್ದೆಂದು ತೋರು: they could not make the charges stick ಆ ಆರೋಪಗಳನ್ನು ಸಾಧಾರವೆಂದು, ವಿಶ್ವಾಸಾರ್ಹವೆಂದು ತೋರಿಸಲು ಅವರಿಗೆ ಸಾಧ್ಯವಾಗಲಿಲ್ಲ.
  5. (ಘರ್ಷಣ, ವಾಯುಬದ್ಧತೆ, ಅಡ್ಡಿ ಯಾ ಪ್ರತಿಬಂಧಕ, ಮೊದಲಾದವುಗಳಿಂದ) ಕಚ್ಚಿಕೊಂಡುಬಿಟ್ಟಿರು; ಸಿಕ್ಕಿ (ಹಾಕಿ)ಕೊ; ಚಲಿಸದಂತೆ ಯಾ ಕಾರ್ಯ ಮಾಡದಂತೆ ಆಗು: the boat is stuck on sand bank ಈ ದೋಣಿ ಮರಳುದಿಣ್ಣೆಯಲ್ಲಿ ಹೂತುಹೋಗಿದೆ. this drawer is stuck ಈ ಅರೆ ಸಿಕ್ಕಿಕೊಂಡಿದೆ. I somehow got through ten lines but then (got) stuck ಹತ್ತು ಸಾಲುಗಳನ್ನು ಹೇಗೋ ಮುಗಿಸಿದೆ, ಆದರೆ ಆಮೇಲೆ ಗಂಟಲು ಸಿಕ್ಕಿಕೊಂಡಿತು.
ಪದಗುಚ್ಛ
  1. be stuck for
    1. (ಉಪಾಯ, ಆಲೋಚನೆ, ಪದ, ಮೊದಲಾದವು) ಹೊಳೆಯದಿರು; ತೋಚದಿರು.
    2. (ಯಾವುದೇ ಒಂದು) ಬೇಕಾಗಿರು; ಅಗತ್ಯವಾಗಿರು; ಅಪೇಕ್ಷಿತವಾಗಿರು.
  2. be stuck on (ಆಡುಮಾತು) (ಯಾವುದರದೇ) ಮೋಹಕ್ಕೆ ಬಿದ್ದಿರು; ಮೋಹ ಹಿಡಿದಿರು; ಗೀಳು – ಹತ್ತಿರು, ಹಿಡಿದಿರು.
  3. be stuck with (ಆಡುಮಾತು) ಸಿಕ್ಕಿಬಿದ್ದಿರು; ಬಿಡಿಸಿಕೊಳ್ಳಲು, ಕಡಿದುಕೊಳ್ಳಲು, ಪಾರಾಗಲು – ಆಗದಿರು; ಶಾಶ್ವತವಾಗಿ ಸಿಕ್ಕಿಕೊಂಡಿರು; ಕಾಯಂ ಆಗಿ ಸಂಬಂಧ ಹೊಂದಿರು.
  4. get stuck in (or into)
    1. (ಕೆಲಸ ಮೊದಲಾದವುಗಳಲ್ಲಿ) ಸಿಕ್ಕಿ(ಹಾಕಿ)ಕೊಂಡಿರು; ಅಂಟಿಕೊಂಡಿರು.
    2. (ಅಶಿಷ್ಟ) ಶ್ರದ್ಧಾಸಕ್ತಿಗಳಿಂದ (ಕೆಲಸ ಮೊದಲಾದವನ್ನು) ಪ್ರಾರಂಭಿಸು; ಶುರು ಮಾಡು; (ಅವುಗಳಿಗೆ) ತೊಡಗು, ಕೈ ಹಚ್ಚು.
  5. stick around (ಆಡುಮಾತು) (ಅದೇ ಸ್ಥಳದಲ್ಲೇ) ಉಳಿದಿರು; ಬಳಸಾಡುತ್ತಿರು; ಸುಳಿದಾಡುತ್ತಿರು; ಅಲ್ಲಲ್ಲೇ ಅಡ್ಡಾಡುತ್ತಿರು.
  6. stick at it (ಒಂದನ್ನು) ಪಟ್ಟಾಗಿ ಹಿಡಿದಿರು; ಬಿಡದಿರು; ಬಿಡದೆ ಪ್ರಯತ್ನಿಸು.
  7. stick at nothing ಯಾವುದನ್ನೂ ಗಣಿಸದಿರು; ಯಾವುದಕ್ಕೂ ಹಿಂಜರಿಯದಿರು; (ಮುಖ್ಯವಾಗಿ) ಯಾವುದೇ ಆಕ್ಷೇಪ, ಅನ್ಯಾಯ, ಮೊದಲಾದವುಗಳಿಗೆ – ಹೇಸದಿರು, ಅಳುಕದಿರು, ಅಂಜದಿರು.
  8. stick by (or with or to)
    1. (ವ್ಯಕ್ತಿ , ಉದ್ದೇಶ, ತತ್ತ್ವ, ಮೊದಲಾದವುಗಳಿಗೆ) ನಿಷ್ಠೆಯಿಂದಿರು; ಅಂಟಿಕೊಂಡಿರು; ಕಟ್ಟುಬಿದ್ದಿರು; ಬದ್ಧನಾಗಿರು.
    2. ನೆರೆಯಲ್ಲೇ, ಹತ್ತಿರವೇ, ಸಮೀಪದಲ್ಲಿಯೇ – ಇರು.
  9. stick’em up! (ಆಡುಮಾತು) (ಶರಣಾಗು, ಪ್ರತಿಭಟಿಸಬೇಡ ಎಂದು ಸೂಚಿಸುವ ಮಾತಾಗಿ) ಕೈ(ಗಳನ್ನು) ಎತ್ತು!
  10. stick fast
    1. ಭದ್ರವಾಗಿ ಅಂಟಿಕೊಂಡಿರು; ಬಿಗಿಯಾಗಿ ಕಚ್ಚಿಕೊಂಡಿರು (ರೂಪಕವಾಗಿ ಸಹ).
    2. (ಒಂದು ಪರಿಸ್ಥಿತಿಯಲ್ಲಿ ಯಾ ಸ್ಥಳದಲ್ಲಿ) ಸಿಕ್ಕಿರು; ಸಿಕ್ಕಿ – ಹಾಕಿಕೊಂಡಿರು, ಬಿದ್ದಿರು.
  11. stick in one’s gizzard.
  12. stick in one’s throat
    1. ಗಂಟಲಲ್ಲೇ ಸಿಕ್ಕಿಹಾಕಿಕೊ; ನುಂಗಲಾಗದಿರು.
    2. ಗಂಟಲಲ್ಲಿ ಸಿಕ್ಕಿಕೊ; ಮಾತೇ ಹೊರಡದಿರು; ಬಾಯಿ ಕಟ್ಟಿ ಹೋಗು; ನಾಲಿಗೆ ನಿಂತು ಹೋಗು.
    3. ತನ್ನ ತತ್ತ್ವ, ಆದರ್ಶ, ಧ್ಯೇಯಗಳಿಗೆ – ವಿರುದ್ಧವಾಗಿರು.
    4. ಒಪ್ಪಿಕೊಳ್ಳಲು ಯಾ ಸ್ವೀಕರಿಸಲು – ಕಷ್ಟವಾಗಿರು, ಅಸಾಧ್ಯವಾಗಿರು.
  13. stick it on (ಅಶಿಷ್ಟ)
    1. ಭಾರೀ ಆರೋಪಗಳನ್ನು ಮಾಡು; ತೀವ್ರ ಆರೋಪಣೆಗಳನ್ನು ಹೊರಿಸು.
    2. ಅತಿಯಾಗಿ ಉತ್ಪ್ರೇಕ್ಷಿಸು; ಬರೀ ಉತ್ಪ್ರೇಕ್ಷೆಯ ಯಾ ಉತ್ಪ್ರೇಕ್ಷೆಯಿಂದ ತುಂಬಿದ ಕಥೆ ಹೇಳು.
  14. stick it out (ಆಡುಮಾತು) (ಜವಾಬ್ದಾರಿ, ಹೊಣೆ, ಮೊದಲಾದವನ್ನು) ಕೊನೆಯವರೆಗೂ – ಹೊರು, ಬಿಡದಿರು, ಸಹಿಸಿಕೊಂಡಿರು.
  15. stick one’s neck (or chin) out ಅಪಾಯಕ್ಕೆ ತಲೆ ಕೊಡು; (ಧೈರ್ಯವಾಗಿ ಮಾತಾಡುವ ಯಾ ಕೆಲಸ ಮಾಡುವ ಮೂಲಕ) ಟೀಕೆಗೆ, ಖಂಡನೆಗೆ, ಅಪಾಯಕ್ಕೆ – ಒಳಗಾಗು, ಈಡಾಗು.
  16. stick out
    1. ಹೊರಚಾಚು; ಚಾಚಿಕೊಳ್ಳುವಂತೆ ಮಾಡು: stick out your chest ಎದೆಯನ್ನು ಚಾಚು. stuck his tongue out ತನ್ನ ನಾಲಿಗೆಯನ್ನು ಹೊರಚಾಚಿದ.
    2. ಚಾಚಿರು; ಚಾಚಿಕೊಂಡಿರು: his stomach sticks out ಅವನ ಹೊಟ್ಟೆ ಚಾಚಿಕೊಂಡಿದೆ.
  17. stick out a mile (ಆಡುಮಾತು) ಸುಸ್ಪಷ್ಟವಾಗಿರು; ಎದ್ದು ಕಾಣು; ಒಂದು ಮೈಲಿ ದೂರಕ್ಕೆ ಕಾಣು.
  18. stick out for (ತಳೆದ ನಿಲುವು, ಮಂಡಿಸಿದ ಬೇಡಿಕೆ, ಪದಾರ್ಥದ ಬೆಲೆ, ಮೊದಲಾದವನ್ನು) ಬಿಡದಿರು; ಹಿಡಿದಿರು; ಸಡಿಲಿಸದಿರು; ಬದಲಾಯಿಸಲು ಯಾ ಕಡಿಮೆಗೊಳಿಸಲು ಒಪ್ಪದಿರು.
  19. stick out like a sore thumb (ಆಡುಮಾತು) (ಉಗುರು ಸುತ್ತಾಗಿರುವ ಹೆಬ್ಬೆಟ್ಟಿನಂತೆ) ಅಸಂಗತವಾಗಿರುವಂತೆ, ಅಸಮಂಜಸವಾಗಿ ಎದ್ದುಕಾಣು.
  20. stick pigs
    1. (ಕಾಡು) ಹಂದಿ ಬೇಟೆಯಾಡು; ಕುದುರೆ ಸವಾರಿ ಮಾಡುತ್ತಾ ಕಾಡುಹಂದಿಗಳನ್ನು ಈಟಿಯಿಂದ ಇರಿ, ಬೇಟೆಯಾಡು.
    2. (ಕಸಾಯಿಖಾನೆಯವನ ವಿಷಯದಲ್ಲಿ) ಮಾಂಸಕ್ಕಾಗಿ ಹಂದಿಗಳನ್ನು – ಕಡಿ, ಕತ್ತರಿಸು, ಕೊಲ್ಲು.
  21. stick to
    1. ಬಳಿಯಲ್ಲಿರು; ಹತ್ತಿರವಿರು; ಸಮೀಪದಲ್ಲಿರು.
    2. ಅಂಟಿಕೊಂಡಿರು; ಕಚ್ಚಿಕೊಂಡಿರು; ಹತ್ತಿಕೊಂಡಿರು.
    3. (ಗೆಳೆಯ, ಕೊಟ್ಟ ವಾಗ್ದಾನ, ಆಡಿದ ಮಾತು, ಮೊದಲಾದವಕ್ಕೆ) ಕಟ್ಟುಬಿದ್ದಿರು; ನಿಷ್ಠವಾಗಿರು; ಬದ್ಧವಾಗಿರು.
    4. (ವಿಷಯ ಮೊದಲಾದವಕ್ಕೆ) ಅಂಟಿಕೊಂಡಿರು; ಬಿಟ್ಟು ಹೋಗದಿರು; ವಿಷಯಾಂತರಿಸದಿರು: stick to the point ಪ್ರಸ್ತುತ ವಿಷಯವನ್ನು ಬಿಟ್ಟು ಹೋಗದಿರು; ಅನ್ಯಪ್ರಸ್ತಾಪ ಮಾಡಬೇಡ; ವಿಷಯಾಂತರ ಮಾಡಬೇಡ; ಅದರಿಂದ ಅತ್ತಿತ್ತ ಹೋಗದಿರು.
  22. stick to a person’s fingers (ಆಡುಮಾತು) (ದುಡ್ಡಿನ ವಿಷಯದಲ್ಲಿ) (ವ್ಯಕ್ತಿಯ) ಕೈಗೆ ಅಂಟಿಕೊ; (ವ್ಯಕ್ತಿಯಿಂದ) ದಸ್ತಾಗು, ದುರುಪಯೋಗವಾಗು.
  23. stick to business (ಬೇರೆಡೆ ಗಮನ ಹರಿಸದೆ) ಪ್ರಸ್ತುತ ಕೆಲಸ ಗಮನಿಸು; ಮಾಡುತ್ತಿರುವ ಯಾ ಮಾಡಬೇಕಾದ ಕೆಲಸದ ಮೇಲೆ ಕಣ್ಣಿಡು, ಗಮನ ನೆಡು.
  24. stick together (ಆಡುಮಾತು)
    1. ಒಂದಾಗಿರು; ಒಗ್ಗಟ್ಟಿನಿಂದಿರು.
    2. ಪರಸ್ಪರ ನಿಷ್ಠೆಯಿಂದಿರು.
  25. stick to it ಪಟ್ಟು ಬಿಡದಿರು; ಭದ್ರವಾಗಿ ಅಂಟಿಕೊಂಡಿರು; ಬಿಡದೆ ಪ್ರಯತ್ನಿಸು; ಕಚ್ಚಿಕೊಂಡು ಸಾಧಿಸು.
  26. stick to one’s $^1$guns.
  27. stick to one’s $^6$last.
  28. stick up
    1. ನೆಟ್ಟಗೆ ನಿಲ್ಲು ಯಾ ನಿಂತಿರು; ನಿಮಿರು; ನಿಮಿರಿರು: his hair sticks straight up ಅವನ ಕೂದಲು ನೆಟ್ಟಗೆ ನಿಂತಿದೆ.
    2. ನೆಟ್ಟಗೆ – ನಿಲ್ಲಿಸು, ನಿಲ್ಲುವಂತೆ ಮಾಡು: Negro ladies stick up their hair ನೀಗ್ರೋ ಹೆಂಗಸರು ತಮ್ಮ ತಲೆಗೂದಲನ್ನು ನೆಟ್ಟಗೆ ನಿಲ್ಲಿಸಿಕೊಳ್ಳುತ್ತಾರೆ.
    3. ಎದ್ದುಕೊಂಡಿರು; ಚಾಚಿಕೊಂಡಿರು.
    4. ಲಂಬವಾಗಿರುವ ಯಾ ನೆಟ್ಟಗಿರುವ ತಲಕ್ಕೆ – ಕಟ್ಟು, ತೂಗಹಾಕು, ಬಿಗಿಸು:stick up a target ಗುರಿಹಲಗೆಯನ್ನು ನೆಟ್ಟಗಿರುವ ಕಂಬಕ್ಕೆ ಕಟ್ಟು.
    5. (ಆಡುಮಾತು) ಬಂದೂಕು ತೋರಿಸಿ – ಬೆದರಿಸು, ಹೆದರಿಸು.
    6. (ಆಡುಮಾತು) ಬಂದೂಕು ತೋರಿಸಿ – ಸುಲಿ(ಗೆ ಮಾಡು), ದರೋಡೆ ಮಾಡು; ಲೂಟಿ, ಕೊಳ್ಳೆ – ಹೊಡೆ.
  29. stick up for (ವ್ಯಕ್ತಿ , ಪಕ್ಷ, ವಾದ, ಧ್ಯೇಯ, ಮೊದಲಾದವನ್ನು) ಎತ್ತಿ ಹಿಡಿ; ಬೆಂಬಲಿಸು; ಸಮರ್ಥಿಸು; (ಅವುಗಳ ಪರವಾಗಿ) ವಾದಿಸು.
  30. stick up to
    1. (ಯಾರಿಗೇ ಆಗಲಿ) ಮಣಿಯದಿರು; ತಲೆ ಬಾಗದಿರು; ಸೊಪ್ಪು ಹಾಕದಿರು.
    2. (ಯಾರನ್ನೇ ಯಾ ಯಾವುದನ್ನೇ) ಎದುರಿಸು; (ಯಾವುದರದೇ ವಿರುದ್ಧ) ಪ್ರತಿಭಟಿಸು.
  31. stick with (ಆಡುಮಾತು) (ಯಾರಿಗೇ, ಯಾವುದಕ್ಕೇ)
    1. ಅಂಟಿಕೊಂಡಿರು; ಸಂಬಂಧ ಹೊಂದಿರು; ಸಂಪರ್ಕವಿಟ್ಟುಕೊಂಡಿರು.
    2. ನಿಷ್ಠವಾಗಿರು; ಒಡನಿರು.