See also 2seal  3seal  4seal
1seal ಸೀಲ್‍
ನಾಮವಾಚಕ

ಸೀಲ್‍; ನೀರುನಾಯಿ; ಈಜಲು ನೆರವಾಗುವ ಮೋಟುಗಾಲುಗಳು, ತುಪು ಳು ಯಾ ಮುಳ್ಳುಗೂದಲು ಮತ್ತು (ಮೇಲ್ದರ್ಜೆಯ ಪ್ರಾಣಿಗಳಂತೆ) ದುಂಡುಮುಖ ಉಳ್ಳ, ಹೋಸಿಡೀ ಯಾ ಓಟರೈಡೀ ವಂಶದ, ಸಸ್ತನಿ ವರ್ಗದ, ಮೀನು ತಿನ್ನುವ ಉಭಯಚರಿ ಕಡಲಪ್ರಾಣಿ.

ಪದಗುಚ್ಛ
  1. common seal (ಹೋಸಿಡೀ ವಂಶದ, ಸಣ್ಣಗಾತ್ರದ, ಕಣ್ಣಿಗೆ ಕಾಣುವಂತಹ ಹೊರಗಿವಿಗಳಿಲ್ಲದ) ಸಾಮಾನ್ಯ ಸೀಲು.
  2. eared seal ಕಿವಿಯುಳ್ಳ ಸೀಲು; ಹೋಸಿಡೀ ವಂಶದ ಸೀಲುಗಳಿಗೆ ಭಿನ್ನವಾಗಿ, ದೊಡ್ಡಗಾತ್ರ ಹಾಗೂ ಕಣ್ಣಿಗೆ ಕಾಣುವಂತಹ ಹೊರಗಿವಿಗಳುಳ್ಳ, ಕಡಲಸಿಂಹ, ಕಡಲಾನೆ ಮತ್ತು ತುಪ್ಪುಳು – ಸೀಲ್‍ಗಳನ್ನೊಳಗೊಂಡ, ಓಟರೈಡೀ ವಂಶದ ಸೀಲ್‍ ಜಾತಿ.